ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯನ್ನು ಅಗಸ್ಟ್ ಅಂತ್ಯಕ್ಕೆ ಅಧಿಕೃತವಾಗಿ ಬಿಡುಗಡೆಗೊಳ್ಳುವ ಸಿದ್ದತೆಯಲ್ಲಿದ್ದು, ಹೊಸ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್‌ಯುವಿ500 ಮಾದರಿಯ ನ್ಯೂ ಜನರೇಷನ್ ಮಾದರಿಯಾಗಿ ಬಿಡುಗಡೆಗೊಳ್ಳುತ್ತಿದ್ದು, ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಹೊಸ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಜೋಡಣೆ ಮಾಡಿದೆ. ಹೊಸ ಕಾರು ಮುಂಬರುವ ಅಗಸ್ಟ್ ಹೊತ್ತಿಗೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಪ್ರೀಮಿಯಂ ಕಾರು ಮಾದರಿಯಾಗಿರಲಿದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಬಲಿಷ್ಠ ಎಂಜಿನ್ ಆಯ್ಕೆ ಪಡೆದುಕೊಳ್ಳಲಿರುವ ಹೊಸ ಎಕ್ಸ್‌ಯುವಿ700 ಕಾರು ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಆಸಕ್ತ ಗ್ರಾಹಕರಿಗಾಗಿ ಸೇಫ್ಟಿ ಫೀಚರ್ಸ್‌ಗಳನ್ನು ವೈಯಕ್ತಿಕರಣಗೊಳಿಸುವ ಆಯ್ಕೆಯನ್ನು ಸಹ ನೀಡಿರುವುದು ಮಹತ್ವದ ಬದಲಾವಣೆಯಾಗಿದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಹೊಸ ಕಾರಿನ ಟೀಸರ್‌ನಲ್ಲಿ ಮಹೀಂದ್ರಾ ಕಂಪನಿಯು ಈಗಾಗಲೇ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡುತ್ತಿರುವುದಾಗಿ ಖಚಿತಪಡಿಸಿದ್ದು, ವಿವಿಧ ಮಾದರಿಯ ಹಲವು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಎಕ್ಸ್‌ಯುವಿ700 ಮಾದರಿಯಲ್ಲಿರುವ ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೌಲಭ್ಯವು ಚಾಲಕನ ಚಾಲನಾ ವೈಖರಿಯನ್ನು ಆಧಾರಿಸಿ ನಿದ್ರೆ ಮಂಪರಿನಲ್ಲಿದ್ದರೆ ಎಚ್ಚರಿಸುತ್ತದೆ. ನಿದ್ರೆ ಬರುವಂತಿದ್ದರೆ ಚಾಲನಾ ವೈಖರಿಯಲ್ಲಿ ಆಗಾಗುವ ಬದಲಾವಣೆಗಳನ್ನು ಆಧರಿಸಿ ಚಾಲಕನ್ನು ಧ್ವನಿ ಸಂಜ್ಞೆಗಳ ಮೂಲಕ ಎಚ್ಚರಿಸಲಿದ್ದು, ವಿಶ್ರಾಂತಿ ನಂತರ ಚಾಲನೆ ಮುಂದುವರಿಸುವಂತೆ ಸೂಚನೆ ನೀಡುತ್ತದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಇದರಿಂದ ಕಾರು ಚಾಲನೆ ವೇಳೆ ನಿದ್ರೆ ಮಂಪರಿನಲ್ಲಿ ಚಾಲಕನಿಂದ ಆಗಬಹುದಾದ ಅಪಘಾತಗಳನ್ನು ತಡೆಯಲು ಸಹಕಾರಿಯಾಗಿದ್ದು, ಡ್ರೈವರ್ ಡ್ರಾವ್ಸಿನೆಸ್ ಡಿಟೆಕ್ಷನ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಹೊಸ ಎಕ್ಸ್‌ಯುವಿ700 ಮಾದರಿಯಲ್ಲಿವೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಹೊಸ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್ ಮತ್ತು ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್‌ರೂಫ್ ಸಹ ನೀಡಲಾಗಿದ್ದು, ಆಟೋ ಬೂಸ್ಟರ್ ಹೆಡ್‌ಲ್ಯಾಂಪ್‌ನೊಂದಿಗೆ ಕಾರು ಚಾಲನೆ ವೇಳೆ ಹೆಡ್‌ಲ್ಯಾಂಪ್ ಬೆಳಕನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಇನ್ನು ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಡೀಸೆಲ್ ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸದ್ಯ ಕಂಪನಿಯು 180 ಬಿಎಚ್‌ಪಿ, 190 ಬಿಎಚ್‌ಪಿ ಮತ್ತು 210 ಬಿಎಚ್‌ಪಿ ಟ್ಯೂನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ 180-ಬಿಎಚ್‌ಪಿ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಕಾರು ಚಾಲನೆ ವೇಳೆ ನಿದ್ರೆ ಬಂದಲ್ಲಿ ಎಚ್ಚರಿಸುತ್ತೆ ಎಕ್ಸ್‌ಯುವಿ700 ಎಸ್‌ಯುವಿಯಲ್ಲಿನ ಹೊಸ ಫೀಚರ್ಸ್

ಹೊಸ ಕಾರಿನಲ್ಲಿ ನೀಡಲಾಗುತ್ತಿರುವ ಪೆಟ್ರೋಲ್ ಎಂಜಿನ್ ಮಾಹಿತಿ ಲಭ್ಯವಿಲ್ಲವಾದರೂ ಥಾರ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಕಂಪನಿಯು ಡೀಸೆಲ್ ಮಾದರಿಯ ಹೈ ಎಂಡ್ ಆವೃತ್ತಿಯಲ್ಲಿ 210 ಬಿಎಚ್‌ಪಿ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳಿವೆ.

Most Read Articles

Kannada
English summary
Mahindra Teases Driver Drowsiness Detection Feature For XUV700. Read in Kannada.
Story first published: Sunday, July 18, 2021, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X