ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಮಹೀಂದ್ರಾ ಕಂಪನಿಯು ಭಾರತದಲ್ಲಿ ತನ್ನ ಎಂಪಿವಿ ಕಾರು ಮಾದರಿಯಾದ ಮರಾಜೋದಲ್ಲಿ ಬಿಎಸ್-6 ಆವೃತ್ತಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂ2, ಎಂ4 ಪ್ಲಸ್, ಎಂ6 ಪ್ಲಸ್ ಮತ್ತು ಎಂ6 ಪ್ಲಸ್ 8 ಸೀಟರ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರುವ ಮಾರಾಜೋ ಕಾರು ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಎಲ್ಲಾ ವೆರಿಯೆಂಟ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಎಎಂಟಿ ಆಟೋಮ್ಯಾಟಿಕ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಸ್ಥಾನ ಹೊಂದಿರುವ ಮಹೀಂದ್ರಾ ಮರಾಜೋ ಕಾರು ಒಂದೇ ಎಂಜಿನ್ ಆಯ್ಕೆಯೊಂದಿಗೆ ಒಂದೇ ಮಾದರಿಯ ಗೇರ್‌ಬಾಕ್ಸ್ ಹೊಂದಿದ್ದು, ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಮಹೀಂದ್ರಾ ಕಂಪನಿಯು ಹೊಸ ಕಾರಿನ ಕಾರ್ಯಕ್ಷಮತೆ ಕುರಿತು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಮುಂಬರುವ ಮಾರ್ಚ್ ಅಂತ್ಯದೊಳಗೆ 2021ರ ಆವೃತ್ತಿಯ ಬಿಡುಗಡೆಗೆ ಹೊಸ ಮಾದರಿಯನ್ನು ಸಿದ್ದಪಡಿಸುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಮರಾಜೋ ಆಟೋಮ್ಯಾಟಿಕ್ ಎಂಪಿವಿ ಸ್ಪೈ ಚಿತ್ರಗಳಲ್ಲಿ ಸಾಮಾನ್ಯ ಆವೃತ್ತಿಗೆ ಹೋಲುವಂತೆ ಟೈಲ್‌ಗೇಟ್‌ನ ಕೆಳ ಭಾಗದ ಎಡ ಕಾರ್ನನರ್ ನಲ್ಲಿ ಆಟೋ-ಶಿಫ್ಟ್' ಬ್ಯಾಡ್ಜಿಂಗ್ ಜೋಡಿಸಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 121-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಆದರೆ ಆಟೋಮ್ಯಾಟಿಕ್ ಆವೃತ್ತಿಯು 123-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಆಟೋ ಆವೃತ್ತಿಗಳು ನಗರಪ್ರದೇಶಗಳಲ್ಲಿ ಓಡಾಟಕ್ಕೆ ಸೂಕ್ತ ಆಯ್ಕೆಯಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಇನ್ನು ಬಿಎಸ್-6 ಎಮಿಷನ್ ನಂತರ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಹಲವು ಜನಪ್ರಿಯ ಡೀಸೆಲ್ ಕಾರುಗಳಲ್ಲಿ ಈ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಡೀಸೆಲ್ ಆಟೋಮ್ಯಾಟಿಕ್ ಜೊತೆಗೆ ಮರಾಜೋ ಕಾರಿನಲ್ಲೂ 1.5-ಲೀಟರ್ ಪೆಟ್ರೋಲ್ ಮಾದರಿಯ ಬಿಡುಗಡೆ ಮಾಡುವ ಯೋಜನೆಗಳು ಸಹ ಜಾರಿಯಲ್ಲಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಆದರೆ ಸದ್ಯಕ್ಕೆ ಡೀಸೆಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಉನ್ನತೀಕರಣ ಮಾಡಲಾಗಿದ್ದು, ಈ ವರ್ಷದ ಮಧ್ಯಂತರದಲ್ಲಿ ಪೆಟ್ರೋಲ್ ಮಾದರಿಯು ಕೂಡಾ ರಸ್ತೆಗಿಳಿಯುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಪೆಟ್ರೋಲ್ ಮಾದರಿಯೊಂದಿಗೆ ಮಾರಾಜೋ ಕಾರು ಈಗಾಗಲೇ ಹಲವಾರು ಬಾರಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಮಾಹಿತಿಗಳಿದ್ದು, ವರ್ಷಾಂತ್ಯದೊಳಗೆ ಪೆಟ್ರೋಲ್ ಮಾದರಿಯು ಕೂಡಾ ಎಂಪಿವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮಹೀಂದ್ರಾ ಮರಾಜೋ ಆಟೋಮ್ಯಾಟಿಕ್ ವರ್ಷನ್

ಮರಾಜೋ ಕಾರು ಬಿಎಸ್-6 ಎಂಜಿನ್ ಮತ್ತು ವೆರಿಯೆಂಟ್ ಬದಲಾಣೆಯೊಂದಿಗೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.64 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 13.79 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

Most Read Articles

Kannada
English summary
Mahindra Marazzo Automatic To Launch Soon In India. Read in Kannada.
Story first published: Tuesday, February 23, 2021, 0:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X