ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಆಫ್ ರೋಡ್ ಎಸ್‌ಯುವಿ ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಆಫ್ ರೋಡ್ ಎಸ್‌ಯುವಿ ಮಾದರಿಯ ಕಾರು ಮಾರಾಟದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 10.68 ಲಕ್ಷದಿಂದ ಟಾಪ್ ಮಾದರಿಯು ರೂ. 15.08 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಆಸಕ್ತ ಗ್ರಾಹಕರು ಆಫ್ ರೋಡ್ ಎಸ್‌ಯುವಿ ಮಾದರಿಗಾಗಿ ಹೆಚ್ಚುವರಿ ಪ್ಯಾಕೇಜ್‌ನೊಂದಿಗೆ ಮತ್ತಷ್ಟು ಪ್ರೀಮಿಯಂ ಮತ್ತು ಸೆಫ್ಟಿ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಮಹೀಂದ್ರಾ ಕಂಪನಿಯೇ ಆಫ್ಟರ್ ಮಾರ್ಕೆಟ್ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡುತ್ತದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಕಂಪನಿಯು ನೀಡದಿರುವ ವಿವಿಧ ಬಣ್ಣಗಳ ಆಯ್ಕೆ ಮತ್ತು ಆಕರ್ಷಕ ಟೈರ್ ಸೌಲಭ್ಯಗಳನ್ನು ಅಳವಡಿಸಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಗ್ರಾಹಕರ ಬೇಡಿಕೆಯೆಂತೆ ಇತ್ತೀಚೆಗೆ ಥಾರ್ ಮಧ್ಯಮ ಗಾತ್ರದ ಆವೃತ್ತಿಯೊಂದು ಬಬಲ್‌ಗಂ ಪಿಂಕ್ ಬಣ್ಣದೊಂದಿಗೆ ಮಾಡಿಫಿಕೇಷನ್ ಪಡೆದುಕೊಂಡಿದ್ದು, ಹೊಸ ಕಾರು ಕಂಪನಿಯೇ ನೀಡಿರುವ ಬಣ್ಣದ ಆಯ್ಕೆ ಹೊಂದಿರುವ ಮಾದರಿಯಲ್ಲಿ ಸಿದ್ದಗೊಂಡಿದೆ. ಹೊಸ ಬಣ್ಣದ ಆಯ್ಕೆಯು ಕಾರಿಗೆ ಹೊಸ ಲುಕ್ ನೀಡಿದ್ದು, ದೆಹಲಿ ಮೂಲದ ಅಪ್‌ಶಿಫ್ಟ್ಆಟೋ ಎನ್ನುವ ಕಸ್ಟಮ್ ಮಾಡಿಫೈ ಕಂಪನಿಯು ಈ ಹೊಸ ಬಣ್ಣದ ಆಯ್ಕೆಯನ್ನು ನೀಡಿದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಭಾರತದಲ್ಲಿ ವೈಟ್, ರೆಡ್, ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳ ವಾಹನಗಳ ಹೆಚ್ಚಿನ ಬೇಡಿಕೆಯಿದ್ದರೂ ಪಿಂಕ್ ಬಣ್ಣಗಳ ಆಯ್ಕೆಯು ತುಂಬಾ ವಿರಳವಾಗಿದೆ. ಹಲವಾರು ಐಷಾರಾಮಿ ಕಾರು ಉತ್ಪಾದನಾ ಕಂಪನಿಗಳು ತಮ್ಮ ಸ್ಪೋರ್ಟ್ ಕಾರುಗಳಲ್ಲಿ ಕಾರುಗಳಲ್ಲಿ ಪಿಂಕ್ ಬಣ್ಣವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದರೂ ಭಾರತದಲ್ಲಿ ಪಿಂಕ್ ಬಣ್ಣದ ವಾಹನಗಳು ಅಪರೂಪ ಎನ್ನಬಹುದು.