ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಮಾರುತಿ ಸುಜುಕಿ ಆಲ್ಟೊ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕಡಿಮೆ ಬೆಲೆ, ಕಡಿಮೆ ಮೆಂಟೆನೆನ್ಸ್ ವೆಚ್ಚ, ಹೆಚ್ಚು ಮೈಲೇಜ್ ಸೇರಿದಂತೆ ಹಲವು ಕಾರಣಗಳಿಗಾಗಿ ಆಲ್ಟೊ ಈಗಲೂ ಭಾರತೀಯರ ನೆಚ್ಚಿನ ಕಾರ್ ಆಗಿದೆ.

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಈ ಕಾರು ಆಧುನಿಕ ಫೀಚರ್'ಗಳನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಆಲ್ಟೊ ಕಾರಿನಲ್ಲಿ ಸನ್‌ರೂಫ್ ಸೌಲಭ್ಯವನ್ನು ನೀಡಲಾಗಿಲ್ಲ. ಆದರೆ ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿರುವ ಆಲ್ಟೊ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಆಲ್ಟೊ ಕಾರಿನಲ್ಲಿ ಈ ಫೀಚರ್ ಹೇಗೆ ಬರಬಹುದು ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಆದರೆ ಮಾಡಿಫಿಕೇಶನ್ ಮೂಲಕ ಈ ಕಾರಿನಲ್ಲಿ ಸನ್‌ರೂಫ್ ಅಳವಡಿಸಿರುವುದು ವಿಶೇಷ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

2012ರಲ್ಲಿ ಖರೀದಿಸಲಾದ ಈ ಆಲ್ಟೊ ಕಾರಿನ ಮಾಲೀಕರು ತಮ್ಮ ಕಾರಿನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಫೀಚರ್ ಅಳವಡಿಸಿದ್ದಾರೆ. ಈ ಮೂಲಕ ತಮ್ಮ ಕಾರ್ ಅನ್ನು ಅತ್ಯಾಧುನಿಕ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ.

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಈ ವೀಡಿಯೊವನ್ನು ಎಂಜಿನಿಯರ್ ಸಿಂಗ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ಈ ವೀಡಿಯೊದಲ್ಲಿ 2012ರ ಆಲ್ಟೊ 800 ಕಾರಿನಲ್ಲಿ ಹೊಸ ಫೀಚರ್'ಗಳನ್ನು ಅಳವಡಿಸಿರುವುದನ್ನು ಕಾಣಬಹುದು.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಈ ಕಾರಿನ ಫ್ರಂಟ್ ಪ್ಯಾನೆಲ್'ಗಳನ್ನು ಬದಲಿಸಲಾಗಿದ್ದು, ಬ್ಲಾಕ್ ಬಂಪರ್ ಹಾಗೂ ಬಾನೆಟ್ ಲಿಪ್'ಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿದ್ದ ಹೆಡ್‌ಲೈಟ್‌ಗಳನ್ನು ಬದಲಿಸಿ ಫಾಗ್ ಲ್ಯಾಂಪ್ ಹಾಗೂ ಸರ್ಕ್ಯುಲರ್ ಎಲ್ಇಡಿ ಡಿಆರ್‌ಎಲ್'ಗಳನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಕಾರಿನ ಆಕರ್ಷಣೆಯನ್ನು ಹೆಚ್ಚಿಸಲು ವ್ಹೀಲ್, ಹೊಸ ಹ್ಯಾಂಡಲ್, ಏರ್ ವೆಂಟ್ ಹಾಗೂ ಮಡ್ ಗಾರ್ಡ್'ಗಳನ್ನು ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್'ನಲ್ಲಿಯೂ ಹಲವಾರು ಹೊಸ ಫೀಚರ್'ಗಳನ್ನು ಸೇರಿಸಲಾಗಿದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಇವುಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ರೇಸಿಂಗ್ ಕಾರುಗಳಲ್ಲಿರುವಂತಹ ಸ್ಪಾರ್ಕೋ ಸ್ಟೀಯರಿಂಗ್ ವ್ಹೀಲ್, ಆಂಪ್ಲಿಫೈಯರ್ ಹಾಗೂ ಸಬ್ ವೂಫರ್‌ಗಳನ್ನು ಹೊಂದಿರುವ ಸ್ಪೀಕರ್, ಎಲೆಕ್ಟ್ರಿಕ್ ಸನ್‌ರೂಫ್'ಗಳು ಸೇರಿವೆ.

ಎಲೆಕ್ಟ್ರಿಕ್ ಸನ್‌ರೂಫ್'ನೊಂದಿಗೆ ಮಾಡಿಫೈಗೊಂಡ ಮಾರುತಿ ಸುಜುಕಿ ಆಲ್ಟೊ

ಇನ್ನು ಈ ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಕಾರಿನಲ್ಲಿರುವ 796 ಸಿಸಿ 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 46.3 ಬಿಹೆಚ್‌ಪಿ ಪವರ್ ಹಾಗೂ 62 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಚಿತ್ರಕೃಪೆ: ಎಂಜಿನಿಯರ್ ಸಿಂಗ್

Most Read Articles

Kannada
English summary
Maruti Alto modified with electric sunroof. Read in Kannada.
Story first published: Friday, June 4, 2021, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X