ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಕೆಲವು ಆಯ್ದ ಕಾರುಗಳು ಬೆಲೆಯನ್ನು ರೂ.12,000 ದಿಂದ ರೂ.30,000 ವರೆಗಿನ ಬೆಲೆಯಲ್ಲಿ ಏರಿಕೆ ಮಾಡಿದೆ.ಇತ್ತೀಚೆಗಷ್ಟೇ ಬಿಡುಗಡೆಯಾದ ಬೊಲೆರೊ ನಿಯೋ ಎಸ್‌ಯುವಿಯ ಬೆಲೆಯಲ್ಲಿ ಹೆಚ್ಚಳವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಹೊಸ ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯು ತನ್ನ ಮೊದಲ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಎಸ್‍ಯುವಿಯ ಬೆಲೆಯನ್ನು ರೂ,28,000 ದಿಂದ ರೂ.30,000 ಗಳವರೆಗೆ ಹೆಚ್ಚಿಸಲಾಗಿದೆ.ಮಹೀಂದ್ರಾ ಕಂಪನಿಯು ಬೊಲೆರೊ ನಿಯೋ ಎಸ್‍ಯುವಿಯನ್ನು ಎಕ್ಸ್ ಶೋ ರೂಂ ಪ್ರಕಾರ ರೂ,8.48 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದರು. ಇನ್ನು ಬೆಲೆ ಏರಿಕೆಯ ಬಳಿಕ, ಮಹೀಂದ್ರಾ ಬೊಲೆರೊ ನಿಯೋ ಎನ್N4 ವೆರಿಯೆಂಟ್ ಬೆಲೆಯು ರೂ,77 ಲಕ್ಷಗಳಾದರೆ, ನಿಯೋ ಎನ್10 (ಒ) ವೆರಿಯೆಂಟ್ ಬೆಲೆಯು ರೂ.10.99 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಬೊಲೆರೊ ನಿಯೋ ಎಸ್‌ಯುವಿಯೊಂದಿಗೆ, ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬೆಲೆಯನ್ನೂ ಹೆಚ್ಚಿಸಿದೆ. ಈ ಮಹೀಂದ್ರಾ ಸ್ಕಾರ್ಪಿಯೋ S11 ವೆರಿಯೆಂಟ್ ಬೆಲೆಯನ್ನು ರೂ.22,000 ವರೆಗೆ ಹೆಚ್ಚಿಸಲಾಗಿದೆ. ಈ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ 2.2 ಲೀಟರ್ 4 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಈ ಎಂಜಿನ್ 140 ಬಿಹೆಚ್‌ಪಿ ಪವರ್ ಹಾಗೂ 319 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸ್ಕಾರ್ಪಿಯೋ ಎಸ್‌ಯುವಿಯಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ. ಸ್ಕಾರ್ಪಿಯೋ ಎಸ್‌ಯುವಿಯು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇಯನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಇದರ ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಸಿ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಪವರ್ ಸ್ಟೀಯರಿಂಗ್ ಹಾಗೂ 12 ವೋಲ್ಟ್ ಚಾರ್ಜಿಂಗ್ ಸಾಕೆಟ್ ಗಳನ್ನು ನೀಡಲಾಗಿದೆ. ಸುರಕ್ಷತೆಗಾಗಿ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಎರಡು ಏರ್‌ಬ್ಯಾಗ್‌, ಎಬಿಎಸ್, ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್'ಗಳನ್ನು ನೀಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಇನ್ನು ಮರಾಜೋ ಎಂಪಿವಿ ಬೆಲೆಯನ್ನು ರೂ.12,000 ದಿಂದ ರೂ,14,000 ಗಳವರೆಗೂ ಹೆಚ್ಚಿಸಲಾಗಿದೆ. ಈ ಮರಾಜೋ ಎಂಪಿವಿಯಲ್ಲಿ 1.5 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,500 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಹಾಗೂ 1750 ರಿಂದ 2500 ಆರ್‌ಪಿಎಂನಲ್ಲಿ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಇನ್ನು ಇತ್ತೀಚೆಗೆ ಬಿಡುಗಡೆಗೊಂಡ ಮಹೀಂದ್ರಾ ಬೊಲೆರೊ ನಿಯೋ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಹೊಸ ಮಾದರಿಯು ಸ್ಟಾಂಡರ್ಡ್ ಬೊಲೆರೊದಂತೆಯೇ ಹಳೆಯ ಬಾಕ್ಸೀ ಸಿಲೂಯೆಟ್ ಅನ್ನು ಹೊಂದಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಗೆಹೊಸ ಆಕರ್ಷಣೆ ನೀಡಲು ಕೆಲವು ವಿನ್ಯಾಸಗಳಲ್ಲಿ ಬದಲಾವಣೆ ಮಾಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಹೊಸ ಬೊಲೆರೊ ನಿಯೋ ಕಾರು ಸ್ಕಾರ್ಪಿಯೋ ಮತ್ತು ಥಾರ್ ಮ್ಯಾಡುಲರ್ ಚಾರ್ಸಿ ಸೌಲಭ್ಯದೊಂದಿಗೆ ಹಲವು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.