ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆಯನ್ನು ಎದುರಿಸುತ್ತಿದೆ ಮಹೀಂದ್ರಾ ಥಾರ್

ಮಹೀಂದ್ರಾ ಕಂಪನಿಯು ನ್ಯೂ ಥಾರ್ ಮೂಲಕ ಮೊದಲ ಬಾರಿಗೆ ಆಫ್ ಎಸ್‌ಯುವಿ ಕಾರು ಮಾರಾಟದಲ್ಲಿ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕಾರಿನ ಪ್ರಮುಖ ತಾಂತ್ರಿಕ ಅಂಶಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದು ವಿತರಣೆ ಅವಧಿಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಥಾರ್ ಎಸ್‌ಯುವಿ ಕಾರು ಮಾದರಿಯನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ 2ನೇ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಕೈಗೊಂಡಿರುವ ಮಹೀಂದ್ರಾ ಕಂಪನಿಯು ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಥಾರ್ ಉತ್ಪಾದನೆಯನ್ನು ಪ್ರತಿ ತಿಂಗಳಿಗೆ 2 ಸಾವಿರ ಯುನಿಟ್‌ನಿಂದ 3 ಸಾವಿರಕ್ಕೆ ಹೆಚ್ಚಳ ಮಾಡಿದ್ದು, ಉತ್ಪಾದನೆ ಹೆಚ್ಚಳ ಮಾಡಲಾಗಿದ್ದರೂ ಹೊಸ ಕಾರಿನ ಪ್ರಮುಖ ತಾಂತ್ರಿಕ ಅಂಶಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದು ಕಾರಿನ ವಿತರಣೆಯ ಮೇಲೆ ಪರಿಣಾಮ ಬೀರುತ್ತಿದೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಹೆಚ್ಚಳವಾಗಿರುವುದರಿಂದ ಪ್ರಮುಖ ತಾಂತ್ರಿಕ ಅಂಶಗಳ ಕೊರತೆಯ ನಡುವೆಯೂ ಹೊಸ ಕಾರುಗಳನ್ನು ಡೀಲರ್ಸ್ ಸ್ಟಾಕ್ ಯಾರ್ಡ್‌ಗಳಲ್ಲಿ ಹಲವು ತಾಂತ್ರಿಕ ಅಂಶಗಳ ಅಳವಡಿಕೆಯಿಲ್ಲದೆಯೇ ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಮಹೀಂದ್ರಾ ಡೀಲರ್ಸ್ ಸ್ಟಾಕ್ ಯಾರ್ಡ್‌ನಲ್ಲಿ ಹೊಸದಾಗಿ ಕಂಡುಬಂದ ಕಾರುಗಳ ಸ್ಟಾಕ್‌ನಲ್ಲಿ ಹಲವು ಕಾರುಗಳು ಇನ್ಪೋಟೈನ್‌ಮೆಂಟ್ ಜೋಡಣೆಯಿಲ್ಲದೆ ಕಂಡುಬಂದಿದ್ದು, ಬಿಡಿಭಾಗಗಳ ಪೂರೈಕೆ ನಂತರ ಜೋಡಣೆ ಮಾಡಿ ವಿತರಣೆ ಮಾಡಲಿದೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಮಾಹಿತಿಗಳ ಪ್ರಕಾರ ಥಾರ್ ಕಾರುಗಳಿಗೆ ಇನ್ಪೊಟೈನ್‌ಮೆಂಟ್ ಸಿಸ್ಟಂ ಮಾತ್ರವಲ್ಲ ಹಲವು ಬಿಡಿಭಾಗಗಳು ಸರಿಯಾದ ಸಮಯಕ್ಕೆ ಪೂರೈಕೆಯಾಗದೆ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದ್ದು, ಥಾರ್ ಹೊಸ ಕಾರು ಖರೀದಿಗೆ ಸದ್ಯ ಬುಕ್ಕಿಂಗ್ ಸಲ್ಲಿಕೆ ಮಾಡಿದರೆ ಕನಿಷ್ಠ 6 ತಿಂಗಳಿನಿಂದ ಗರಿಷ್ಠ 10 ತಿಂಗಳ ಕಾಲ ಕಾಯಬೇಕಿದೆ. ಥಾರ್ ಹೊಸ ಕಾರಿಗೆ ಇದುವರೆಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದು, ಇದುವರೆಗೆ ಕಂಪನಿಯು ಕೇವಲ 4 ಸಾವಿರ ಯುನಿಟ್‌ಗಿಂತಲೂ ಕಡಿಮೆ ವಿತರಣೆ ಮಾಡಿದೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಜನವರಿಯಿಂದ ಹೊಸ ಕಾರಿನ ವಿತರಣೆಯಲ್ಲಿ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದ ಮಹೀಂದ್ರಾ ಕಂಪನಿಗೆ ಬಿಡಿಭಾಗಗಳ ಕೊರತೆಯು ಥಾರ್ ಮಾರಾಟ ಹೆಚ್ಚಿಸುವ ಯೋಜನೆಗೆ ಹಿನ್ನಡೆ ಉಂಟು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡಿಭಾಗಗಳ ಪೂರೈಕೆಯು ಸಹಜ ಸ್ಥಿತಿಯತ್ತ ಮರಳಲಿದೆ ಎನ್ನಲಾಗಿದೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಕರೋನಾ ವೈರಸ್ ಪರಿಣಾಮ ಹಲವಾರು ಆಟೋ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸಿ ಉತ್ಪಾದನಾ ಪ್ರಮಾಣವನ್ನು ಕಡಿತಗೊಳಿಸಿದ್ದವು. ಇದೀಗ ಬೇಡಿಕೆ ಹೆಚ್ಚುತ್ತಿದ್ದರೂ ಬೇಡಿಕೆ ಪೂರೈಕೆಯಲ್ಲಿ ಹಿನ್ನಡೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕಾರ್ಮಿಕರ ಮರು ನೇಮಕವು ಹೆಚ್ಚಳವಾಗುವುದರ ಜೊತೆಗೆ ಪೂರೈಕೆಯಲ್ಲಿ ಹೆಚ್ಚಳವಾಗುವ ನೀರಿಕ್ಷೆಯಿವೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಇನ್ನು ವಿವಿಧ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಥಾರ್ ಕಾರು ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.10 ಲಕ್ಷದಿಂದ ಟಾಪ್ ಮಾದರಿಯು ರೂ. 14.15 ಲಕ್ಷ ಬೆಲೆ ಪಡೆದುಕೊಂಡಿದ್ದು, ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಹರಿದುಬರುತ್ತಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಆಫ್ ರೋಡಿಂಗ್ ವೈಶಿಷ್ಟ್ಯತೆಯೊಂದಿಗೆ ತನ್ನದೆ ಆದ ಜನಪ್ರಿಯೆತೆ ಹೊಂದಿರುವ ಥಾರ್ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಳಂತೆ ಬೇಡಿಕೆ ಮುಂಚೂಣಿ ಸಾಧಿಸುತ್ತಿದ್ದು, ನ್ಯೂ ಜನರೇಷನ್ ಥಾರ್ ಖರೀದಿ ಮಾಡಿರುವ ಗ್ರಾಹಕರಲ್ಲಿ ಬಹುತೇಕರು ಹೊಸದಾಗಿ ಆಫ್ ಕೌಶಲ್ಯದ ಆಸಕ್ತಿಯೊಂದಿಗೆ ಥಾರ್ ಮಾಲೀಕತ್ವ ಪಡೆದುಕೊಂಡವರಾಗಿದ್ದಾರೆ.

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಹೊಸ ಥಾರ್ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರೀ ಬೇಡಿಕೆಯ ನಡುವೆ ಬಿಡಿಭಾಗಗಳ ಕೊರತೆ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೊತೆಗೆ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದೆ.

Most Read Articles

Kannada
English summary
Mahindra Thar SUVs Spotted At Dealerships Without Infotainment System. Read in Kannada.
Story first published: Wednesday, January 27, 2021, 22:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X