ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಮಾರುತಿ ಸುಜುಕಿ ತನ್ನ ಬಲೆನೊ ಸೆಡಾನ್ ಕಾರ್ ಅನ್ನು 1999ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಹಾಗೂ ಮಿಟ್ಸುಬಿಷಿ ಲ್ಯಾನ್ಸರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಳಿಸಲಾಗಿತ್ತು.

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಈ ಕಾರು ಉತ್ತಮ ನಿರ್ವಹಣೆಯ ಜೊತೆಗೆ ಸಂಸ್ಕರಿಸಿದ, ಸ್ಲೀಕ್ ಆದ, ಹೆಚ್ಚು ಟ್ಯೂನ್ ಮಾಡಬಹುದಾದ 1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿತ್ತು. ಈ ಕಾರು ಆಗಿನ ಕಾಲಕ್ಕೆ ಕಾರು ಉತ್ಸಾಹಿಗಳಿಂದ ಹೆಚ್ಚು ಪ್ರಶಂಸಗೆ ಒಳಗಾಗಿತ್ತು. ಆದರೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ವಿಫಲವಾಯಿತು.

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಈ ಹಿಂದೆ ನಾವು ಮಾಡಿಫೈಗೊಂಡ ಹಲವು ಕಾರುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈ ಲೇಖನದಲ್ಲಿ ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡಿರುವ ಮಾರುತಿ ಸುಜುಕಿ ಬಲೆನೊ ಸೆಡಾನ್ ಕಾರಿನ ಬಗೆಗಿನ ವಿವರಗಳನ್ನು ನೋಡೋಣ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಮಾಡಿಫೈಗೊಂಡಿರುವ ಬಲೆನೊ ಸೆಡಾನ್ ಕಾರಿನ ವೀಡಿಯೊವನ್ನು ಇಂಡಿಯಾ ಸೋನಿಕ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.ಈ ವೀಡಿಯೊದಲ್ಲಿ ಕಾರಿನ ಸಂಪೂರ್ಣ ಮಾಡಿಫಿಕೇಶನ್ ಅನ್ನು ಕಾಣಬಹುದು.

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಮಾಡಿಫೈಗೊಂಡಿರುವ ನಂತರ ಈ ಕಾರು ಫೋರ್ಡ್ ಮುಸ್ಟಾಂಗ್‌ನಂತೆ ಮಾರ್ಪಟ್ಟಿದ್ದು, ಐಷಾರಾಮಿಯಾಗಿ ಕಾಣುತ್ತದೆ. ಈ ಬಲೆನೊ ಸೆಡಾನ್ ಕಾರ್ ಅನ್ನು ಅದರ ಚಾಸೀಸ್ ಮೇಲೆ ಕೊಂಡೊಯ್ದು ಫೋರ್ಡ್ ಮುಸ್ಟಾಂಗ್‌ನಂತಹ ಬಾಡಿ ಪ್ಯಾನೆಲ್‌ಗಳನ್ನು ಅಳವಡಿಸುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಈ ಕಾರಿನ ವಿನ್ಯಾಸವು ಮೂಲ ಕಾರಿನ ವಿನ್ಯಾಸಕ್ಕಿಂತ ಭಿನ್ನವಾಗಿರುವುದರಿಂದ ಈ ಕಾರು ಭಾಗಶಃ ಮುಸ್ಟಾಂಗ್‌ನಂತೆ ಕಾಣುತ್ತದೆ. ಈ ಕಾರು ಪೂರ್ತಿಯಾಗಿ ಫೋರ್ಡ್ ಮುಸ್ಟಾಂಗ್'ನಂತೆ ಮಾಡಿಫೈಗೊಂಡಿಲ್ಲ ಎಂಬುದು ಗಮನಾರ್ಹ.

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಕೆಲವು ಮಾಡಿಫಿಕೇಶನ್ ಹಾಗೂ ಕಾರು ಕಸ್ಟಮೈಸ್ ಕಂಪನಿಗಳು ಬಾಡಿ ಕಿಟ್‌ಗಳೊಂದಿಗೆ ಕಾರುಗಳನ್ನು ಅಪರೂಪದ ಸೂಪರ್ ಕಾರುಗಳಂತೆ ಮಾಡಿಫೈಗೊಳಿಸಿ ಮಾರಾಟ ಮಾಡುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ವೀಡಿಯೊದಲ್ಲಿ, ಫೆರಾರಿ ಎಂಜೊ, ಬುಗಾಟ್ಟಿ ಚಿರೋನ್ ಹಾಗೂ ಲ್ಯಾಂಬೊರ್ಗಿನಿ ಅವೆಂಟಡಾರ್‌ನ ಬಾಡಿ ಕಿಟ್‌ಗಳನ್ನು ಸಹ ಕಾಣಬಹುದು. ಕಸ್ಟಮೈಸ್ ಮಾಡಲಾದ ಈ ಬಾಡಿ ಕಿಟ್‌ಗಳು ಬಹುತೇಕ ಅಸಲಿ ಮಾದರಿಗಳಂತೆ ಕಾಣುತ್ತವೆ.

ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು

ಇವುಗಳನ್ನು ಯಾವುದೇ ವಾಹನದ ಚಾಸಿಸ್ ಮೇಲೆ ಅಳವಡಿಸಬಹುದಾಗಿದೆ. ಬಾಡಿ ಕಿಟ್‌ಗಳ ಮೂಲಕ ಸೂಪರ್‌ಕಾರ್‌ಗಳಂತೆಯೇ ಕಾರುಗಳನ್ನು ಮಾಡಿಫೈಗೊಳಿಸುವುದು ಸಾಧ್ಯವಿಲ್ಲವೆಂದು ಈ ವೀಡಿಯೋ ಹೇಳುತ್ತದೆ. ಪರ್ಫಾಮೆನ್ಸ್ ಕಾರಣಕ್ಕೆ ಈ ಬಲೆನೊ ಸೆಡಾನ್ ಕಾರ್ ಅನ್ನು ಮಾಡಿಫೈಗೊಳಿಸಲಾಗಿದೆ.

ಚಿತ್ರಕೃಪೆ: ಇಂಡಿಯಾ ಸೋನಿಕ್

Most Read Articles

Kannada
English summary
Maruti Baleno sedan car modified like Ford Mustang. Read in Kannada.
Story first published: Sunday, April 11, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X