Just In
- 36 min ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 1 hr ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 2 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- 3 hrs ago ಅತ್ಯಾಧುನಿಕ ಅಡಾಸ್ನೊಂದಿಗೆ ಬರಲಿದೆ ಈ ಕಿಯಾ ಕಾರು: ಟಾಟಾ ಪಂಚ್ಗೆ ಇನ್ನು ದೇವರೇ ಗತಿ!
Don't Miss!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರ್ಚ್ ಅವಧಿಗಾಗಿ ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿದಾರರನ್ನು ಸೆಳೆಯಲು ಹಲವಾರು ಆಫರ್ಗಳನ್ನು ಘೋಷಣೆ ಮಾಡಿದ್ದ ಮಹೀಂದ್ರಾ ಕಂಪನಿಯು ಮಾರ್ಚ್ ಅವಧಿಗೂ ವಿಸ್ತರಿಸಿದ್ದು, ಕಾರು ಮಾದರಿಗಳಿಗೆ ಅನುಗುಣವಾಗಿ ಕನಿಷ್ಠ ರೂ. 17 ಸಾವಿರದಿಂದ ಗರಿಷ್ಠ ರೂ. 3 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ.
ಕೋವಿಡ್ ಪರಿಣಾಮ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಮಹೀಂದ್ರಾ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಹೊಸ ಆಫರ್ಗಳ ಮೂಲಕ ಕಾರು ಮಾರಾಟದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಹೀಗಾಗಿ ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದ ಕಂಪನಿಯು ಹೊಸ ಆಫರ್ಗಳನ್ನು ಮಾರ್ಚ್ ಅವಧಿಗೂ ಮುಂದುವರಿಸಿದೆ. ಹಾಗಾದ್ರೆ ಯಾವ ಕಾರಿನ ಖರೀದಿ ಮೇಲೆ ಎಷ್ಟು ಆಫರ್ ಲಭ್ಯವಿದೆ ಎಂಬುವುದನ್ನು ಇಲ್ಲಿ ತಿಳಿಯೋಣ.
ಎಕ್ಸ್ಯುವಿ300
ಕಂಪ್ಯಾಕ್ಟ್ ಎಸ್ಯುವಿ ಮಾದರಿಯಾದ ಎಕ್ಸ್ಯುವಿ300 ಕಾರು ಖರೀದಿಯ ಮೇಲೆ ಗರಿಷ್ಠ ರೂ. 44,500 ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್ನಲ್ಲಿ ಎಕ್ಸ್ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿರುವುದಲ್ಲದೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ದೊರೆಯಲಿದೆ.
ಎಕ್ಸ್ಯುವಿ300 ಮಾದರಿಯಲ್ಲಿ ಪೆಟ್ರೋಲ್ ಮಾದರಿಯ ಮೇಲೆ ರೂ. 39,500 ಮತ್ತು ಡೀಸೆಲ್ ಮಾದರಿಯ ಮೇಲೆ ರೂ. 44,500 ಆಫರ್ ಲಭ್ಯವಿದ್ದು, ಹೊಸ ಆಫರ್ ಈ ತಿಂಗಳು ಕೊನೆಯ ತನಕ ಲಭ್ಯವಿರಲಿದೆ.
ಬೊಲೆರೊ ಎಸ್ಯುವಿ
ಮಹೀಂದ್ರಾ ಜನಪ್ರಿಯ ಬೊಲೆರೊ ಕಾರು ಖರೀದಿ ಮೇಲೆ ಒಟ್ಟು ರೂ. 17,500 ಸಾವಿರ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಆಫರ್ಗಳಲ್ಲಿ ಎಕ್ಸ್ಚೆಂಜ್ ಆಫರ್, ಕಾರ್ಪೊರೆಟ್ ಬೊನಸ್ ಮತ್ತು ಕ್ಯಾಶ್ ಡಿಸ್ಕೌಂಟ್ ಸಹ ಲಭ್ಯವಿರಲಿವೆ. ಜೊತೆಗೆ ಆಯ್ದ ಮಾದರಿಗಳ ಮೇಲೆ ವಿಸ್ತರಿತ ವಾರಂಟಿ ಸೌಲಭ್ಯವು ಸಹ ಲಭ್ಯವಾಗಲಿದ್ದು, ನ್ಯೂ ಜನರೇಷನ್ ಮಾದರಿಗಳ ಬಿಡುಗಡೆಗಾಗಿ ಹೊಸ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದೆ.
ಸ್ಕಾರ್ಪಿಯೋ ಎಸ್ಯುವಿ
ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಕಾರು ಖರೀದಿಯ ಮೇಲೆ ರೂ.27,500 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್ಗಳು ಎಕ್ಸ್ಚೆಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್ ಸೇರಿ ವಿವಿಧ ಆಫರ್ ನೀಡುವುದರ ಜೊತೆಗೆ ಉಚಿತ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.
ಎಕ್ಸ್ಯುವಿ500 ಎಸ್ಯುವಿ
ಮಹೀಂದ್ರಾ ಕಂಪನಿಯು ಎಕ್ಸ್ಯುವಿ500 ಕಾರು ಖರೀದಿಯ ಮೇಲೆ ರೂ.80,800 ಡಿಸ್ಕೌಂಟ್ ನೀಡುತ್ತಿದ್ದು, ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ಲಭ್ಯವಿದೆ. ಹೊಸ ಆಫರ್ಗಳಲ್ಲಿ ರೂ. 36,800 ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಎಕ್ಸ್ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!
ಮರಾಜೋ ಎಂಪಿವಿ
ಮರಾಜೋ ಎಂಪಿವಿ ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ರೂ. 41 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್ಗಳಲ್ಲಿ ರೂ. 20 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸೇರಿದಂತೆ ಎಕ್ಸ್ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.
ಅಲ್ಟುರಾಸ್ ಜಿ4
ಎಸ್ಯುವಿ ಮಹೀಂದ್ರಾ ಕಂಪನಿ ತನ್ನ ಹೈ ಎಂಡ್ ಎಸ್ಯುವಿ ಕಾರು ಮಾದರಿಯಾದ ಅಲ್ಟುರಾಸ್ ಜಿ4 ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿಸುವ ಗ್ರಾಹಕರಿಗೆ ರೂ. 3 ಲಕ್ಷದಷ್ಟು ಆಫರ್ ನೀಡುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!
ಹೊಸ ಆಫರ್ನಲ್ಲಿ 2.20 ಲಕ್ಷ ಕ್ಯಾಶ್ ಡಿಸ್ಕೌಂಟ್, ರೂ. 50 ಸಾವಿರ ಎಕ್ಸ್ಚೆಂಜ್ ಆಫರ್, ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಸೇರಿದಂತೆ ರೂ.20 ಸಾವಿರದಷ್ಟು ಆಕ್ಸೆಸರಿಸ್ ಕೊಡುಗೆಗಳನ್ನು ನೀಡಲಾಗುತ್ತದ್ದು, ಹೊಸ ಆಫರ್ಗಳು ಈ ತಿಂಗಳು ಮುಕ್ತಾಯಗೊಳ್ಳಲಿವೆ.