ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ನ್ಯೂ ಜನರೇಷನ್ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ಐಕಾನಿಕ್-ಆಫ್ ರೋಡರ್ ಮಹೀಂದ್ರಾ ಥಾರ್ ಎಸ್‍ಯುವಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ನಡುವೆ ಮಹೀಂದ್ರಾ ತನ್ನ ಜನಪ್ರಿಯ ಎಸ್‍ಯುವಿಗಳನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದಾಗಿದೆ, ಪ್ರಸ್ತುತ ವಿವಿಧ ಕಾರು ಉತ್ಪಾದಕರ 8ಕ್ಕೂ ಹೆಚ್ಚು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದ ಮಹೀಂದ್ರಾ ಕಂಪನಿಯು ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ತಮ್ಮ ಎಕ್ಸ್‌ಯುವಿ300 ಮಾದರಿಯನ್ನು ಆಟೋಮ್ಯಾಟಿಕ್ ವೆರಿಯೆಂಟ್ ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ300 ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 200 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಇದರ ಜೊತೆಗೆ 1.5 ಲೀಟರ್ ಆಯಿಲ್ ಬರ್ನರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ300 ಪ್ರತಿಸ್ಪರ್ಧಿಗಳು ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ತಮ್ಮ ಮಾದರಿಗಳಲ್ಲಿ ಗೇರ್ ಬಾಕ್ಸ್ ನಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿರುವುದರಿಂದ, ಮಹೀಂದ್ರಾ ಹಿಂದೆ ಉಳಿಯಲು ಬಯಸುವುದಿಲ್ಲ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಸ್ವದೇಶಿ ಕಾರು ತಯಾರಕರಾದ ಮಹೀಂದ್ರಾ ಈಗ ಅಂತಿಮವಾಗಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಾಗಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಇದು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ದು ನಿರೀಕ್ಷಿಸುತ್ತೇವೆ.

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಇನ್ನು ಈ ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ300 ಕಾಂಪ್ಯಾಕ್ಟ್ ಎಸ್‍ಯುವಿಯು ಕಳೆದ ಆರು ವರ್ಷಗಳಿಂದ ಸತತವಾಗಿ ಗ್ಲೋಬಲ್ ಎನ್‌ಸಿಎಪಿಯಲ್ಲಿ ಸುರಕ್ಷತಾ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈ ಮಹೀಂದ್ರಾ ಎಕ್ಸ್‌ಯುವಿ300 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

2014 ಮತ್ತು 2020ರ ನಡುವೆ ಗ್ಲೋಬಲ್ ಎನ್‌ಸಿಎಪಿಯಲ್ಲಿ ಪರೀಕ್ಷಿಸಿದಎಲ್ಲಾ ಮಹೀಂದ್ರಾ ಎಕ್ಸ್‌ಯುವಿ300 ಸುರಕ್ಷಿತ 'ಮೇಡ್-ಇನ್-ಇಂಡಿಯಾ' ಕಾರು ಎಂಬ ಬೀರುದನ್ನು ಮೂಡಿಗೇರಿಸಿಕೊಂಡಿದೆ. ಕಳೆದ ಆರು ವರ್ಷಗಳಲ್ಲಿ ಗ್ಲೋಬಲ್ ಎನ್‌ಸಿಎಪಿಯಲ್ಲಿ ಟೆಸ್ಟ್ ನಡೆಸಿದ ಒಟ್ಟು 38 ವಾಹನಗಳ ನಡುವೆ ಮಹೀಂದ್ರಾ ಎಕ್ಸ್‌ಯುವಿ 300 ಅತಿ ಹೆಚ್ಚು ಸುರಕ್ಷಾತ ರೇಟಿಂಗ್ ಪಾಯಿಂಟ್ ಅನ್ನು ಪಡೆದುಕೊಂಡಿದೆ.

ಎಕ್ಸ್‌ಯುವಿ300 ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪರಿಚಯಿಸಲಿದೆ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ300 ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Mahindra XUV300 Petrol AT Coming This Month. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X