ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ(Mahindra) ಕಂಪನಿಯು ತನ್ನ ಕಾರು ಮಾದರಿಗಳ ಹೊಸ ತಲೆಮಾರಿನ ಆವೃತ್ತಿಗಳನ್ನು ಉನ್ನತೀಕರಿಸುತ್ತಿದ್ದು, ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಪ್ರಮುಖ ಕಾರುಗಳ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಮಹೀಂದ್ರಾ ಕಂಪನಿಯು ಥಾರ್(Thar) ಕಾರು ಮಾದರಿಯ ಹೊಸ ತಲೆಮಾರಿನ ಆವೃತ್ತಿಯ ಬಿಡುಗಡೆಯ ನಂತರ ಮುಂದಿನ ಕೆಲವೇ ವಾರಗಳಲ್ಲಿ ಎಕ್ಸ್‌ಯುವಿ700(XUV700) ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಎಕ್ಸ್‌ಯುವಿ700 ಬಿಡುಗಡೆಯ ನಂತರ ಸ್ಕಾರ್ಪಿಯೋ(Scorpio) ಮತ್ತು ಬೊಲೆರೊ(Bolero) ಕಾರುಗಳ ಹೊಸ ತಲೆಮಾರಿನ ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಎಕ್ಸ್‌ಯುವಿ700 ಬಿಡುಗಡೆಯ ನಂತರ ರಸ್ತೆಗಿಳಿಯಲಿರುವ ಹೊಸ ತಲೆಮಾರಿನ ಸ್ಕಾರ್ಪಿಯೋ ಮತ್ತು ಬೊಲೆರೊ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಹೆಚ್ಚು ಇಂಧನ ದಕ್ಷತೆ ಮತ್ತು ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆ ಸೌಲಭ್ಯ ಹೊಂದಿರಲಿವೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

2022ರಿಂದ ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ರಿಯಲ್ ಡ್ರೈವಿಂಗ್ ಎಮಿಷನ್(Real Driving Emissions) ನಿಯಮಾನುಸಾರವಾಗಿ ಹೊಸ ವಾಹನಗಳ ಎಂಜಿನ್ ಅಭಿವೃದ್ದಿಪಡಿಸುತ್ತಿರುವ ಮಹೀಂದ್ರಾ ಕಂಪನಿಯು ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸುಧಾರಿತ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಲು ನಿರ್ಧರಿಸಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಹೊಸ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು CAFA (ಕಾರ್ಪೊರೇಟ್ ಸರಾಸರಿ ಇಂಧನ ಆರ್ಥಿಕತೆ) ಮಾನದಂಡವನ್ನು ಸಮರ್ಥವಾಗಿ ಪೂರೈಸಲಿದ್ದು, ಹೊಸ ಸ್ಕಾರ್ಪಿಯೋ ಮತ್ತು ಬೊಲೆರೊ ಕಾರುಗಳಲ್ಲಿ ಥಾರ್ ಕಾರಿನಲ್ಲಿರುವ ಎಂಜಿನ್ ಆಯ್ಕೆಯನ್ನೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಸೇರ್ಪಡೆಗೊಳಿಸಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಇನ್ನು ಬೊಲೆರೊ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಹೊಸ ಎಸ್‍ಯುವಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿ ನಿರ್ಮಾಣಗೊಳ್ಳಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಇದು ಹೊಸ ಥಾರ್‌ಗೆ ಸಹ ಆಧಾರವಾಗಿದ್ದು, ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು 5-ಡೋರಿನ ಥಾರ್ ಎಸ್‍ಯುವಿಯನ್ನು ಕೂಡಾ ಇದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ನವೀಕರಿಸಿದ ಮಾದರಿಯು ಸೂಕ್ಷ್ಮ ವಿನ್ಯಾಸ ಬದಲಾವಣೆಗಳು ಮತ್ತು ನವೀಕರಿಸಿದ ಇಂಟಿರಿಯರ್ ಅನ್ನು ಹೊಂದಿರಲಿದ್ದು, ನ್ಯೂ ಜನರೇಷನ್ ಬೊಲೆರೊ ಅದೇ ಆಕರ್ಷಕ ಬಾಕ್ಸ್ ವಿನ್ಯಾಸವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಬೊಲೆರೊ ಎಸ್‍ಯುವಿಯು ಸಣ್ಣ ನಗರಗಳಲ್ಲಿ ಮತ್ತು ಗ್ರಾಮಿಣ ಭಾಗಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್ ನೀಡಲಾಗುತ್ತಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ನ್ಯೂ ಜನರೇಷನ್ ಬೊಲೆರೊದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರೇರ್ ಎಸಿ ವೆಂಟ್ ಗಳೊಂದಿಗೆ ಹೊಸ ಎಸಿ ಯುನಿಟ್, ಪವರ್ ವಿಂಡೋಸ್, ಮಲ್ಟಿ-ಫಂಕ್ಷನಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರೆ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಟಾಪ್-ಸ್ಪೆಕ್ ಮಾದರಿಯಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಮತ್ತು ಎಲ್ಇಡಿ ಟೈಲ್-ಲ್ಯಾಂಪ್ ಗಳನ್ನು ಸಹ ಪಡೆಯಬಹುದಾಗಿದ್ದು, ಇದು ಸ್ಕಿಡ್ ಪ್ಲೇಟ್, ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುವ ಒಆರ್‌ವಿಎಂಗಳು ಮತ್ತು ಹೊಸ ಫ್ರಂಟ್ ಗ್ರಿಲ್ ಪಡೆಯಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಹೊಸ ಬೊಲೆರೊದಲ್ಲಿ ಹೊಸ ಸುರಕ್ಷತೆ ಮತ್ತು ಕ್ರ್ಯಾಶ್ ಪರೀಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ದಿ ಹೊಂದಲಿದ್ದು, ಹೊಸ ಹೊಸ ಮಾದರಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸಿಸ್ಟಮ್, ವೆಹಿಕಲ್ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಂಗಾಗಿ ಮ್ಯಾನ್ಯುವಲ್ ಓವರ್‌ರೈಡ್ ಅನ್ನು ಸ್ಟಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಾಗಿ ಅಳವಡಿಸಲಾಗುತ್ತದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಸದ್ಯ ಮಾರುಕಟ್ಟೆಯಲ್ಲಿರುವ ಬೊಲೆರೊ ಎಸ್‌ಯುವಿ ಕಾರು ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, 1.5-ಲೀಟರ್ ಮ್ಯಾನುವಲ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ನ್ಯೂ ಜನರೇಷನ್ ಬೊಲೆರೊ ಹೊಸ 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಜೊತೆಗೆ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯಬಹುದಾಗಿದ್ದು, ನ್ಯೂ ಜನರೇಷನ್ ಎಸ್‍ಯುವಿಯು ಹೊಸ ಫೀಚರ್ಸ್ ಮತ್ತು ಕೆಲವು ವಿನ್ಯಾಸ ಬದಲಾವಣೆಗಳೊಂದಿಗೆ 2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಬೊಲೆರೊ ಕಾರು ಮಾದರಿಯ ಆರಂಭಿಕವಾಗಿ ರೂ.8.61 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.60 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ನ್ಯೂ ಜನರೇಷನ್ ಬೊಲೆರೊ ಕಾರು ಮಾದರಿಯು ಪ್ರಸ್ತುತ ಮಾದರಿಗಿಂತಲೂ ರೂ.1 ಲಕ್ಷದಿಂದ 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮತ್ತು ಬೊಲೆರೊ

ಹಾಗೆಯೇ ಹೊಸ ಸ್ಕಾರ್ಪಿಯೋ ಕಾರು ಹೊಸ ವಿನ್ಯಾಸ, ವಿಸ್ತರಿತ ಕ್ಯಾಬಿನ್ ಸ್ಥಳಾವಕಾಶ, ವಿವಿಧ ಎಂಜಿನ್ ಆಯ್ಕೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ. 12.78 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.43 ಲಕ್ಷ ಬೆಲೆ ಹೊಂದಿರುವ ಸ್ಕಾರ್ಪಿಯೋ ಕಾರು ಹೊಸ ತಲೆಮಾರಿನ ಆವೃತ್ತಿಯೊಂದಿಗೆ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
Mahindra new gen bolero and scorpio to comes with mild hybrid technology
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X