100 ಆಕ್ಸಿಜನ್ ಕಾನ್ಸನ್ಟ್ರೇಟರ್, 3 ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕೋವಿಡ್ ವಿರುದ್ದದ ಹೋರಾಟದಲ್ಲಿ ಸರ್ಕಾರಕ್ಕೆ ವಿವಿಧ ಮಾದರಿಯ ನೆರವು ನೀಡುವ ಮೂಲಕ ವೈರಸ್ ತಗ್ಗಿಸುವಲ್ಲಿ ಸಾಕಷ್ಟು ಸಹಕಾರಿಯಾಗಿದ್ದು, ಇತ್ತೀಚೆಗೆ ಕಂಪನಿಯು ಆದ್ಯತೆಯ ಮೇರೆಗೆ ಉತ್ತಾರಾಖಂಡ್ ಸರ್ಕಾರಕ್ಕೆ ವಿಶೇಷ ನೆರವು ಘೋಷಣೆ ಮಾಡಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಆಟೋ ಕಂಪನಿಗಳ ಹೊಸ ಯೋಜನೆಗಳ ಪರಿಣಾಮ ಸೋಂಕು ನಿಯಂತ್ರಿಸಲು ಸಾಕಷ್ಟು ಸಹಕಾರಿಯಾಗಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್‌ನೊಂದಿಗೆ ಇನ್ನು ಕೂಡಾ ಲೌಕ್‌ಡೌನ್ ಮುಂದುವರಿಸಲಾಗುತ್ತಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಆಟೋ ಕಂಪನಿಗಳು ಆರ್ಥಿಕ ಸಂಕಷ್ಟದ ನಡುವೆಯೂ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ವೈರಸ್ ಹರಡುವಿಕೆ ತೀವ್ರವಾಗಿರುವುದರಿಂದ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಮಹೀಂದ್ರಾ ಸೇರಿದಂತೆ ಹಲವು ವಾಹನ ತಯಾರಿಕಾ ಕಂಪನಿಗಳು ವೈದ್ಯಕೀಯ ಸೇವೆಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಉತ್ಪಾದನೆ, ಆಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು ಅಗತ್ಯವಿರುವ ಕಡೆಗಳಲ್ಲಿ ಕೋವಿಡ್ ಕೇರ್ ನಿರ್ಮಾಣ ಮಾಡಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಹಣಾಕಾಸು ನೆರವು ನೀಡಿದ್ದು, ಇದೀಗ ಆದ್ಯತೆಯ ಮೇರೆ ಉತ್ತರಾಖಂಡ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು 100 ಆಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು 3 ಆ್ಯಂಬುಲೆನ್ಸ್‌ಗಳನ್ನು ದೇಣಿಗೆ ನೀಡಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಜೊತೆಗೆ ದೇಶದ ಪ್ರಮುಖ ನಗರಗಳಲ್ಲಿ ಆಕ್ಸಿಜನ್ ಕೊರತೆ ನಿಗಿಸಲು ಆಕ್ಸಿಜನ್ ಆನ್ ವೀಲ್ಹ್ ಕಾರ್ಯಕ್ರಮವು ಕಂಪನಿಯ ಮಹತ್ವದ ಯೋಜನೆಗಾಗಿ ಗುರುತಿಸಿಕೊಂಡಿದ್ದು, ಕೋವಿಡ್ ಹೆಚ್ಚಿರುವ ಉತ್ತರಾಖಾಂಡ್‌ನಲ್ಲಿ ವೈದ್ಯಕೀಯ ಸೇವೆಗಳ ಕೊರತೆ ನಿಗಿಸಲು ಮಹೀಂದ್ರಾ ಕಂಪನಿಯು ಆಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು ಆ್ಯಂಬುಲೆನ್ಸ್‌ಗಳನ್ನು ದೇಣಿಗೆ ನೀಡಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳು ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ಮತ್ತು ಗುಣಮಟ್ಟ ಆಧರಿಸಿದ ರೂ.70 ಸಾವಿರದಿಂದ ರೂ.1 ಲಕ್ಷದ ತನಕ ಮಾರಾಟಗೊಳ್ಳುತ್ತಿದ್ದು, ಆ್ಯಂಬುಲೆನ್ಸ್‌ಗಳನ್ನು ಮಹೀಂದ್ರಾ ಕಂಪನಿಯು ತನ್ನದೇ ನಿರ್ಮಾಣದ ಸೂಪ್ರೊ ವ್ಯಾನ್‌ಗಳ ಆ್ಯಂಬುಲೆನ್ಸ್ ಎಡಿಷನ್‌ಗಳನ್ನೇ ದೇಣಿಯಾಗಿ ನೀಡಿದೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಇನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿಯಲ್ಲಿ ಮಹೀಂದ್ರಾ ಸೇರಿದಂತೆ ಹಲವಾರು ಆಟೋ ಉತ್ಪಾದನಾ ಕಂಪನಿಗಳು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಮಟ್ಟದ ಹಣಕಾಸಿನ ನೆರವು ನೀಡಿವೆ.

ಆಕ್ಸಿಜನ್ ಕಾನ್ಸನ್ಟ್ರೇಟರ್, ಆ್ಯಂಬುಲೆನ್ಸ್ ದೇಣಿಗೆ ನೀಡಿದ ಮಹೀಂದ್ರಾ

ಕೋವಿಡ್ ನಿಯಂತ್ರಣಕ್ಕಾಗಿ ಪ್ರಮುಖ ವಾಹನ ಕಂಪನಿಗಳು ಹಣಕಾಸು ನೆರವು ನೀಡಿದ್ದಲ್ಲಿ ಇನ್ನು ಕೆಲವು ವಾಹನ ಕಂಪನಿಗಳು ವೈದ್ಯಕೀಯ ಸೇವೆಗಳನ್ನು ಉನ್ನತೀಕರಿಸಲು ವೆಂಟಿಲೇಟರ್ ಉತ್ಪಾದನೆ ಮತ್ತು ಆಕ್ಸಿಜನ್ ಉತ್ಪಾದನೆಗೆ ಸಹಕಾರಿಯಾಗುತ್ತಿರುವುದಲ್ಲದೆ ಕೋವಿಡ್ ಕೇರ್‌ಗಳಿಗೆ ಚಾಲನೆ ನೀಡಿದೆ.

Most Read Articles

Kannada
English summary
Mahindra Donates Oxygen Concentrators & Ambulances To Uttarakhand Govt. Read in Kannada.
Story first published: Wednesday, June 16, 2021, 22:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X