ವಿನೂತನ ವಿನ್ಯಾಸದ ಮಹೀಂದ್ರಾ ಬೊಲೆರೊ ನಿಯೋ ಕಾರಿನ ವಿಡಿಯೋ ರಿವ್ಯೂ

ಹೊಸ ಎಮಿಷನ್ ಜಾರಿ ನಂತರ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಎಸ್‌ಯುವಿ ಸರಣಿಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಮಹೀಂದ್ರಾ ಕಂಪನಿಯು ಟಿಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಕಂಪನಿಯು ಟಿವಿಯುವಿ300 ಫೇಸ್‌ಲಿಫ್ಟ್ ಮಾದರಿಯನ್ನೇ ವಿನೂತನ ವಿನ್ಯಾಸದೊಂದಿಗೆ ಬೊಲೆರೊ ನಿಯೋ ಹೆಸರಿನಲ್ಲಿ ಬಿಡುಗಡೆ ಮಾಡಿದೆ.

ಬೊಲೆರೊ ನಿಯೋ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಮತ್ತು ಥಾರ್‌ ಕಾರುಗಳಲ್ಲಿ ಕೆಲವು ಪ್ರಮುಖ ತಾಂತ್ರಿಕ ಅಂಶಗಳ ಸಮಿಶ್ರಣದೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ. ಹೊಸ ಕಾರು ಬಿಡುಗಡೆಗೊಂಡ ನಂತರ ಕಾರಿನ ಕಾರ್ಯಕ್ಷಮತೆ ಪರೀಕ್ಷಿಸಲು ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದ ಮಹೀಂದ್ರಾ ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿತ್ತು.

7 ಸೀಟರ್ ಸೌಲಭ್ಯದೊಂದಿಗೆ ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರು ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಕೇವಲ ಸಿಂಗಲ್ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ನೀಡಲಾಗಿದೆ.

ವಿನೂತನ ವಿನ್ಯಾಸದ ಮಹೀಂದ್ರಾ ಬೊಲೆರೊ ನಿಯೋ ಕಾರಿನ ವಿಡಿಯೋ ರಿವ್ಯೂ

ಬೊಲೆರೊ ನಿಯೋ ಎಸ್‌ಯುವಿಯಲ್ಲಿನ 1.5 ಲೀಟರ್ ಎಂಹ್ವಾಕ್ ಟರ್ಬೋ ಡೀಸೆಲ್ ಎಂಜಿನ್ ಮಾದರಿಯು 3,750 ಆರ್‌ಪಿಎಂನಲ್ಲಿ 100 ಬಿಹೆಚ್‌ಪಿ ಪವರ್ ಹಾಗೂ 2,250 ಆರ್‌ಪಿಎಂನಲ್ಲಿ 260 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಸ್ಟಾಂಡರ್ಡ್ ಆಗಿ ಹೊಸ ಕಾರಿನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಮಹೀಂದ್ರಾ ಕಂಪನಿಯು ಸದ್ಯಕ್ಕೆ ಹೊಸ ಕಾರಿನ ಎನ್4 (ರೂ.8.48 ಲಕ್ಷ), ಎನ್8(ರೂ.9.48 ಲಕ್ಷ) ಮತ್ತು ಎನ್10(ರೂ.9.99 ಲಕ್ಷ) ಬೆಲೆಗಳನ್ನು ಮಾತ್ರ ಘೋಷಿಸಿದ್ದು, ಶೀಘ್ರದಲ್ಲೇ ಎನ್10 ಆಪ್ಷನ್ ಮಾದರಿಯ ಬೆಲೆಯನ್ನು ಘೋಷಣೆ ಮಾಡಲಿದೆ.

Most Read Articles

Kannada
English summary
Mahindra Bolero Neo Frist Drive Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X