ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಭಾರತೀಯ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ Mahindra and Mahindra ಒಂದೇ ದಿನ ತನ್ನ ಮೂರು ಟ್ರಾಕ್ಟರ್‌ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ರೈತರಿಗೆ ಹೆಚ್ಚು ಆಯ್ಕೆಗಳನ್ನು ನೀಡುವ ಸಲುವಾಗಿ ಈ ಟ್ರ್ಯಾಕ್ಟರ್‌ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

Mahindra ಕಂಪನಿಯು ನಿನ್ನೆ (ಅಕ್ಟೋಬರ್ 13) ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ Yuvo Tech Plus (ಯುವೊ ಟೆಕ್ ಪ್ಲಸ್) ಹೆಸರಿನ ಮೂರು ಹೊಸ ಟ್ರಾಕ್ಟರ್‌ಗಳನ್ನು ಬಿಡುಗಡೆಗೊಳಿಸಿದೆ. Mahindra ಕಂಪನಿಯು ಯುವೊ ಟೆಕ್ + 275, ಯುವೊ ಟೆಕ್ + 405 ಹಾಗೂ ಯುವೊ ಟೆಕ್ + 415 ಟ್ರಾಕ್ಟರ್ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

Mahindra ಕಂಪನಿಯ ಈ ಕ್ರಮವು ಪ್ರತಿಸ್ಪರ್ಧಿ ಕಂಪನಿಗಳಲ್ಲಿ ಸಂಚಲನವನ್ನುಂಟು ಮಾಡಿದೆ. ಆದರೆ ಈ ಎಲ್ಲಾ ಟ್ರಾಕ್ಟರ್ ಮಾದರಿಗಳು ದೇಶದ ಎಲ್ಲಾ ಭಾಗಗಳಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲವೆಂದು ಕಂಪನಿ ತಿಳಿಸಿದೆ. ಇದು ರೈತರಲ್ಲಿ ನಿರಾಸೆ ಮೂಡಿಸಿದೆ. ಮೊದಲ ಹಂತದಲ್ಲಿ ಈ ಟ್ರಾಕ್ಟರ್‌ಗಳನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಕಂಪನಿಯು ಹೊಸ ಟ್ರ್ಯಾಕ್ಟರ್‌ಗಳ ಮೇಲೆ ಆರು ವರ್ಷಗಳ ವಾರಂಟಿಯನ್ನು ಘೋಷಿಸಿದೆ. ಈ ಟ್ರಾಕ್ಟರ್‌ಗಳನ್ನು ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ. ಈ ಟ್ರಾಕ್ಟರ್‌ಗಳಲ್ಲಿ MZIP 3 ಸಿಲಿಂಡರ್ ಎಂಜಿನ್ ಅನ್ನು ಬಳಸಲಾಗುತ್ತದೆ. ಈ ಎಂಜಿನ್ ಹೆಚ್ಚಿನ ಘನ ಸಾಮರ್ಥ್ಯದ ತಂತ್ರಜ್ಞಾನವನ್ನು ಹೊಂದಿದೆ. ಈಗ ಬಿಡುಗಡೆಗೊಳಿಸಲಾಗಿರುವ ಪ್ರತಿಯೊಂದು ಮಾದರಿಯು ವಿಭಿನ್ನ ಸಾಮರ್ಥ್ಯವನ್ನು ಹೊಂದಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಹಾಗೆಯೇ ಈ ಟ್ರಾಕ್ಟರ್‌ಗಳು 37 ಬಿಹೆಚ್‌ಪಿ ಪವರ್ ನಿಂದ 42 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದರ ಜೊತೆಯಲ್ಲಿ ಈ ಟ್ರಾಕ್ಟರ್‌ಗಳು 12 ಎಫ್ (ಫಾರ್ವರ್ಡ್) ಹಾಗೂ 3 ಆರ್ (ರಿವರ್ಸ್) ಟ್ರಾನ್ಸ್ ಮಿಷನ್ ಹೊಂದಿವೆ. ಗೇರ್ ಬಾಕ್ಸ್'ನೊಂದಿಗೆ 3 ಸ್ಪೀಡ್ ರೇಂಜ್ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ವೇಗವನ್ನು ಹೆಚ್ಚಿಸಲು ಹಾಗೂ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಈ ಟ್ರಾಕ್ಟರ್‌ಗಳು ಹೆಚ್ಚಿನ ನಿಖರ ನಿಯಂತ್ರಣ ಕವಾಟಗಳು ಹಾಗೂ 1700 ಕೆಜಿ ವಸ್ತುಗಳನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿವೆ. ಯುವೋ ಟೆಕ್ ಪ್ಲಸ್ ಟ್ರಾಕ್ಟರ್‌ಗಳು ಹೆಚ್ಚುವರಿ ಕೌಶಲ್ಯ ಅಭಿವ್ಯಕ್ತಿ ಹಾಗೂ ಹೆಚ್ಚಿನ ಮುಖ್ಯಾಂಶಗಳನ್ನು ಹೊಂದಿವೆ. ಆಧುನಿಕ ರೈತರಿಗೆ ಸೂಕ್ತವಾಗಿಸಲು ಹಾಗೂ ಕಾರ್ಯವನ್ನು ಸುಲಭಗೊಳಿಸಲು ಈ ಟ್ರಾಕ್ಟರ್‌ಗಳಲ್ಲಿ ವಿವಿಧ ವಿಶೇಷತೆಗಳನ್ನು ನೀಡಲಾಗಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

