XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ದೇಶದ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ Mahindra and Mahindra ಪ್ಯಾರಾಲಂಪಿಕ್ ಪದಕ ವಿಜೇತ ಮಹಿಳಾ ಕ್ರೀಡಾಪಟುರವರ ಮನವಿಗೆ ಸ್ಪಂದಿಸಿ ಹೊಸ XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನವನ್ನು ಅಳವಡಿಸಿದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ದೀಪಾ ಮಲಿಕ್ ಪ್ಯಾರಾಲಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಕೆಲವು ದಿನಗಳ ಹಿಂದೆ Mahindra and Mahindra, Tata Motors ಹಾಗೂ MG ಕಂಪನಿಗಳನ್ನು ಟ್ಯಾಗ್ ಮಾಡಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಈ ವೀಡಿಯೊದಲ್ಲಿ ವಿಶೇಷ ಚೇತನರು ಸುಲಭವಾಗಿ ಕಾರು ಹತ್ತಲು ಹಾಗೂ ಇಳಿಯಲು ಸಾಧ್ಯವಾಗುತಂತಹ ಆಸನವೊಂದನ್ನು ಒದಗಿಸುವಂತೆ ಹೇಳಿದ್ದರು.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ಈ ರೀತಿಯ ಸೌಲಭ್ಯವನ್ನು ಒದಗಿಸಿದರೆ ಮಾತ್ರ ನಾನು ನಿಮ್ಮ ಕಂಪನಿಯ ಕಾರನ್ನು ಖರೀದಿಸುತ್ತೇನೆ. ಪ್ರತಿ ಬಾರಿ ಕಾರು ಹತ್ತಲು ಹಾಗೂ ಇಳಿಯಲು ನನಗೆ ಕಷ್ಟವಾಗುತ್ತಿದೆ. ದಯವಿಟ್ಟು ವಿಶೇಷ ಆಸನ ಸೌಲಭ್ಯವಿರುವ ಕಾರ್ ಅನ್ನು ವಿನ್ಯಾಸಗೊಳಿಸಿ ಎಂದು ಅವರು ಮನವಿ ಮಾಡಿದ್ದರು. ದೀಪಾ ಮಲಿಕ್ ರವರ ಮನವಿಗೆ ಸ್ಪಂದಿಸಿರುವ Mahindra ಕಂಪನಿಯು ತನ್ನ ಹೊಚ್ಚ ಹೊಸ XUV 700 ಎಸ್‌ಯು‌ವಿಯಲ್ಲಿ ವಿಶೇಷ ಚೇತನರಿಗಾಗಿ ವಿಶೇಷ ಆಸನವನ್ನು ಒದಗಿಸಿದೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ದೀಪಾ ಮಲಿಕ್ ರವರು ವಿಶೇಷ ಆಸನ ಸೌಲಭ್ಯ ಹೊಂದಿರುವ ಕಾರ್ ಅನ್ನು ಬಳಸುತ್ತಿರುವಾಗ ತೆಗೆದ ವೀಡಿಯೊ ಹಾಗೂ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೀಪಾ ಮಲಿಕ್ ರವರು ಮನವಿ ಮಾಡಿದ ಎರಡು ತಿಂಗಳ ನಂತರ Mahindra ಕಂಪನಿಯು ಈ ವಿಶೇಷ ಆಸನವನ್ನು ಒದಗಿಸಿದೆ. ಈ ವಿಶೇಷ ಆಸನವು ವಿಶೇಷ ಚೇತನರಿಗೆ ಸಹಕಾರಿಯಾಗಲಿದೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ಈ ಆಸನದಲ್ಲಿ ಕುಳಿತ ನಂತರ ಅವರು ತಮ್ಮ ಆಸನವನ್ನು ನಿಯಂತ್ರಿಸಬಹುದು. ಕಾರಿನಲ್ಲಿ ಇಳಿಯುವುದನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡಬಹುದು ಎಂಬುದು ಗಮನಾರ್ಹ. ಅಂದ ಹಾಗೆ Mahindra and Mahindra ಕಂಪನಿಯು ತನ್ನ XUV 700 ಎಸ್‌ಯು‌ವಿಯನ್ನು ಭಾರತದಲ್ಲಿ ಆಗಸ್ಟ್ 14 ರಂದು ಅನಾವರಣಗೊಳಿಸಿತು. ಈ ಎಸ್‌ಯು‌ವಿಯ ಪ್ರೀ ಬುಕ್ಕಿಂಗ್ ಆರಂಭವಾದ ಮೊದಲ ದಿನವೇ 25,000 ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿತ್ತು.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ಈ ಎಲ್ಲಾ ಬುಕ್ಕಿಂಗ್‌ಗಳನ್ನು 57 ನಿಮಿಷಗಳಲ್ಲಿ ಸ್ವೀಕರಿಸಲಾಗಿತ್ತು ಎಂಬುದು ವಿಶೇಷ. ಎರಡನೇ ದಿನ ಎರಡು ಗಂಟೆಯೊಳಗೆ ಇನ್ನೂ 25 ಸಾವಿರ ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿತ್ತು. ಈ ಎಸ್‌ಯು‌ವಿಯು ಇಡುವರೆಗೂ 65,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ರೀತಿಯ ಅದ್ಭುತ ಸ್ವಾಗತವು ಇಡೀ ಭಾರತೀಯ ಆಟೋ ಮೊಬೈಲ್ ಉದ್ಯಮವನ್ನು ಅಚ್ಚರಿಗೆ ದೂಡಿದೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

