ವೈರಸ್ ಮಟ್ಟ ಹಾಕಬಲ್ಲದು ಹೊಸ ಎಕ್ಸ್‌ಯುವಿ700 ಕಾರಿನಲ್ಲಿರುವ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಮಹೀಂದ್ರಾ ಕಂಪನಿಯು ತನ್ನ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯನ್ನು ಮಧ್ಯಮ ಕ್ರಮಾಂಕದ ಕಾರುಗಳಲ್ಲಿಯೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ ಕೂಡಾ ಜೋಡಣೆಯಾಗಲಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಹೊಸ ಎಕ್ಸ್‌ಯುವಿ700 ಬಿಡುಗಡೆಯ ಕುರಿತಂತೆ ಮಹೀಂದ್ರಾ ಕಂಪನಿಯು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಕೆಲವು ಮಾಹಿತಿಗಳ ಪ್ರಕಾರ ಅಗಸ್ಟ್ 15ರಂದೇ ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದಲ್ಲಿ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್‌ಯುವಿ500 ಮಾದರಿಯ ನ್ಯೂ ಜನರೇಷನ್ ಮಾದರಿಯನ್ನೇ ಎಕ್ಸ್‌ಯುವಿ700 ಕಾರು ಮಾದರಿಯಾಗಿ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳನ್ನು ಜೋಡಣೆ ಹೊಂದಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಹೊಸ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳಾದ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್, ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್‌ರೂಫ್, ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳಿದ್ದು, ಇದೀಗ ಕಂಪನಿಯು ಹೊಸ ಕಾರಿನಲ್ಲಿ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ ಜೋಡಣೆ ಮಾಡಿರುವ ಬಗೆಗೆ ಟೀಸರ್ ಚಿತ್ರ ಹಂಚಿಕೊಂಡಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿಯು ಕಾರಿನ ಒಳಭಾಗದ ವಾತಾವರಣವನ್ನು ಅತಿ ಕಡಿಮೆ ಅವಧಿಯಲ್ಲಿ ಶುಚಿತ್ವಗೊಳಿಸುವ ಮೂಲಕ ಸೂಕ್ಷ್ಮವಾಗಿರುವ ವೈರಸ್‌ಗಳನ್ನು ಹೊಡೆದೊಡಿಸುವ ಸಾಮರ್ಥ್ಯ ಹೊಂದಿದ್ದು, ಇದು ಕೋವಿಡ್ ವಿರುದ್ದವೂ ಹೋರಾಡಲೂ ನೆರವಾಗಲಿದೆ ಎನ್ನಲಾಗಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಇನ್ನು ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಡೀಸೆಲ್ ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸದ್ಯ ಕಂಪನಿಯು 180 ಬಿಎಚ್‌ಪಿ, 190 ಬಿಎಚ್‌ಪಿ ಮತ್ತು 210 ಬಿಎಚ್‌ಪಿ ಟ್ಯೂನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ 180-ಬಿಎಚ್‌ಪಿ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಹೊಸ ಕಾರಿನಲ್ಲಿ ನೀಡಲಾಗುತ್ತಿರುವ ಪೆಟ್ರೋಲ್ ಎಂಜಿನ್ ಮಾಹಿತಿ ಲಭ್ಯವಿಲ್ಲವಾದರೂ ಥಾರ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಕಂಪನಿಯು ಡೀಸೆಲ್ ಮಾದರಿಯ ಹೈ ಎಂಡ್ ಆವೃತ್ತಿಯಲ್ಲಿ 210 ಬಿಎಚ್‌ಪಿ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳಿವೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾದರಿಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸದ್ಯ ಲಭ್ಯವಿರುವಂತಹ 7 ಸೀಟರ್ ಸೌಲಭ್ಯವನ್ನು ತೆಗೆದುಹಾಕಿ ಆರಾಮದಾಯಕ ಕ್ಯಾಬಿನ್ ರೂಂ ಹೊಂದಿರುವ 5 ಸೀಟರ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲಿದೆ.

ಹೊಸ ಎಕ್ಸ್‌ಯುವಿ700 ಕಾರಿನಲ್ಲಿದೆ ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿ!

ಈ ಮೂಲಕ 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ.

Most Read Articles

Kannada
English summary
Mahindra XUV700 SUV To Get Air Filter Technology. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X