ಇನ್ನು ಈ ಎಸ್‍ಯುವಿಯು ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಲಭ್ಯವಿದೆ. ಈ ಹೊಸ ಎಸ್‍ಯುವಿಯಲ್ಲಿ ವಿಶಾಲವಾದ ಏರ್ ಡ್ಯಾಂ, ಸರ್ಕ್ಯೂಲರ್ ಫಾಗ್ ಲೈಟ್, ಮರುವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್, ಹೊಸ ಬೊಲೆರೊ ನಿಯೋ ಬ್ಯಾಡ್ಜಿಂಗ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಈ ಎಸ್‍ಯುವಿಯ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ. ಈ ಎಸ್‌ಯುವಿಯ ಇಂಟಿರಿಯರ್'ನಲ್ಲಿ 7 ಇಂಚಿನ ಟಚ್-ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್, ಚಾರ್ಜಿಂಗ್ ಸಾಕೆಟ್‌, ಪವರ್ ವಿಂಡೋ ಸ್ವಿಚ್‌ಗಳನ್ನು ನೀಡಲಾಗಿದೆ. ಬೊಲೆರೊ ನಿಯೋ ಎಸ್‌ಯುವಿಯಲ್ಲಿರುವ ಸ್ಟೀಯರಿಂಗ್ ವ್ಹೀಲ್ ಅನ್ನು ಸಾಫ್ಟ್ ಟಚ್ ಮೆಟಿರಿಯಲ್'ಗಳಿಂದ ವ್ರಾಪ್ ಮಾಡಲಾಗಿದೆ. ಇದರಿಂದ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಗ್ರಿಪ್ ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಈ ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಮಹೀಂದ್ರಾ ಕಂಪನಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌, ಎಬಿಎಸ್ ಜೊತೆ ಇಬಿಡಿ, ಸಿಬಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಬೊಲೆರೊ ನಿಯೋ ಮಾದರಿಯಲ್ಲಿ ಈ ಹಿಂದಿನ ಟಿಯುವಿ300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5 ಲೀಟರ್ ಎಮ್ಹಾಕ್ ಟರ್ಬೋ ಡೀಸೆಲ್ ಎಂಜಿನ್ 3,750 ಆರ್‌ಪಿಎಂನಲ್ಲಿ 100 ಬಿಹೆಚ್‌ಪಿ ಪವರ್ ಹಾಗೂ 2,250 ಆರ್‌ಪಿಎಂನಲ್ಲಿ 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಎಂಜಿನ್ ಅನ್ನು ಸ್ಟಾಂಡರ್ಡ್ ಆಗಿ 5 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಡೆಲಿವರಿ ಮೊದಲಿಗೆ ನಿಧಾನವೆನಿಸಿದರೂ ನಂತರ ವೇಗವಾಗುತ್ತದೆ. ಬೊಲೆರೊ ನಿಯೋ ಸಮರ್ಥ ಚಾಲನೆಗಾಗಿ ಇಕೋ ಡ್ರೈವ್ ಮೋಡ್ ಹಾಗೂ ಇಎಸ್‌ಎಸ್ ಹೊಂದಿರುವ ಮೈಕ್ರೊ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಆಯ್ದ Mahindra ಕಾರುಗಳು

ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿಯು 3,995 ಎಂಎಂ ಉದ್ದ, 1,795 ಎಂಎಂ ಅಗಲ, 1,817 ಎಂಎಂ ಎತ್ತರ, 2,680 ಎಂಎಂ ವ್ಹೀಲ್‌ಬೇಸ್, 384 ಲೀಟರ್ ಬೂಟ್ ಸ್ಪೇಸ್, 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.ಈ ಮಹೀಂದ್ರಾ ಕಾರುಗಳ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mahindra hiked price again in selected models in lineup new price list details
Story first published: Tuesday, September 21, 2021, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X