Mahindra ಕಂಪನಿಯು ತನ್ನ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತೀಯ ಗ್ರಾಹಕರನ್ನು ಆಕರ್ಷಿಸುತ್ತಿದೆ. ಕಂಪನಿಯು ಇತ್ತೀಚಿಗಷ್ಟೇ ತನ್ನ ಹೊಸ XUV 700 ಎಸ್‌ಯು‌ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯು‌ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಐದು ಹಾಗೂ ಏಳು ಸೀಟುಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಇದರ ಜೊತೆಗೆ Mahindra ಕಂಪನಿಯು ಈ ಎಸ್‌ಯು‌ವಿಯಲ್ಲಿ ಇನ್ನೂ ಹಲವು ವಿಶೇಷತೆಗಳನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ XUV 700 ಎಸ್‌ಯು‌ವಿಯು ಗ್ರಾಹಕರಿಂದ ಉತ್ತಮ ಸ್ವಾಗತವನ್ನು ಪಡೆಯುತ್ತಿದೆ. ಈ ಎಸ್‌ಯು‌ವಿಯ ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿ 50,000 ಹೆಚ್ಚು ಬುಕ್ಕಿಂಗ್ ಪಡೆಯಲಾಗಿದೆ. ಬುಕ್ಕಿಂಗ್‌ನ ಮೊದಲ ದಿನ ಒಂದು ಗಂಟೆಯೊಳಗೆ 25 ಸಾವಿರ ಯುನಿಟ್‌ಗಳು ಬುಕ್ಕಿಂಗ್ ಆದರೆ ಎರಡನೇ ದಿನ ಮೊದಲ ಎರಡು ಗಂಟೆಗಳಲ್ಲಿ ಮತ್ತೆ 25 ಸಾವಿರ ಯುನಿಟ್‌ಗಳು ಬುಕ್ಕಿಂಗ್ ಆಗಿವೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

Mahindra XUV 700 ನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 12.49 ಲಕ್ಷಗಳಾಗಿದೆ. Mahindra ಕಂಪನಿಯು ಮೊದಲ 25 ಸಾವಿರ ಯುನಿಟ್ ಬುಕ್ಕಿಂಗ್‌ಗಳ ನಂತರ ಈ ಎಸ್‌ಯು‌ವಿಯ ಬೆಲೆ ಏರಿಕೆ ಮಾಡಿದೆ. Mahindra ಕಂಪನಿಯು ಮೊದಲ 25 ಸಾವಿರ ಗ್ರಾಹಕರಿಗೆ ಅನ್ವಯವಾಗುವಂತೆ ಒಂದು ದರ, ನಂತರ ಬುಕ್ಕಿಂಗ್ ಮಾಡುವ 25 ಸಾವಿರ ಗ್ರಾಹಕರಿಗೆ ಒಂದು ದರವನ್ನು ನಿಗದಿಪಡಿಸಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಈ ತಿಂಗಳ ಕೊನೆಯ ವಾರದಲ್ಲಿ ಪೆಟ್ರೋಲ್ ಮಾದರಿಗಳ ವಿತರಣೆಯು ಆರಂಭವಾಗಲಿದ್ದು, ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಡೀಸೆಲ್ ಮಾದರಿಗಳ ವಿತರಣೆ ಆರಂಭವಾಗಲಿದೆ. 21 ವೆರಿಯೆಂಟ್ ಹೊಂದಿರುವ ಹೊಸ ಎಸ್‌ಯು‌ವಿಯ ಮೊದಲ 25 ಸಾವಿರ ಯುನಿಟ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ದೆಹಲಿಯ ಎಕ್ಸ್‌ಶೋರೂಂ ದರದಂತೆ ಆರಂಭಿಕವಾಗಿ ರೂ. 11.99 ಲಕ್ಷಗಳಿಗೆ ಹಾಗೂ ಟಾಪ್ ಎಂಡ್ ಮಾದರಿಯನ್ನು ರೂ. 22.89 ಲಕ್ಷಗಳಿಗೆ ಮಾರಾಟ ಮಾಡಲಿದೆ.

ಹೊಸ ತಲೆಮಾರಿನ ಟ್ರಾಕ್ಟರ್‌ ಮಾದರಿಗಳನ್ನು ಬಿಡುಗಡೆಗೊಳಿಸಿದ Mahindra

ಹೊಸ ಎಸ್‌ಯು‌ವಿಯ 7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯವನ್ನು ಹೊಂದಿದ್ದರೆ, 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯವನ್ನು ಹೊಂದಿದೆ. Mahimdra ಕಂಪನಿಯು XUV 700 ಎಸ್‌ಯು‌ವಿಯನ್ನು 2.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ.2.0 ಲೀಟರ್ ಪೆಟ್ರೋಲ್ ಎಂಜಿನ್ 198 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, 2.2 ಲೀಟರ್ ಡೀಸೆಲ್ ಎಂಜಿನ್ 183 ಬಿಹೆಚ್‌ಪಿ ಪವರ್ ಹಾಗೂ 420 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Mahindra launches new tractor models in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X