ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ದೇಶಾದ್ಯಂತ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶದ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಲಾಕ್‌ಡೌನ್ ಅವಧಿಯಲ್ಲಿ ಜನರು ವಿನಾ ಕಾರಣ ಮನೆಯಿಂದ ಹೊರ ಬರುವುದನ್ನು ನಿರ್ಬಂಧಿಸಲಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ ಬಹುತೇಕ ವಾಹನ ಕಂಪನಿಗಳು ತಮ್ಮ ಸರ್ವೀಸ್ ಸೆಂಟರ್ ಹಾಗೂ ಶೋರೂಂಗಳನ್ನು ಮುಚ್ಚಿವೆ.

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಇದರಿಂದಾಗಿ ವಾಹನಗಳ ಮಾಲೀಕರು ತಮ್ಮ ವಾಹನಗಳ ವಾರಂಟಿ ಅವಧಿ, ಫ್ರೀ ಸರ್ವೀಸ್ ಅವಧಿ ಮುಗಿದು ಹೋಗಬಹುದೆಂಬ ಆತಂಕದಲ್ಲಿದ್ದಾರೆ. ಗ್ರಾಹಕರ ಆತಂಕವನ್ನು ಅರಿತಿರುವ ವಾಹನ ತಯಾರಕ ಕಂಪನಿಗಳು ಅವರ ನೆರವಿಗೆ ಧಾವಿಸಿವೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಈಗ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಸಹ ತನ್ನ ಗ್ರಾಹಕರ ನೆರವಿಗೆ ಧಾವಿಸಿದೆ. ಮಹೀಂದ್ರಾ ಕಂಪನಿಯು ಏಪ್ರಿಲ್ 1ರಿಂದ ಮೇ 31ರ ನಡುವೆ ಮುಕ್ತಾಯವಾಗುವ ಎಸ್‌ಯು‌ವಿಗಳ ವಾರಂಟಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ.

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ದೇಶದ ಬಹುತೇಕ ಭಾಗಗಳಲ್ಲಿ ಲಾಕ್‌ಡೌನ್ ವಿಧಿಸಿರುವ ಕಾರಣಕ್ಕೆ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಫ್ರೀ ಸರ್ವೀಸ್ ಅವಧಿ, ವಾರಂಟಿ ಅವಧಿ ಹಾಗೂ ಎಕ್ಸ್'ಟೆಂಟೆಡ್ ವಾರಂಟಿ ಅವಧಿಗಳನ್ನು ವಿಸ್ತರಿಸುತ್ತಿವೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸಲಾಗುತ್ತಿರುವುದರಿಂದ ಹಾಗೂ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುತ್ತಿರುವುದರಿಂದ ಆಟೋ ಮೊಬೈಲ್ ಕಂಪನಿಗಳು ತಮ್ಮ ಗ್ರಾಹಕರಿಗೆ ನೆರವಾಗಲು ಈ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಥಾರ್, ಬೊಲೆರೊ, ಸ್ಕಾರ್ಪಿಯೋ, ಎಕ್ಸ್‌ಯುವಿ 300, ಎಕ್ಸ್‌ಯುವಿ 500 ಸೇರಿದಂತೆ ಹಲವು ಎಸ್‌ಯು‌ವಿಗಳ ಮೇಲಿನ ವಾರಂಟಿಯನ್ನು ಜುಲೈ 31ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಗಿಂತ ಮೊದಲು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಎಂಜಿ ಮೋಟಾರ್, ಹ್ಯುಂಡೈ ಕಂಪನಿಗಳು ಸಹ ವಾರಂಟಿ ಅವಧಿಯನ್ನು ವಿಸ್ತರಿಸಿವೆ. ಕಳೆದ ವರ್ಷವೂ ಲಾಕ್‌ಡೌನ್ ಅವಧಿಯಲ್ಲಿ ಈ ರೀತಿ ವಾರಂಟಿ ಅವಧಿಯನ್ನು ವಿಸ್ತರಿಸಲಾಗಿತ್ತು.

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಬಹುತೇಕ ಕಂಪನಿಗಳು ವಾರಂಟಿ ಅವಧಿಯನ್ನು 2 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಿವೆ. ಮಹೀಂದ್ರಾ ಕಂಪನಿಯು ಕರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಗ್ರಾಹಕರ ನೆರವಿಗೆ ಧಾವಿಸುವುದರ ಜೊತೆಗೆ ಜನರಿಗೂ ಸಹ ನೆರವಾಗುತ್ತಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಆಕ್ಸಿಜನ್ ಸಿಗದೇ ಪರದಾಡುತ್ತಿರುವವರ ನೆರವಿಗೆ ಧಾವಿಸಿರುವ ಮಹೀಂದ್ರಾ ಕಂಪನಿಯು ಆಕ್ಸಿಜನ್ ಆನ್ ವ್ಹೀಲ್ಸ್ ಎಂಬ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನಕ್ಕೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಚಾಲನೆ ನೀಡಿದ್ದರು.

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಮೊದಲು ಈ ಅಭಿಯಾನವನ್ನು ಮುಂಬೈನಲ್ಲಿ ಆರಂಭಿಸಲಾಯಿತು. ಈಗ ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನವನ್ನು ಹೈದರಾಬಾದ್‌ನಲ್ಲಿಯೂ ಆರಂಭಿಸಲಾಗಿದೆ. ಈ ಅಭಿಯಾನದ ಆಕ್ಸಿಜನ್ ಅಗತ್ಯವಿರುವವರಿಗೆ ಆಕ್ಸಿಜನ್ ಪೂರೈಸಲಾಗುವುದು.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಎಸ್‌ಯು‌ವಿಗಳ ವಾರಂಟಿ ಅವಧಿ ವಿಸ್ತರಿಸಿದ ಮಹೀಂದ್ರಾ

ಇತ್ತೀಚಿಗಷ್ಟೇ ಆನಂದ್ ಮಹೀಂದ್ರಾರವರು ಈ ಅಭಿಯಾನವನ್ನು ಮತ್ತಷ್ಟು ನಗರಗಳಲ್ಲಿ ಆರಂಭಿಸುವುದಾಗಿ ತಿಳಿಸಿದರು. ಈ ಮೂಲಕ ದೇಶದ ಹಲವು ಆಸ್ಪತ್ರೆ ಹಾಗೂ ವೈದ್ಯಕೀಯ ಕೇಂದ್ರಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸಲಿದೆ.

Most Read Articles

Kannada
English summary
Mahindra extends SUV warranty till July 31st. Read in Kannada.
Story first published: Thursday, May 13, 2021, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X