ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

ಭಾರತೀಯ ಮೂಲದ ಕಾರು ತಯಾರಕ ಕಂಪನಿಯಾದ Mahindra and Mahindra ತನ್ನ ಅಂಗಸಂಸ್ಥೆಯಾದ Mahindra ಫೈನಾನ್ಸ್ ಮೂಲಕ ವಾಹನ ಸಾಲದ ಮೇಲೆ ವಿಶೇಷ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಕಂಪನಿಯು ಶುಭ ಉತ್ಸವ ಎಂಬ ಹೆಸರಿನಲ್ಲಿ ಈ ಕೊಡುಗೆಯನ್ನು ಪರಿಚಯಿಸಿದೆ. ಈ ಕೊಡುಗೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

ಈ ಕೊಡುಗೆ ನವೆಂಬರ್ ಅಂತ್ಯದವರೆಗೆ ಲಭ್ಯವಿರಲಿದೆ. Mahindra ಕಂಪನಿಯ ಹಣಕಾಸು ಯೋಜನೆಗಳು ಆಕರ್ಷಕ ಬಡ್ಡಿ ದರದಲ್ಲಿ ವಾಹನ ಸಾಲಗಳ ಮೇಲೆ ವಿಶೇಷ ಕೊಡುಗೆಗಳು ಹಾಗೂ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ. ಕಂಪನಿಯು ನೀಡುತ್ತಿರುವ ಶುಭ ಉತ್ಸವದ ಕೊಡುಗೆಯಿಂದ ಸಾಲದ ಮೂಲಕ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಅನುಕೂಲವಾಗಲಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

Mahindra ಕಂಪನಿಯ ಗ್ರಾಹಕರು ಏಳು ವರ್ಷಗಳ ವರೆಗಿನ ಸಾಲದ ಅವಧಿ, ಪ್ರೊಸೆಸಿಂಗ್ ಶುಲ್ಕದ ಮೇಲೆ 50 % ನಷ್ಟು ರಿಯಾಯಿತಿ, 100% ನಷ್ಟು ಧನಸಹಾಯ ಹಾಗೂ ಕಂಪನಿಯ ಎಸ್‌ಯುವಿಗಳ ಮೇಲೆ 7.35% ಬಡ್ಡಿಯೊಂದಿಗೆ ಸಾಲಗಳನ್ನು ಪಡೆಯಬಹುದು. ಪ್ರಯಾಣಿಕ ವಾಹನಗಳ ಮೇಲೆ ಮಾತ್ರವಲ್ಲದೆ Mahindra ವಾಣಿಜ್ಯ ವಾಹನಗಳಾದ ಟ್ರಕ್‌ ಹಾಗೂ ಟ್ರಾಕ್ಟರ್‌ಗಳನ್ನು ಖರೀದಿಸುವ ಗ್ರಾಹಕರೂ ಈ ಕೊಡುಗೆಗಳನ್ನು ಪಡೆಯಬಹುದು.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

ಇದರ ಹೊರತು ಕಂಪನಿಯು ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆಸಕ್ತ ಗ್ರಾಹಕರು ಕಂಪನಿಯ ಡೀಲರ್ ಶಿಪ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬಹುದು. Mahindra ಕಂಪನಿಯು ಇತ್ತೀಚೆಗಷ್ಟೇ ತನ್ನ ಹೊಸ XUV 700 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 12.49 ಲಕ್ಷಗಳಾಗಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

XUV 700 ಎಸ್‌ಯುವಿಯನ್ನು ಎಂಎಕ್ಸ್, ಎಎಕ್ಸ್ 3, ಎಎಕ್ಸ್ 5 ಹಾಗೂ ಎಎಕ್ಸ್ 7 ಸೇರಿದಂತೆ ಒಟ್ಟು ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. Mahindra XUV 700 ಎಸ್‌ಯುವಿಯನ್ನು ರೆಡ್, ಮಿಡ್ನೈಟ್ ಬ್ಲಾಕ್, ಎವರೆಸ್ಟ್ ವೈಟ್, ಡ್ಯಾಜ್ಲಿಂಗ್ ಸಿಲ್ವರ್, ಎಲೆಕ್ಟ್ರಿಕ್ ಬ್ಲೂ ಸೇರಿದಂತೆ 5 ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಟಾಪ್ ಎಂಡ್ ಆವೃತ್ತಿಯಲ್ಲಿ ಐಷಾರಾಮಿ ಪ್ಯಾಕ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

XUV 700 ಎಸ್‌ಯುವಿಯ ಮೂಲ ಮಾದರಿಯನ್ನು MX ಅಥವಾ MX ಸರಣಿ ಎಂದು ಹೆಸರಿಸಲಾಗಿದೆ. ಇದನ್ನು ಒಂದೇ ಒಂದು ಟ್ರಿಮ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಅಡ್ರಿನಾಕ್ಸ್ ಸರಣಿಯು AX3, AX5, AX7 ಎಂಬ ಮೂರು ಟ್ರಿಮ್‌ಗಳಲ್ಲಿ ಲಭ್ಯವಿರಲಿದೆ. Mahindra XUV 700 ಎಸ್‌ಯುವಿಯನ್ನು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

