ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಗಳಿಗಾಗಿ ಮಾರುಕಟ್ಟೆಯಲ್ಲಿರುವ ಕೆಯುವಿ100 ಮತ್ತು ಮರಾಜೋ ಕಾರುಗಳ ಮಾರಾಟ ಸ್ಥಗಿತಗೊಳಿಸಲಿದೆ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಿದ್ದು, ಕೆಯುವಿ100 ಮತ್ತು ಮರಾಜೋ ಕಾರುಗಳು ಪ್ರತಿಸ್ಪರ್ಧಿಗಳಿಂತಲೂ ಕಡಿಮೆ ಬೇಡಿಕೆ ಹೊಂದಿದ್ದರೂ ಕಂಪನಿಯ ಕಾರುಗಳ ಮಾರಾಟದಲ್ಲಿ ಅವುಗಳ ಮುಖ್ಯವಿದೆ ಎಂದಿದ್ದಾರೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಕಾರುಗಳ ಮಾರಾಟದಲ್ಲಿ ಕಂಪನಿಗೆ ಜನಪ್ರಿಯತೆ ತಂದುಕೊಡುವಲ್ಲಿ ಕೆಯುವಿ100 ಮತ್ತು ಮರಾಜೊ ಎಂಪಿವಿ ಕಾರುಗಳು ಪ್ರಮುಖ ವಹಿಸಿದ್ದು, ಬೇಡಿಕೆ ತಗ್ಗಿರುವ ಕಾರಣಕ್ಕೆ ಆ ಕಾರುಗಳ ಮಾರಾಟ ಸ್ಥತಗೊಳಿಸುವ ಯಾವುದೇ ಯೋಜನೆಯಿಲ್ಲವೆಂದಿದೆ. ಜೊತೆಗೆ ಗ್ರಾಹಕರ ಬೇಡಿಕೆಯಲ್ಲಿ ಸತತ ಹಿನ್ನಡೆ ಅನುಭವಿಸುತ್ತಿರುವ ಕೆಯುವಿ100 ಮತ್ತು ಮರಾಜೊ ಎಂಪಿವಿ ಕಾರುಗಳಿಗೆ ಶೀಘ್ರದಲ್ಲೇ ಕಂಪನಿಯು ಹೊಸ ಬದಲಾವಣೆ ಪರಿಚಯಿಸುವ ಸುಳಿವು ನೀಡಿದೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಕೆಯುವಿ100 ಮತ್ತು ಮರಾಜೊ ಎಂಪಿವಿ ಕಾರುಗಳು ಆಯಾ ಸೆಗ್ಮೆಂಟ್‌ನಲ್ಲಿ ಉತ್ತಮಾಗಿದ್ದರೂ ವಿವಿಧ ಎಂಜಿನ್ ಆಯ್ಕೆ, ಕಾರ್ ಕನೆಕ್ಟ್ ಟೆಕ್ನಾಜಿ ಸೌಲಭ್ಯಗಳ ಕೊರತೆಯು ಹೊಸ ಕಾರುಗಳ ಮಾರಾಟ ತಗ್ಗಲು ಪ್ರಮುಖ ಕಾರಣವಾಗಿವೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಮೇಲಿನ ಎರಡು ಕಾರುಗಳಲ್ಲೂ ಪೆಟ್ರೋಲ್ ಮಾನ್ಯುವಲ್ ಇಲ್ಲವೇ ಡೀಸೆಲ್ ಮ್ಯಾನುವಲ್ ಮಾತ್ರ ಖರೀದಿಗೆ ಲಭ್ಯವಿದ್ದು, ಮರಾಜೊ ಕಾರಿನ ಪೆಟ್ರೋಲ್ ಎಂಟಿಎ ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿವೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಹಾಗೆಯೇ ಕೆಯುವಿ100 ಮಾದರಿಯನ್ನು ಹೊಸ ಎಂಜಿನ್ ಆಯ್ಕೆ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೋಡಣೆ ಮಾಡುವ ಸುಳಿವು ನೀಡಿದ್ದು, ಕೆಯುವಿ100 ಮತ್ತು ಮರಾಜೊ ಎಂಪಿವಿ ಕಾರುಗಳನ್ನು ಸದ್ಯ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂಬುವುದನ್ನು ಮಹೀಂದ್ರಾ ಕಂಪನಿಯೇ ಅಧಿಕೃತ ಮಾಹಿತಿ ಹಂಚಿಕೊಂಡಿವೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಇನ್ನು ಮಹೀಂದ್ರಾ ಕಂಪನಿಯು ಹೊಸ ಕಾರು ಮಾದರಿಗಳಿಗಾಗಿ ಈಗಾಗಲೇ ಸಿದ್ದತೆ ನಡೆಸಿರುವ ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳೊಂದಿಗೆ ಹೊಸ ಕಾರುಗಳೊಂದಿಗೆ ಮೈಕ್ರೊ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ500, ಎಕ್ಸ್‌ಯುವಿ300, ಬೊಲೆರೊ, ಸ್ಕಾರ್ಪಿಯೋ ಮಾದರಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಹೊಂದಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಹೊಸ ಕಾರುಗಳ ಬಿಡುಗಡೆಗಾಗಿ ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ನೋಂದಣಿಯನ್ನು ಕೂಡಾ ಮಾಡಲಾಗಿದ್ದು, ಎಕ್ಸ್‌ಯುವಿ ಸರಣಿಯಲ್ಲಿ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಹೊಸ ಹಕ್ಕು ಸ್ವಾಮ್ಯ ಪ್ರತಿಯಲ್ಲಿ ಮಹೀಂದ್ರಾ ಕಂಪನಿಯ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಕ್ಸ್‌ಯುವಿ700 ಮಾದರಿಯೊಂದಿಗೆ ಎಕ್ಸ್‌ಯುವಿ100, ಎಕ್ಸ್‌‌ಯುವಿ400, ಎಕ್ಸ್‌ಯುವಿ900 ಎಸ್‌ಯುವಿ, ಎಕ್ಸ್‌ಯುವಿ900 ಕೂಪೆ ಸೇರಿ ಒಟ್ಟು ಐದು ಹೊಸ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಕೆಯುವಿ100 ಮತ್ತು ಮರಾಜೋ ಕಾರು ಮಾರಾಟ ಸ್ಥಗಿತ ಕುರಿತು ಸ್ಪಷ್ಟನೆ ನೀಡಿದ ಮಹೀಂದ್ರಾ

ಹೊಸ ಕಾರುಗಳಲ್ಲಿ ಎಕ್ಸ್‌ಯುವಿ100 ಮಾದರಿಯು ಕೆಯುವಿ100 ಸ್ಥಾನಕ್ಕೆ ಸಿದ್ದಪಡಿಸಲಾಗಿದೆ ಎನ್ನಲಾಗಿದ್ದು, ಹೈ ಎಂಡ್ ಮಾದರಿಯಾದ ಎಕ್ಸ್‌ಯುವಿ900 ಮಾದರಿಯು ಸ್ಥಗಿತವಾಗಲಿರುವ ಅಲ್ಟುರಾಸ್ ಜಿ4 ಸ್ಥಾನ ತುಂಬುವುದರ ಜೊತೆಗೆ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
English summary
Mahindra Won't Discontinue Marazzo And KUV100 In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X