Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸೊನೆಟ್ ಮಾದರಿಯು ಬಿಡುಗಡೆಗೊಳಿಸಿ ಒಂದು ವರ್ಷವಾಗಿದೆ ಮತ್ತು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇತ್ತೀಚೆಗೆ ಸೊನೆಟ್ ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಿಯಾ ಕಂಪನಿಯು ಬಿಡುಗಡೆಗೊಳಿಸಿತ್ತು.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಸೊನೆಟ್ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಿಯಾ ಸೊನೆಟ್ ದೇಶದಲ್ಲಿ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಖಲಿಸಿದೆ. ಈ ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಟರ್ಬೊ ಐಎಂಟಿ, ಟರ್ಬೊ ಡಿಸಿಟಿ, ಡೀಸೆಲ್ ಎಂಟಿ ಮತ್ತು ಡೀಸೆಲ್ ಎಟಿ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಆನಿವರ್ಸರಿ ಎಡಿಷನ್ ಮಿಡ್-ಲೆವೆಲ್ HTX ಟ್ರಿಮ್ ಅನ್ನು ಆಧರಿಸಿದೆ. ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಬೆಲೆಯು ರೂ.10.79 ಲಕ್ಷಗಳಾಗಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಬಣ್ಣಗಳು

ಹೊಸ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯು ಅರೋರಾ ಬ್ಲಾಕ್ ಪರ್ಲ್, ಗ್ರಾವಿಟಿ ಗ್ರೇ, ಸಿಲ್ವರ್ ಸ್ಟೀಲ್ ಮತ್ತು ಗ್ಲೇಸಿಯರ್ ವೈಟ್ ಪರ್ಲ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣವನ್ನು ಆಯ್ಜೆಯಾಮಾಡಿಕೊಳ್ಳಬಹುದಾಗಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ವಿನ್ಯಾಸ

ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಮಾದರಿಯಲ್ಲಿ ಕಾಸ್ಮೆಟಿಕ್ ನವೀಕರಣಗಳು ಪಡೆದಿದೆ. ಇದು ಟ್ರಾಂಚರಿನ್ ಆಕ್ಸೆಂಟ್ಸ್‌ನೊಂದಿಗೆ ಅರೋಚ್ಸ್ ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳನ್ನು ಪಡೆಯುತ್ತದೆ. ಅರೋಚ್ಸ್ ಸೈಡ್ ಸ್ಕಿಡ್ ಪ್ಲೇಟ್‌ಗಳು, ಕಿಯಾ ಸಿಗ್ನೇಚರ್ ಟೈಗರ್ ಗ್ರಿಲ್ ಹೀಟ್ ಸ್ಟ್ಯಾಂಪ್ಡ್ ಟ್ಯಾಂಗರಿನ್ ಅಸ್ಸೆಂಟ್ ಗಳು, ಹಾರ್ಟ್ ಬೀಟ್ ಎಲ್ಇಡಿ ಟೈಲ್-ಲ್ಯಾಂಪ್‌ಗಳು, ಕ್ರೌನ್ ಜೊವವ್ ಲ್‌ಇಡಿ ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಡಿಆರ್‌ಎಲ್ ಮತ್ತು ಸೆಮಿ ಲೆಥೆರೆಟ್ ಸೀಟ್‌ಗಳನ್ನು ಒಳಗೊಂಡಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಫೀಚರ್ಸ್

ಈ ಆನಿವರ್ಸರಿ ಎಡಿಷನ್ HTX ರೂಪಾಂತರಗಳಲ್ಲಿ ಪ್ರವೇಶಿಸಬಹುದಾದ ಎಲ್ಲಾ ಫೀಚರ್ಸ್ ಗಳನ್ನು ಹೊಂದಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಎಸಿ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಕೀಲೆಸ್ ಎಂಟ್ರಿ, ಚಾಲಿತ ಒಆರ್‌ವಿಎಂಗಳು, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಮತ್ತು ಇತರವುಗಳೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಎಸ್‌ಯುವಿ ಪಡೆಯುತ್ತದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಸುರಕ್ಷತಾ ಫೀಚರ್ಸ್

