ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಫೆಬ್ರವರಿ ತಿಂಗಳಿನಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮಾರುತಿ ಬಲೆನೊ ಕಾರಿನ ಒಟ್ಟು 20,070 ಯುನಿಟ್‌ಗಳು ಮಾರಾಟವಾಗಿವೆ. ಈ ಪ್ರಮಾಣವು ಬಲೆನೊ ಕಾರಿನ ಪ್ರತಿಸ್ಪರ್ಧಿ ಕಾರುಗಳ ಒಟ್ಟು ಮಾರಾಟ ಪ್ರಮಾಣವನ್ನು ಮೀರಿಸಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಹ್ಯುಂಡೈ ಐ 20, ಟಾಟಾ ಆಲ್ಟ್ರೋಜ್ ಹಾಗೂ ಟೊಯೊಟಾ ಗ್ಲಾಂಜಾ ಕಾರುಗಳು ನಂತರದ ಸ್ಥಾನದಲ್ಲಿವೆ. ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರು ಎಂದಿನಂತೆ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದು, ಈ ಸೆಗ್'ಮೆಂಟಿನಲ್ಲಿ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಲೆನೊ ಕಾರಿನ 20,070 ಯುನಿಟ್'ಗಳು ಮಾರಾಟವಾಗಿದ್ದರೆ ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 16,585 ಯುನಿಟ್'ಗಳು ಮಾರಾಟವಾಗಿದ್ದವು. ಈ ಮೂಲಕ ಈ ಬಾರಿಯ ಮಾರಾಟದಲ್ಲಿ 21%ನಷ್ಟು ಏರಿಕೆಯಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಈ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಐ 20 ಕಾರಿನ 9001 ಯುನಿಟ್'ಗಳು ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾಗಿವೆ. 2020ರ ಫೆಬ್ರವರಿ ತಿಂಗಳಿನಲ್ಲಿ 8766 ಯುನಿಟ್'ಗಳು ಮಾರಾಟವಾಗಿದ್ದವು.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಈ ವರ್ಷದ ಮಾರಾಟದಲ್ಲಿ 3%ನಷ್ಟು ಏರಿಕೆಯಾಗಿದೆ. ಟಾಟಾ ಮೋಟಾರ್ಸ್‌ ಕಂಪನಿಯ ಆಲ್ಟ್ರೋಜ್ ಕಾರು ಸಹ ಮಾರಾಟದಲ್ಲಿ ಪ್ರಗತಿಯನ್ನು ಸಾಧಿಸಿದೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಆಲ್ಟ್ರೋಜ್ ಕಾರಿನ 6832 ಯುನಿಟ್'ಗಳು ಮಾರಾಟವಾಗಿದ್ದರೆ, ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 2806 ಯುನಿಟ್'ಗಳು ಮಾರಾಟವಾಗಿದ್ದವು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಈ ಕಾರಿನ ಮಾರಾಟ ಪ್ರಮಾಣವು ಈ ಬಾರಿ 143%ನಷ್ಟು ಏರಿಕೆಯಾಗಿದೆ. ಟೊಯೊಟಾ ಕಂಪನಿಯು ಗ್ಲಾಂಜಾ ಕಾರಿನ 2743 ಯುನಿಟ್'ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 2710 ಯುನಿಟ್'ಗಳು ಮಾರಾಟವಾಗಿದ್ದವು.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಗ್ಲಾಂಜಾ ಕಾರಿನ ಮಾರಾಟವು ಕಳೆದ ವರ್ಷಕ್ಕಿಂತ ಈ ವರ್ಷ 1%ನಷ್ಟು ಹೆಚ್ಚಾಗಿದೆ. ಗ್ಲಾಂಜಾ ಮಾರುತಿ ಸುಜುಕಿ ಬಲೆನೊ ಕಾರಿನ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಸೀಮಿತ ಗೇರ್‌ಬಾಕ್ಸ್ ಹಾಗೂ ಎಂಜಿನ್ ಆಯ್ಕೆಗಳ ಹೊರತಾಗಿಯೂ ಗ್ಲಾಂಜಾ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಫೆಬ್ರವರಿ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್‌ ಪೊಲೊ ಕಾರಿನ 1937 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಈ ಕಾರಿನ ಕೇವಲ 144 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಈ ಕಾರಿನ ಮಾರಾಟವು 1245%ನಷ್ಟು ಹೆಚ್ಚಳವಾಗಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಫೋರ್ಡ್ನ ಫ್ರೀಸ್ಟೈಲ್ 1285 ಯುನಿಟ್ ಮಾರಾಟದೊಂದಿಗೆ, ಮಾರಾಟದಲ್ಲಿ 28%ನಷ್ಟು ಹೆಚ್ಚಳವನ್ನು ದಾಖಲಿಸಿದೆ. ಇನ್ನು ಹೋಂಡಾ ಕಂಪನಿಯ ಜಾಝ್ ಕಾರಿನ 856 ಯುನಿಟ್'ಗಳು ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾಗಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಈ ಸೆಗ್'ಮೆಂಟಿನಲ್ಲಿ ಮಾರಾಟವಾಗುವ ಕಾರುಗಳು ಕಂಪನಿಗಳನ್ನು ನಿರಾಶೆಗೊಳಿಸುವುದಿಲ್ಲ. ಆಲ್ಟ್ರೋಜ್ ಈ ಸೆಗ್'ಮೆಂಟಿನಲ್ಲಿರುವ ಸುರಕ್ಷಿತವಾದ ಕಾರು. ಆದರೂ ಈ ಕಾರಿನ ಮಾರಾಟವು ಮೊದಲ ಎರಡು ಸ್ಥಾನದಲ್ಲಿರುವ ಕಾರುಗಳಿಗಿಂತ ಕಡಿಮೆಯಾಗಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ

ಹೊಸ ತಲೆಮಾರಿನ ಐ 20 ಕಾರು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ. ಇನ್ನು ಹೊಸ ಮಾದರಿಗಳ ಸರಾಸರಿ ಮಾರಾಟದಲ್ಲಿಯೂ ಭಾರಿ ಹೆಚ್ಚಳ ಕಂಡುಬಂದಿಲ್ಲ. ಈ ಬಗ್ಗೆ ಆಟೋಪಂಡಿಟ್ಜ್ ವರದಿ ಪ್ರಕಟಿಸಿದೆ.

Most Read Articles

Kannada
English summary
Maruti Baleno tops premium hatchback segment sales. Read in Kannada.
Story first published: Saturday, March 6, 2021, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X