Mahindra XUV 700 ಎಸ್‌ಯು‌ವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯು‌ವಿಯ ಪೆಟ್ರೋಲ್ ಮಾದರಿಯ ವಿತರಣೆಯು ಅಕ್ಟೋಬರ್ 30 ರಿಂದ ಆರಂಭವಾಗಲಿದ್ದರೆ, ಡೀಸೆಲ್ ಮಾದರಿಯ ವಿತರಣೆಯು ನವೆಂಬರ್ ಅಂತ್ಯದಲ್ಲಿ ಆರಂಭವಾಗಲಿದೆ. ಹೊಸ ಕಾರಿನ ಬೆಲೆಯು ಮೊದಲ 25 ಸಾವಿರ ಯುನಿಟ್ ಪಡೆಯುವ ಗ್ರಾಹಕರಿಗೆ ಒಂದು ಬೆಲೆಯಾದರೆ, ನಂತರ ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಬೆಲೆ ತುಸು ದುಬಾರಿಯಾಗಿರಲಿದೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

50 ಸಾವಿರ ಯುನಿಟ್ ನಂತರ ಬುಕ್ಕಿಂಗ್ ದಾಖಲಿಸುತ್ತಿರುವ ಗ್ರಾಹಕರಿಗೆ ಹೊಸ ಎಸ್‌ಯು‌ವಿಯು ಮತ್ತಷ್ಟು ದುಬಾರಿಯಾಗಲಿದೆ ಎಂದು ಕಂಪನಿಯೇ ಮಾಹಿತಿ ನೀಡಿದೆ. ಈ ಎಸ್‌ಯು‌ವಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್, 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಎಸ್‌ಯು‌ವಿಯ 7 ಸೀಟರ್ ಮಾದರಿಯು 2+3+2 ಆಸನ ಸೌಲಭ್ಯವನ್ನು ಹೊಂದಿದೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ಇನ್ನು 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದೆ. XUV 700 ಎಸ್‌ಯು‌ವಿಯು 2.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 2.0 ಲೀಟರ್ ಪೆಟ್ರೋಲ್ ಎಂಜಿನ್ 198 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, 2.2 ಲೀಟರ್ ಡೀಸೆಲ್ ಎಂಜಿನ್ 183 ಬಿಹೆಚ್‌ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ (6 ಸ್ಪೀಡ್ ಎಂಟಿ),450 ಎನ್ಎಂ ಟಾರ್ಕ್ (6 ಸ್ಪೀಡ್ ಎಟಿ) ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

Mahindra XUV 700 ಎಸ್‌ಯು‌ವಿಯಲ್ಲಿ ಫ್ರಂಟ್ ಫಾಸಿಯಾ ಹೊಂದಿರುವ ಎಲ್ಇಡಿ ಹೆಡ್‌ಲ್ಯಾಂಪ್ಸ್, ಸಿ ಶೇಪಿನಲ್ಲಿರುವ ಎಲ್ಇಡಿ ಡಿಆರ್‌ಎಲ್, ಸಿಲ್ವರ್ ಕೋಟಿಂಗ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, 18 ಇಂಚಿನ ಡ್ಯುಯಲ್ ಟೋನ್ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. Mahindra ಕಂಪನಿಯು XUV 700 ಎಸ್‌ಯು‌ವಿಯನ್ನು ಪೆಟ್ರೋಲ್, ಡೀಸೆಲ್ ಎಂಜಿನ್ ಗಳ ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಗಳಲ್ಲಿಯೂ ಮಾರಾಟ ಮಾಡಲು ಮುಂದಾಗಿದೆ.

XUV 700 ಎಸ್‌ಯು‌ವಿಯಲ್ಲಿ ವಿಶೇಷ ಆಸನ ಅಳವಡಿಸಿದ Mahindra

ಕಂಪನಿಯು ಶೀಘ್ರದಲ್ಲಿಯೇ ಈ ಎಸ್‌ಯು‌ವಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಕಂಪನಿಯು ಈ ಎಸ್‌ಯು‌ವಿಯ ಎಲೆಕ್ಟ್ರಿಕ್ ಮಾದರಿಯನ್ನು ಸಿದ್ಧಪಡಿಸಿದ್ದು, ಅದರ ಪರೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ XUV 700 ಎಸ್‌ಯು‌ವಿಯ ಎಲೆಕ್ಟ್ರಿಕ್ ಆವೃತ್ತಿಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Mahindra designs special seat in xuv 700 suv details
Story first published: Monday, October 25, 2021, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X