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಗ್ರಾಹಕರ ಬೇಡಿಕೆಯೆಂತೆ ಇತ್ತೀಚೆಗೆ ಥಾರ್ ಮಧ್ಯಮ ಗಾತ್ರದ ಆವೃತ್ತಿಯೊಂದು ನಾರ್ಡೊ ಗ್ರೆ ಬಣ್ಣದ ವ್ಯಾರ್ಪ್ ಮಾಡಿಫಿಕೇಷನ್ ಪಡೆದುಕೊಂಡಿದ್ದು, ಹೊಸ ಕಾರು ಕಂಪನಿಯೇ ನೀಡಿರುವ ಬಣ್ಣದ ಆಯ್ಕೆ ಹೊಂದಿರುವ ಮಾದರಿಯಲ್ಲಿ ಸಿದ್ದಗೊಂಡಿದೆ. ಹೊಸ ಬಣ್ಣದ ಆಯ್ಕೆಯೊಂದಿಗೆ ಸ್ಟಿಕರ್ಸ್ ಡಿಸೈನ್ ಕೂಡಾ ಆಫ್ ರೋಡ್ ಮಾದರಿಗೆ ಹೊಸ ಲುಕ್ ನೀಡಿದ್ದು, ಬ್ಲ್ಯಾಕ್ ಯಾರ್ಡ್ ಕಸ್ಟಮ್ ಎನ್ನುವ ಮಾಡಿಫೈ ಕಂಪನಿಯೊಂದಿಗೆ ಹೊಸ ಬಣ್ಣದ ಆಯ್ಕೆಯನ್ನು ನೀಡಿದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಅಪ್‌ಶಿಫ್ಟ್ಆಟೋ ಕಸ್ಟಮ್ ಕಂಪನಿಯು ಗ್ರಾಹಕರ ಬೇಡಿಕೆಗೆ ಮೇರೆಗೆ ಪಿಂಕ್ ವ್ಯಾರ್ಪ್ ನೀಡಿದ್ದು, ಹೊಸ ಬಣ್ಣದ ಆಯ್ಕೆಯನ್ನು ಬೇಡವಾದಲ್ಲಿ ಮತ್ತೆ ತೆಗೆದುಹಾಕಬಹುದಾಗಿದೆ. ಆಫ್ ಕೌಶಲ್ಯಕ್ಕಾಗಿ ತಾತ್ಕಾಲಿಕವಾಗಿ ಇಂತಹ ಬಣ್ಣಗಳನ್ನು ಪಡೆದುಕೊಳ್ಳುವ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ತಾತ್ಕಾಲಿಕ ಬಣ್ಣದಿಂದ ಮೂಲ ಬಣ್ಣಕ್ಕೆ ಯಾವುದೇ ಹಾನಿಯಾಗದಂತೆ ಮಾಡಬಹುದಾಗಿದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಇನ್ನು ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಥಾರ್ ಖರೀದಿ ಮಾಡುವ ಶೇ. 80ಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಇಷ್ಟದಂತೆ ಮಾಡಿಫೈ ಸೌಲಭ್ಯವನ್ನು ಹೊಂದಿದ್ದಾರೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಹೀಗಾಗಿ ಹಲವಾರು ಮಾಡಿಫೈ ಕಂಪನಿಗಳು ಥಾರ್ ಕಾರು ಮಾದರಿಗಾಗಿ ಹಲವಾರು ಮಾಡಿಫೈ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬಣ್ಣದ ಆಯ್ಕೆಯು ಥಾರ್ ಮಾಲೀಕರ ಪ್ರಮುಖ ಆಕರ್ಷಣೆಯಾಗಲಿದೆ.

ಪಿಂಕ್ ಬಣ್ಣದಲ್ಲಿ ಮಿಂಚಿದ ನ್ಯೂ ಜನರೇಷನ್ ಮಹೀಂದ್ರಾ ಥಾರ್ ಎಸ್‌ಯುವಿ

ಸದ್ಯ ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

Image Courtesy: Upshift Autos/Instagram

Most Read Articles

Kannada
English summary
India’s First New Mahindra Thar In Hot Pink Colour: This Is It!
Story first published: Wednesday, July 21, 2021, 21:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X