ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ಕಾರುಗಳ ಹೊಸ ದರವು ಇಂದಿನಿಂದಲೇ ಅನ್ವಯವಾಗುವಂತೆ ಪರಿಸ್ಕೃತ ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟ ಹೊಂದಿರುವ ಮಹೀಂದ್ರಾ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಳ ಮಾಡಿರುವುದಾಗಿ ಹೇಳಿಕೊಂಡಿದ್ದು, ಕಾರುಗಳ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ.1.50 ರಷ್ಟು ದರ ಹೆಚ್ಚಳ ಮಾಡಲಾಗಿದೆ. ಹೊಸ ದರಪಟ್ಟಿಯಲ್ಲಿ ಮಹೀಂದ್ರಾ ವಿವಿಧ ಕಾರುಗಳು ಕನಿಷ್ಠ ರೂ. 1 ಸಾವಿರದಿಂದ ಗರಿಷ್ಠ ರೂ. 49 ಸಾವಿರ ತನಕ ದುಬಾರಿಯಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದರ ಹೆಚ್ಚಿಸಲಾಗಿದೆ.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

2021ರ ಜನವರಿಯಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳ ಮಾಡುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಿದೆ.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಹೊಸ ದರ ಇಂದಿನಿಂದಲೇ ಅನ್ವಯವಾಗುವಂತೆ ಹೊಸ ದರ ನಿಗದಿಪಡಿಸಿರುವ ಮಹೀಂದ್ರಾ ಕಂಪನಿಯು ಬಹುತೇಕ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದು, ಕಳೆದ ಜನವರಿ ತಿಂಗಳನಲ್ಲೂ ಬೆಲೆ ಹೆಚ್ಚಳ ಪಡೆದುಕೊಂಡಿದ್ದವು.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಸೆಗ್ಮೆಂಟ್‌ನಲ್ಲಿ ಸದ್ಯ ಕೆಯುವಿ100 ನೆಕ್ಸ್ಟ್, ಎಕ್ಸ್‌ಯುವಿ300, ಬೊಲೆರೊ, ಮರಾಜೋ, ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ500 ಕಾರುಗಳನ್ನು ಮಾರಾಟ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದಿದ್ದು, ಮಧ್ಯಮ ಕ್ರಮಾಂಕದಲ್ಲಿರುವ ಎಕ್ಸ್‌ಯುವಿ300 ಮಾದರಿಯ ಬೆಲೆಯಲ್ಲೂ ಹೆಚ್ಚಿನ ಮಟ್ಟದ ಬೆಲೆ ಏರಿಕೆ ಪಡೆದುಕೊಂಡಿವೆ.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಹೊಸ ದರ ಪಟ್ಟಿಯಲ್ಲಿ ಬೆಲೆ ಹೆಚ್ಚಳದ ನಂತರ ಎಕ್ಸ್‌ಯುವಿ300 ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.94 ಲಕ್ಷ ಬೆಲೆ ಪಡೆದುಕೊಂಡಿದೆ.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರುವ ಎಕ್ಸ್‌ಯುವಿ300 ಮಾದರಿಯ ಬೆಲೆಯಲ್ಲಿ ಪೆಟ್ರೋಲ್ ಆವೃತ್ತಿಯು ರೂ. 1 ಸಾವಿರದಿಂದ ರೂ. 36 ಸಾವಿರ ತನಕ ಬೆಲೆ ಹೆಚ್ಚಳ ಪಡೆದುಕೊಂಡಲ್ಲಿ ಡೀಸೆಲ್ ಮಾದರಿಯು ರೂ. 27 ಸಾವಿರದಿಂದ ರೂ. 39 ಸಾವಿರದಷ್ಟು ದುಬಾರಿಯಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಎಕ್ಸ್‌ಯುವಿ300 ಮಾದರಿಯ ಪೆಟ್ರೋಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.96 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12.13 ಲಕ್ಷ ಬೆಲೆ ಪಡೆದುಕೊಂಡಿದ್ದು, ಡೀಸೆಲ್ ಕಾರು ಮಾದರಿಯು ಆರಂಭಿಕವಾಗಿ ರೂ. 12.94 ಲಕ್ಷ ಬೆಲೆ ಪಡೆದುಕೊಂಡಿದೆ.

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಬೆಲೆ ಹೆಚ್ಚಳ ನಂತರ ಮಹೀಂದ್ರಾ ಕಂಪನಿಯು ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಹೆಚ್ಚಿಸುವ ಬದಲು ಮಧ್ಯಮ ಕ್ರಮಾಂಕದ ಕೆಲ ಮಾದರಿಗಳಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತ ಮಾಡಿದ್ದು, ಬಿಸಿ ವೈಶಿಷ್ಯತೆ ರಿಯರ್ ವ್ಯೂ ಮಿರರ್ ಮತ್ತು ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಸೌಲಭ್ಯಗಳನ್ನು ತೆಗೆದುಹಾಕಿ ಸಾಮಾನ್ಯ ಮಾದರಿಯ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆ ಹೆಚ್ಚಿಸಿದ ಮಹೀಂದ್ರಾ

ಇನ್ನು ಎಕ್ಸ್‌ಯುವಿ 300 ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, 1.2-ಲೀಟರ್ ಪೆಟ್ರೋಲ್ ಮಾದರಿಯು 108 ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್ ಮತ್ತು ಡೀಸೆಲ್ ಮಾದರಿಯು 114 ಬಿಎಚ್‌ಪಿ ಮತ್ತು 300 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರಯಾಣಿಕ ಸುರಕ್ಷತೆಯಲ್ಲೂ ಎಕ್ಸ್‌ಯುವಿ300 ಕಾರು ಮುಂಚೂಣಿಯಲ್ಲಿದೆ.

Most Read Articles

Kannada
English summary
Mahindra has also increased the price of the XUV300 compact SUV in the Indian market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X