ಇನ್ನು ಈ ಎಸ್‍ಯುವಿಯಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ಬ್ರೇಕ್ ಅಸಿಸ್ಟ್ ನಂತಹ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಎಂಜಿನ್

ಈ ಕಿಯಾ ಸೊನೆಟ್ ಆನಿವರ್ಸರಿ ಎಡಿಷನ್ ಸಬ್ ಕಾಂಪ್ಯಾಕ್ಟ್ ಮಾದರಿಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಮತ್ತು 1.0-ಲೀಟರ್ ಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಾಗಿದೆ. ಇದರಲ್ಲಿ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಇದರಲ್ಲಿ 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮ್ಯಾನುವಲ್ ಮಾದರಿಯು 99 ಬಿಹೆಚ್‍ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಾದರಿಯು 113 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಇನ್ನು ಇದರೊಂದಿಗೆ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಕ್ಲಚ್-ಲೋ ಐಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಕಿಯಾ ಇಂಡಿಯಾ ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸೊನೆಟ್( ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಸೆಲ್ಟೋಸ್ ಬಳಿಕ ಕಿಯಾ ಮೋಟಾರ್ಸ್ ಮೂರನೇ ಮಾದರಿಯಾಗಿ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿ 1 ಲಕ್ಷ ಯುನಿಟ್ ಗಳ ಮಾರಾಟ ಮೈಲಿಗಲ್ಲು ಸಾಧಿಸಿದೆ. ಕಳೆದ ವರ್ಷ ಬಿಡುಗಡೆಯಾದ ಎಸ್‌ಯುವಿ ಅದರ ಬೆಲೆ ಮತ್ತು ವೈಶಿಷ್ಟ್ಯಗಳ ಕಾರಣದಿಂದಾಗಿ ಸಾಕಷ್ಟು ಗಮನ ಸೆಳೆಯಿತು. ಈ ಎಸ್‍ಯುವಿಯು ಬಿಡುಗಡೆಯಾದ ಒಂದು ವರ್ಷದೊಳಗೆ ಈ ಹೆಗ್ಗುರುತನ್ನು ಸಾಧಿಸಿತು.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಕಡಿಮೆ ಅವಧಿಯಲ್ಲಿ ಕಿಯಾ ಸೊನೆಟ್ ಹೆಚ್ಚು ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ರಿಫ್ರೆಶ್ ಮಾಡಿದ ಕಿಯಾ ಸೊನೆಟ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬ್ರಾಂಡ್‌ನ ಹೊಸ ಲೋಗೋ ಮತ್ತು ವೈಶಿಷ್ಟ್ಯಗಳ ವಿಸ್ತಾರವಾದ ಪಟ್ಟಿ ಮತ್ತು ಹಲವಾರು ಸೆಗ್ಮೆಂಟ್-ಫಸ್ಟ್‌ಗಳೊಂದಿಗೆ ಮಾರಾಟಕ್ಕೆ ಬಂದಿತು. ಇದು ಎರಡು ಟ್ರಿಮ್‌ಗಳಲ್ಲಿ 17 ರೂಪಾಂತರಗಳಲ್ಲಿ ಲಭ್ಯವಿದೆ. ಇದು ಟೆಕ್ ಲೈನ್ ಮತ್ತು ಜಿಟಿ -ಲೈನ್ ಅನ್ನು ಪವರ್‌ಟ್ರೇನ್‌ಗಳು ಮತ್ತು ಟ್ರಾನ್ಸ್‌ಮಿಷನ್‌ಗಳ ಆಧಾರದ ಮೇಲೆ ಹಲವಾರು ಆಯ್ಕೆಗಳಲ್ಲಿ ವರ್ಗೀಕರಿಸಲಾಗಿದೆ.

Kia Sonet ಎಸ್‍ಯುವಿಯ ಮೊದಲ ಆನಿವರ್ಸರಿ ಎಡಿಷನ್ ವಿಶೇಷತೆಗಳು

ಕಿಯಾ ಸೊನೆಟ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಕಿಯಾ ಸೊನೆಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ. ಅಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲವನ್ನು ಮೂಡಿಸಿದ ಮಾದರಿಯಾಗಿದೆ,

Most Read Articles

Kannada
English summary
Major highlights of kia sonet anniversary edition details
Story first published: Monday, October 18, 2021, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X