ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಮಹೀಂದ್ರಾ(Mahindra) ಕಳೆದ ತಿಂಗಳ ಹಿಂದಷ್ಟೇ ತನ್ನ ಟಿಯುವಿ 300 ಮಾದರಿಯನ್ನು ಬೊಲೆರೊ ನಿಯೋ ಹೆಸರಿನಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಕಂಪನಿಯು ಟಿಯುವಿ 300 ಪ್ಲಸ್ ಮಾದರಿಯನ್ನು ಸಹ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಟಿಯುವಿ 300 ಫೇಸ್‌ಲಿಫ್ಟ್ ಮಾದರಿಯನ್ನು ಬೊಲೆರೊ ನಿಯೋ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಮಹೀಂದ್ರಾ ಕಂಪನಿಯು ಟಿಯುವಿ 300 ಪ್ಲಸ್ ಮಾದರಿಯನ್ನು ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಎಸ್‌ಯುವಿ ಸರಣಿಯಲ್ಲಿ ಸಾಕಷ್ಟು ಬದಲಾವಣೆ ತರುತ್ತಿರುವ ಮಹೀಂದ್ರಾ ಕಂಪನಿಯು ಈ ಹಿಂದಿನ ಟಿಯುವಿ 300 ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದರೂ ಸಹ ಹೊಸ ಹೆಸರಿನೊಂದಿಗೆ ಫೇಸ್‌ಲಿಫ್ಟ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಬೊಲೆರೊ ನಿಯೋ ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ಮಾಡಿಫೈಗೊಳಿಸಿದ ಹೆಡ್‌ಲ್ಯಾಂಪ್‌, ಹಾರಿಜಂಟಲ್ ಆಗಿರುವ ಎಲ್‌ಇಡಿ ಡಿಆರ್‌ಎಲ್ ಲೈಟ್‌ಗಳನ್ನು ಹೊಂದಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಇದರ ಜೊತೆಗೆ ಹೊಸ ಕಾರಿನಲ್ಲಿ ವಿಶಾಲವಾದ ಏರ್ ಡ್ಯಾಂ, ಸರ್ಕ್ಯೂಲರ್ ಫಾಗ್ ಲೈಟ್, ಮರುವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್, ಹೊಸ ಬೊಲೆರೊ ನಿಯೋ ಬ್ಯಾಡ್ಜಿಂಗ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳು ಈ ಎಸ್‌ಯುವಿಯಲ್ಲಿ ಕಾಣಬಹುದಾಗಿದ್ದು, ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಬೊಲೆರೊ ನಿಯೋ ಎಸ್‌ಯುವಿಯಲ್ಲಿ ಮಹೀಂದ್ರಾ ಕಂಪನಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌, ಎಬಿಎಸ್ ಜೊತೆ ಇಬಿಡಿ, ಸಿಬಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಹೊಸ ಕಾರು ಮಾದರಿಯಲ್ಲಿ ಈ ಹಿಂದಿನ ಟಿಯುವಿ300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ರಾಕಿ ಬಿಜ್, ಮೆಜೆಸ್ಟಿಕ್ ಸಿಲ್ವರ್, ಹೈವೆ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್, ನಪೊಲಿ ಬ್ಲ್ಯಾಕ್ ಮತ್ತು ರಾಯಲ್ ಗೋಲ್ಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಕಾರು ಬೆಲೆ ವಿಚಾರದಲ್ಲಿ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

7 ಸೀಟರ್ ಸೌಲಭ್ಯದೊಂದಿಗೆ ಬೊಲೆರೊ ಆವೃತ್ತಿಯು ಸದ್ಯ ಎನ್4, ಎನ್8, ಎನ್10 ಮತ್ತು ಎನ್10(ಒ) ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.48 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.69 ಲಕ್ಷ ಬೆಲೆ ಹೊಂದಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ತಾಂತ್ರಿಕ ಅಂಶಗಳ ಜೋಡಣೆಯ ಆಧಾರದ ಮೇಲೆ ಎನ್4(ರೂ.8.48 ಲಕ್ಷ), ಎನ್8(ರೂ.9.48 ಲಕ್ಷ), ಎನ್10(ರೂ.9.99 ಲಕ್ಷ) ಮತ್ತು ಎನ್10 ಆಪ್ಷನ್(ರೂ.10.69) ಬೆಲೆ ಹೊಂದಿದ್ದು, ಹೊಸ ಕಾರು ಸ್ಕಾರ್ಪಿಯೋ ಮತ್ತು ಥಾರ್ ಕಾರಿನ ಮ್ಯಾಡುಲರ್ ಚಾರ್ಸಿ ಸೌಲಭ್ಯದೊಂದಿಗೆ ಹಲವು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಹೊಸ ಬೊಲೆರೊ ನಿಯೋ ಮಾದರಿಯ ವಿತರಣೆಯನ್ನು ಈಗಾಗಲೇ ಆರಂಭಿಸಿರುವ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ 9 ಸೀಟರ್ ಸೌಲಭ್ಯದ ಟಿಯುವಿ 300 ಪ್ಲಸ್ ಮಾದರಿಯೊಂದಿಗೆ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡುವ ನೀರಿಕ್ಷೆಯಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಹೊಸ ಬೊಲೆರೊ ನಿಯೋ ಪ್ಲಸ್ ಕಾರು ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಎಂಜಿನ್ ಆಯ್ಕೆ ಮತ್ತು ಬೆಲೆ ಅಂತರದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದು, ಬೊಲೆರೊ ನಿಯೋ ಮಾದರಿಯಲ್ಲಿಯೇ ಬಹುತೇಕ ತಾಂತ್ರಿಕ ಸೌಲಭ್ಯ ಹೊಂದಿರುವ ಬೊಲೆರೊ ನಿಯೋ ಪ್ಲಸ್ ಮಾದರಿಯು ಎಂಪಿವಿ ಕಾರು ಮಾದರಿಗಳಿಗೂ ಉತ್ತಮ ಪೈಪೋಟಿ ನೀಡಲಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

9 ಸೀಟರ್ ಸೌಲಭ್ಯ ಹೊಂದಿರುವ ಹೊಸ ಬೊಲೆರೊ ನಿಯೋ ಪ್ಲಸ್ ಮಾದರಿಯು 2+3+4 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿದ್ದು, ಹಿಂಬದಿಯ ಸಾಲಿನಲ್ಲಿ ಬೆಂಚ್ ಸೀಟ್ ಪಡೆದುಕೊಂಡಿದೆ. ಹೊಸ ಕಾರು ಬೊಲೆರೊ ನಿಯೋ ಮಾದರಿಗಿಂತಲೂ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

ಬೊಲೆರೊ ನಿಯೋ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟಿಯುವಿ300 ಪ್ಲಸ್ ಫೇಸ್‌ಲಿಫ್ಟ್ ವರ್ಷನ್

ಹೊಸ ಕಾರು ಮಾದರಿಯಲ್ಲಿ ಈ ಹಿಂದಿನ TUV300 ಪ್ಲಸ್ ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಾಗುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

Most Read Articles

Kannada
English summary
Mahindra tuv300 plus facelift o launch rename as bolero neo plus soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X