ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಇತ್ತೀಚೆಗೆ ಭಾರತದಲ್ಲಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿದೆ. ಮಹೀಂದ್ರಾ ತನ್ನ ಬೊಲೆರೊ ಅಧಾರಿತ ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಈ ಹೆಸರನ್ನು ಬಳಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಸ್ವದೇಶಿ ಯುವಿ ತಯಾರಕರಾದ ಮಹೀಂದ್ರಾ ಇತ್ತೀಚೆಗೆ ಪ್ರಯಾಣಿಕರ ವಾಹನಗಳು ಮತ್ತು ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಮಾದರಿಗಳ ಮಾರ್ಗಸೂಚಿಯನ್ನು ಬಹಿರಂಗಪಡಿಸಿದರು. ಬ್ರ್ಯಾಂಡ್ ಇತ್ತೀಚೆಗೆ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿತು ಮತ್ತು ಇದು ಹೊಸ ಸರಣಿಯ ಪಿಕ್‌ಅಪ್ ಟ್ರಕ್ ಮಾದರಿಯಾಗಿರಬಹುದು ಎಂದು ವರದಿಗಳಾಗಿದೆ. ಮಹೀಂದ್ರಾ ಕಂಪನಿಯು ಹೊಸ ಟ್ಯಾಗ್‌ಲೈನ್ ಅಡಿಯಲ್ಲಿ ಮಾಲೀಕತ್ವದ ಕಡಿಮೆ ವೆಚ್ಚವನ್ನು ಹೊಂದಿರುವ ಹೊಸ ವಾಹನಗಳ ಪಟ್ಟಿಯ ಮಾಹಿತಿ ಬಹಿರಂಗವಾಗಿದೆ.

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಇದರಲ್ಲಿ ಪಿಕ್‌ಅಪ್ ಟ್ರಕ್‌ಗಳು, ತ್ರಿಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿವೆ. ವಾಣಿಜ್ಯ ವಾಹನ ವಿಭಾಗದಲ್ಲಿ ಹದಿನಾಲ್ಕು ಹೊಸ ಮಾದರಿಗಳನ್ನು ಮಹೀಂದ್ರಾ ಕಂಪನಿಯು 2026ರ ವೇಳೆಗೆ ವಿವಿಧ ಬೆಲೆಗಳಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಬೊಲೆರೊ 2000 ರಿಂದ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಇದು ಇನ್ನೂ ಬ್ರ್ಯಾಂಡ್‌ಗೆ ಹೆಚ್ಚು ಸ್ಥಿರವಾದ ಮಾರಾಟವನ್ನು ತಂದುಕೊಡುವ ಮಾದರಿಯಾಗಿದೆ. ಅದರೆ ಈ ಮಾದರಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ,

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಕಾಲಕ್ಕೆ ತಕ್ಕಂತೆ ಅವಶ್ಯಕತೆ ಇರುವ ಸಣ್ನ ಬದಲಾವನೆಗಳನ್ನು ಮಾಡಲಾಗಿದೆ, ಸದ್ಯ ಕಂಪನಿಯು ನ್ಯೂ ಜನರೇಷನ್ ಮಹೀಂದ್ರಾ ಬೊಲೆರೊ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ಆದರೆ ಕಂಪನಿಯು ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಬೊಲೆರೊವನ್ನು ಆಧರಿಸಿದ ಹೊಸ ಪಿಕಪ್ ಟ್ರಕ್ ಸರಣಿಯನ್ನು 2021-23 ಅವಧಿಯಲ್ಲಿ ಬರಲು ಕಂಪನಿಯು ಪಟ್ಟಿ ಮಾಡಲಾಗಿದೆ. ಬೊಲೆರೊ ಕ್ಲಾಸಿಕ್ ಆಧಾರಿತ ಇನ್ನೂ ಎರಡು ಪಿಕಪ್ ಟ್ರಕ್‌ಗಳು 2023-24 ಅವಧಿಯಲ್ಲಿ ಬರಲಿವೆ. ಕೆಲವು ವರದಿಗಳ ಪ್ರಕಾರ ಮುಂಬರುವ ಸರಣಿಯನ್ನು ಎಕ್ಸ್‌ಡ್ರಿನೊ ಎಂದು ಕರೆಯಬಹುದು.

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಭವಿಷ್ಯದ ವಾಣಿಜ್ಯ ವಿಭಾಗದ ವಾಹನಗಳ ಬಗ್ಗೆ ವಿಸ್ತಾರವಾಗಿ ಹೇಳುವುದಾದರೆ ,ಉಡೋ, ಆಟಮ್, ಟ್ರಿಯೋ ಮತ್ತು ಎಲ್ಎಂಎಂ ಪ್ಲಾಟ್‌ಫಾರ್ಮ್ ಆಧಾರಿತ ಎಲ್ಲಾ ಹೊಸ ವಾಹನಗಳನ್ನು ಒಳಗೊಂಡಂತೆ ನಾಲ್ಕು ಹೊಸ ಮಾದರಿಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಇತ್ತೀಚೆಗೆ ವಿಶೇಷ ಹಣಕಾಸು ಸೌಲಭ್ಯವನ್ನು ಘೋಷಣೆ ಮಾಡಿದೆ. ಇದರಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಹೊಸ ಕಾರು ವಿತರಣೆ ಮಾಡಿದ 90 ದಿನಗಳ ನಂತರ ಇಎಂಐ ಪಾವತಿ ಆರಂಭಕ್ಕೆ ಅವಕಾಶ ನೀಡಿದ್ದು, ಕಾರು ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಿದೆ.

ಹೊಸ ಪಿಕ್‌ಅಪ್ ಟ್ರಕ್‌ಗಾಗಿ ಎಕ್ಸ್‌ಡ್ರಿನೊ ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಮಹೀಂದ್ರಾ

ಈ ಎಲ್ಲಾ ಮಾದರಿಗಳು ಮಹೀಂದ್ರಾ ಕಂಪನಿಯ ಬಾರ್ನ್ ಇವಿ ವ್ಯಾಪ್ತಿಯಲ್ಲಿರುತ್ತವೆ. ಇದು ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಹೊಂದಿರುತ್ತದೆ. ಮಹೀಂದ್ರಾ ಕಮ್ಪನಿಯು ಹೊಸ ಎಕ್ಸ್‌ಯುವಿ700 ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇನ್ನು ಮುಂದಿನ ವರ್ಷದಲ್ಲಿ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Mahindra Trademarks Xdreno Name, Likely For Bolero Based New Pickup. Read In Kannada.
Story first published: Tuesday, June 8, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X