ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಬಹುನೀರಿಕ್ಷಿತ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯು ಅಗಸ್ಟ್ ಮಧ್ಯಂತರದಲ್ಲಿ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದ್ದು, ಹೊಸ ಕಾರು ಅನಾವರಣಕ್ಕೂ ಮುನ್ನ ಹೊಸ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿವೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಎಕ್ಸ್‌ಯುವಿ700 ಕಾರಿನ ಉತ್ಪಾದನಾ ಮಾದರಿಯನ್ನು ಉತ್ಪಾದನಾ ಘಟಕದಿಂದ ಬೇರೆಡೆಗೆ ಸ್ಥಳಾಂತರಿಸುವಾಗ ಹೊಸ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ಚಿತ್ರದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಹೊಸ ಕಾರು ಈ ಹಿಂದಿನ ಎಕ್ಸ್‌ಯುವಿ500 ಮಾದರಿಗಿಂತಲೂ ಅತ್ಯುತ್ತಮ ಡಿಸೈನ್ ಮತ್ತು ತಾಂತ್ರಿಕ ಅಂಶಗಳನ್ನು ಹೊಂದಿರುವುದು ಸ್ಪಷ್ಟವಾಗಿದೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಕಂಪನಿಯು ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಾಗಿ ಎಕ್ಸ್‌ಯುವಿ500 ಮಾದರಿಯ ನ್ಯೂ ಜನರೇಷನ್ ಆವೃತ್ತಿಯನ್ನೇ ಎಕ್ಸ್‌ಯುವಿ700 ಮಾದರಿಯಾಗಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಲಿಷ್ಠ ವಿನ್ಯಾಸದೊಂದಿಗೆ ಆಕರ್ಷಕ ಫೀಚರ್ಸ್ ಹೊಂದಿದೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ವರ್ಟಿಕಲ್ ಗ್ರಿಲ್ ಸ್ಲಾಟ್ ಜೊತೆ ಜೆ ಆಕಾರದಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಸಿಲ್ವರ್ ಕೋಟ್ ಹೊಂದಿರುವ ಫ್ಲಕ್ಸ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಹೊಂದಿರುವ ಮಲ್ಟಿ ಸ್ಪೋರ್ಕ್ ಅಲಾಯ್ ವ್ಹೀಲ್, ಸ್ಪೋರ್ಟಿ ರಿಯರ್ ಬಂಪರ್, ಅಂಡರ್ ಬಾಡಿ ಫ್ಲಕ್ಸ್ ಸ್ಕೀಡ್ ಪ್ಲೇಟ್, ಬೂಟ್ ಲಿಡ್, ಶಾರ್ಕ್ ಫಿನ್ ಆಂಟೆನಾ, ರೂಫ್ ಸ್ಪಾಯ್ಲರ್ ಹೊಂದಿದೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಹೊಸ ಕಾರಿನ ಒಳಭಾಗದ ಚಿತ್ರಗಳು ಲಭ್ಯವಾಗಿಲ್ಲವಾದರೂ ಹೊಸ ಕಾರು 6 ಸೀಟರ್ ಜೊತೆಗೆ 7 ಸೀಟರ್ ಸೌಲಭ್ಯದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಪಡೆದುಕೊಳ್ಳಲಿದ್ದು, ಮೂರನೇ ಸಾಲಿನ ಆಸನ ಸೌಲಭ್ಯಕ್ಕಾಗಿ ಎಕ್ಸ್‌ಯುವಿ500 ಮಾದರಿಗಿಂತಲೂ ಹೆಚ್ಚು ವೀಲ್ಹ್‌ಬೆಸ್ ನೀಡಲಾಗಿದೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಇನ್ನು ಹೊಸ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳಾದ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್, ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್‌ರೂಫ್, ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳಿದ್ದು, ಸ್ಮಾರ್ಟ್ ಏರ್ ಫಿಲ್ಟರ್ ಟೆಕ್ನಾಲಜಿಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸದ್ಯ ಕಂಪನಿಯು 180 ಬಿಎಚ್‌ಪಿ, 190 ಬಿಎಚ್‌ಪಿ ಮತ್ತು 210 ಬಿಎಚ್‌ಪಿ ಟ್ಯೂನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ 180-ಬಿಎಚ್‌ಪಿ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಹೊಸ ಕಾರಿನಲ್ಲಿ ನೀಡಲಾಗುತ್ತಿರುವ ಪೆಟ್ರೋಲ್ ಎಂಜಿನ್ ಮಾಹಿತಿ ಲಭ್ಯವಿಲ್ಲವಾದರೂ ಥಾರ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಇದು 210 ಬಿಎಚ್‌ಪಿ ಮಾದರಿಯಾಗುವ ಸಾಧ್ಯತೆಗಳಿವೆ.

ಉತ್ಪಾದನಾ ಮಾದರಿಯೊಂದಿಗೆ ಅನಾವರಣಕ್ಕೆ ಸಿದ್ದವಾದ ಮಹೀಂದ್ರಾ ಎಕ್ಸ್‌ಯುವಿ700

ಈ ಮೂಲಕ ಮಹೀಂದ್ರಾ ಕಂಪನಿಯು 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ.

Most Read Articles

Kannada
English summary
Mahindra XUV700 Design Leaked Ahead Of India Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X