XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ಮಾದರಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಬೆಲೆ ವಿಚಾರವಾಗಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲು ಸಿದ್ದವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಮಾದರಿಯನ್ನು ಆಧರಿಸಿರುವ ಹೊಸ ಎಕ್ಸ್‌ಯುವಿ700 ಮಾದರಿಯು ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿರಲಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಹೊಸ ಎಕ್ಸ್‌ಯುವಿ700 ಕಾರಿನ ಆರಂಭಿಕ ಮಾದರಿಗಳ ಬೆಲೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಹೊಸ ಕಾರು ಖರೀದಿಗಾಗಿ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗುತ್ತಿದ್ದು, ಕಂಪನಿಯು ಇದೀಗ ಹೊಸ ಕಾರು ಮಾದರಿಯಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಎಕ್ಸ್‌ಯುವಿ700 ಮಾದರಿಯಲ್ಲಿರುವ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಹೊಸ ಆಕ್ಸೆಸರಿಸ್ ಸೌಲಭ್ಯಗಳನ್ನು ಹೆಚ್ಚುವರಿ ಮೊತ್ತದಲ್ಲಿ ಖರೀದಿಸಬೇಕಿದ್ದು, ಹೊಸ ಆಕ್ಸೆಸರಿಸ್ ಸೌಲಭ್ಯ ಹೊಸ ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಲು ಸಹಕಾರಿಯಾಗಿವೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಹೊಸ ಕಾರಿನ ಕ್ರೊಮ್ ಕಿಟ್, ರೂಫ್ ಬಾರ್ ಸೆಟ್, ಸೀಟ್ ಕವರ್ ಸೆಟ್, ಹೆಡ್‌ಲ್ಯಾಂಪ್ ಅಪ್ಲಿಕ್ಯೂ, ರೈನ್ ವೀಸರ್ ಜೊತೆ ಕ್ರೋಮ್ ಮತ್ತು ವ್ಹೀಲ್ ಕವರ್ ಸೌಲಭ್ಯಗಳನ್ನು ನೀಡಲಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಜೊತೆಗೆ 1 ವರ್ಷದ ವಾರಂಟಿಯನ್ನು ಖಾತ್ರಿಪಡಿಸುತ್ತದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಇನ್ನು ಹೊಸ ಕಾರಿನಲ್ಲಿರುವ ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್‌‌ಗಳು ಗ್ರಾಹಕರ ಬೇಡಿಕೆಯೆಂತೆ 5 ಸೀಟರ್‌ ಮತ್ತು 7 ಸೀಟರ್ ಸೌಲಭ್ಯವನ್ನು ಹೊಂದಿದ್ದು, ಎಂಎಕ್ಸ್ ಸೀರಿಸ್‌ಗಿಂತಲೂ ಎಎಕ್ಸ್ ಸೀರಿಸ್ ಆವೃತ್ತಿಗಳು ಹೆಚ್ಚು ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿವೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಎಕ್ಸ್‌ಯುವಿ700 ಆವೃತ್ತಿಯು ಎಂಜಿನ್, ಗೇರ್‌ಬಾಕ್ಸ್ ಆಯ್ಕೆ ಆಧರಿಸಿ ಸುಮಾರು 29 ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ವಿವಿಧ ವೆರಿಯೆಂಟ್‌ಗಳಲ್ಲಿ ಎಲೆಕ್ಟ್ರಿಕ್ ಬ್ಲ್ಯೂ, ಎವರೆಸ್ಟ್ ವೈಟ್, ಡ್ಯಾಜಿಂಗ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ರೆಡ್ ರೇಂಜ್ ಬಣ್ಣಗಳ ಆಯ್ಕೆ ಹೊಂದಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಎಕ್ಸ್‌ಯುವಿ700 ಹೊಸ ಕಾರಿನ ಆರಂಭಿಕ ಆವೃತ್ತಿಯ ಬೆಲೆಯನ್ನು ಈಗಾಗಲೇ ಬಹಿರಂಗ ಪಡಿಸಲಾಗಿದ್ದು, ಆರಂಭಿಕ ಎಂಎಕ್ಸ್ ಆವೃತ್ತಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆ ಹೊಂದಿರುವುದು ಖಚಿತವಾಗಿದೆ. ಆದರೆ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಎಕ್ಸ್ ಮಾದರಿಗಳು ಆರಂಭಿಕವಾಗಿ ರೂ.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.69 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಟಾಪ್ ಎಂಡ್‌ನಲ್ಲಿರುವ ಪ್ರಮುಖ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ದರ ಶ್ರೇಣಿಯಲ್ಲಿ ಹೊಸ ಕಾರನ್ನು 2.0-ಲೀಟರ್ ಪೆಟ್ರೋಲ್ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಗಳಲ್ಲಿ MX ವೆರಿಯೆಂಟ್ ನಂತರ AX3, AX5 ಮತ್ತು AX7 ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಆರಂಭಿಕ ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, ಇದು 5 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆಯೆಂತೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಎಎಕ್ಸ್3 ವೆರಿಯೆಂಟ್‌ಗಳು ಐದು ಆಸನ ಸೌಲಭ್ಯವನ್ನು ಮಾತ್ರ ಹೊಂದಿದ್ದು, ಇದರಲ್ಲೂ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಆದರೆ ಈ ರೂಪಾಂತರದಲ್ಲಿ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಲಭ್ಯವಿರಲಿದೆಯೆಂತೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಖರೀದಿ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿರುವ ಎಎಕ್ಸ್5 ಮಾದರಿಯ ಹೈ ಎಂಡ್ ಮಾದರಿಯಲ್ಲಿ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಬಹುದಾಗಿದೆ.

XUV700 ಎಸ್‌ಯುವಿ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Mahindra

ಇನ್ನುಳಿದಂತೆ ಎಎಕ್ಸ್7 ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಏಳು ಆಸನ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಹೊಂದಿರುವ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿರುವರಿಯಾಗಿ ಹಲವಾರು ಸುಧಾರಿತ ಫೀಚರ್ಸ್‌ಗಳು ಜೋಡಣೆ ಮಾಡಲಿದೆಯೆಂತೆ.

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

Most Read Articles

Kannada
English summary
Mahindra xuv700 suv accessories details revealed ahead of launch
Story first published: Monday, September 27, 2021, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X