2.0 ಲೀಟರ್ ಪೆಟ್ರೋಲ್ ಎಂಜಿನ್ 200 ಬಿ‌ಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸಿದರೆ 2.2 ಲೀಟರ್ ಡೀಸೆಲ್ ಎಂಜಿನ್ 185 ಬಿಹೆಚ್‌ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಕಂಪನಿಯು ಅದರಲ್ಲಿ ಹಲವಾರು ಆಧುನಿಕ ಫೀಚರ್ ಗಳನ್ನು ಅಳವಡಿಸಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

ಹೊಸ XUV 700 ಮಹೀಂದ್ರಾ ಎಸ್‌ಯುವಿ ಪ್ರೂವಿಂಗ್ ಟ್ರ್ಯಾಕ್(MSPT) ನಲ್ಲಿ 24 ಗಂಟೆಗಳ ತಡೆ ರಹಿತ ಚಾಲನೆ ನಡೆಸಿ ಹೊಸ ದಾಖಲೆ ಬರೆದಿದೆ. ಟ್ರ್ಯಾಕ್ ಡ್ರೈವ್ ಮೂಲಕವೇ ಈ ಹೊಸ ಎಸ್‌ಯುವಿ ಸರಾಸರಿ 4 ಸಾವಿರ ಕಿ.ಮೀ ಚಲಿಸಿ ಹೊಸ ದಾಖಲೆ ಸೃಷ್ಟಿಸಿದೆ. ಈ ಮೂಲಕ ಸ್ಪೀಡ್ ಎಂಡ್ಯೂರೆನ್ಸ್ ಚಾಲೆಂಜ್‌ನಲ್ಲಿ ಈ ಹಿಂದೆ 24 ಗಂಟೆಗಳಲ್ಲಿ 3,161 ಕಿ.ಮೀ ಚಲಿಸುವ ಮೂಲಕ ದಾಖಲೆ ಬರೆದಿದ್ದ SUV 500 ದಾಖಲೆಯನ್ನು XUV 700 ಮುರಿದಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

ಇಂಧನ ತುಂಬಿಸುವ ಅವಧಿಯನ್ನು ಹೊರತುಪಡಿಸಿದರೆ ವಿಶ್ರಾಂತಿ ಪಡೆಯದೆ ಈ ಎಸ್‌ಯು‌ವಿಯನ್ನು ಚಾಲನೆ ಮಾಡಲಾಗಿದೆ. ಹೊಸ ಎಸ್‌ಯು‌ವಿಯ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ನಡೆದ ಟ್ರ್ಯಾಕ್ ಟೆಸ್ಟ್‌ನಲ್ಲಿ XUV 700 ಅದ್ಬುತ ಪ್ರದರ್ಶನ ನೀಡಿದೆ. ಈ ಎಸ್‌ಯು‌ವಿಯು ಪ್ರತಿ ಗಂಟೆಗೆ ಸರಾಸರಿ 170 - 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

Mahindra ಕಂಪನಿಯು ಇತ್ತೀಚಿಗೆ ತನ್ನ XUV 300 ಕಾರುಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರಿನ ಡೀಸೆಲ್ ಮಾದರಿಗಳನ್ನು ರಿಕಾಲ್ ಮಾಡುತ್ತಿರುವ ಬಗ್ಗೆ ವರದಿಯಾಗಿತ್ತು. XUV 300 ಡೀಸೆಲ್ ಆವೃತ್ತಿಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಾಂತ್ರಿಕ ದೋಷ ಸರಿಪಡಿಸಿಕೊಳ್ಳುವಂತೆ ಕಂಪನಿಯು ಈ ಕಾರಿನ ಗ್ರಾಹಕರಿಗೆ ಸಂದೇಶ ರವಾನಿಸುತ್ತಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಶುಭ್ ಉತ್ಸವ್ ಕೊಡುಗೆ ಘೋಷಿಸಿದ Mahindra

ಕಂಪನಿಯು ಈ ಕಾರಿನ ಡೀಸೆಲ್ ಎಂಜಿನ್‌ನಲ್ಲಿರುವ ಇಂಟರ್‌ಕೂಲರ್ ಹೊಸ್ ಗಳನ್ನು ಬದಲಿಸುತ್ತಿದೆ. ಇಂಟರ್‌ಕೂಲರ್ ಹೊಸ್ ತಾಂತ್ರಿಕ ದೋಷದಿಂದ ಕಾರು ಚಾಲನೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲವಾದರೂ ಎಂಜಿನ್ ಕಾರ್ಯಕ್ಷಮತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆ ಗ್ರಾಹಕರು ದೂರು ನೀಡಿದ್ದರು. ಅದರ ಆಧಾರದ ಮೇಲೆ Mahindra ಕಂಪನಿಯು ತಾಂತ್ರಿಕ ದೋಷವನ್ನು ಪತ್ತೆ ಮಾಡಿ ಸಮಸ್ಯೆಗೆ ಪರಿಹಾರ ನೀಡುತ್ತಿದೆ.

Most Read Articles

Kannada
English summary
Mahindra introduces shubh utsav offer for its customers details
Story first published: Thursday, October 14, 2021, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X