ಕೇಂದ್ರದಿಂದ ಜಿಎಸ್‌ಟಿ ಕಡಿತ: ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಕೋವಿಡ್ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹಲವಾರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಕೋವಿಡ್ ವಿರುದ್ದ ಹೋರಾಟಕ್ಕೆ ಅಗತ್ಯವಿರುವ ವೈದ್ಯಕೀಯ ಸಾಮಾಗ್ರಿಗಳ ಮೇಲಿನ ತೆರಿಗೆ ತಗ್ಗಿಸಿರುವ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಕೇಂದ್ರದ ಹೊಸ ನಿರ್ಧಾರದಿಂದಾಗಿ ಕೋವಿಡ್ ಸೋಂಕಿತರ ಸೇವೆಗಾಗಿ ಅಗತ್ಯವಾಗಿರುವ ಆ್ಯಂಬುಲೆನ್ಸ್‌ಗಳ ಮೇಲಿನ ಜಿಎಸ್‌ಟಿ ಕೂಡಾ ಸಾಕಷ್ಟು ಇಳಿಕೆಯಾಗಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಆ್ಯಂಬುಲೆನ್ಸ್‌ಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಇಳಿಕೆ ಮಾಡಲಾಗಿದ್ದು, ಹೊಸ ಜಿಎಸ್‌ಟಿ ಪಟ್ಟಿಯಲ್ಲಿ ಆ್ಯಂಬುಲೆನ್ಸ್‌ಗಳ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ. 12ಕ್ಕೆ ಇಳಿಕೆ ಮಾಡಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಜಿಎಸ್‌ಟಿ ಕೌನ್ಸಿಲ್ ನಿರ್ದೇಶನದ ಮೇರೆಗೆ ಆಟೋ ಕಂಪನಿಗಳು ಕೂಡಾ ಆ್ಯಂಬುಲೆನ್ಸ್ ಮಾದರಿಗಳ ಬೆಲೆಯನ್ನು ಪರಿಸ್ಕರಣೆ ಮಾಡಿದ್ದು, ಮಾರುತಿ ಸುಜುಕಿ ನಿರ್ಮಾಣದ ಇಕೋ ಆ್ಯಂಬುಲೆನ್ಸ್ ಆವೃತ್ತಿಯ ಬೆಲೆಯಲ್ಲಿ ಸುಮಾರು ರೂ. 88 ಸಾವಿರ ಇಳಿಕೆಯಾಗಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಬೆಲೆ ಕಡಿತಗೊಂಡಿರುವುದರಿಂದ ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದ್ದು, ಹೊಸ ಆದೇಶವು ಮುಂದಿನ ಸೆಪ್ಟೆಂಬರ್ ತನಕ ಜಾರಿಯಲ್ಲಿರುತ್ತದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಹೊಸ ಜಿಎಸ್‌ಟಿ ದರಗಳನ್ನು ಒಳಗೊಂಡ ನಂತರ ಮಾರುತಿ ಇಕೋ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.16 ಲಕ್ಷ ಬೆಲೆ ಹೊಂದಿದ್ದು, ಇಕೋ ಮಾದರಿಯು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡು ಮಾದರಿಗಳಲ್ಲೂ ಖರೀದಿಗೆ ಲಭ್ಯವಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಬಹುಪಯೋಗಿ ವಾಹನ (ಎಂಪಿವಿ) ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿರುವ ಮಾರುತಿ ಇಕೋ ಆವೃತ್ತಿಯು ಬಿಡುಗಡೆಗೊಂಡ ಬಹುದಿನ ಬಳಿಕವು ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಒಮ್ನಿ ಮಾರಾಟ ಸ್ಥಗಿತವಾದ ನಂತರ ಇಕೋ ಮಾದರಿಯ ಮೇಲೆ ಮಾರುತಿ ಸುಜುಕಿ ಹೆಚ್ಚಿನ ಗಮನಹರಿಸಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡ ನಂತರ ಇಕೋ ಮಾದರಿಯು ಮಾರಾಟದಲ್ಲಿ ಪ್ರಮುಖ ಪ್ಯಾಸೆಂಜರ್ ಕಾರು ಮಾದರಿಗಳನ್ನೇ ಹಿಂದಿಕ್ಕಿದ್ದು, ಗ್ರಾಹಕರ ಬೇಡಿಕೆಯೆಂತೆ ಇಕೋ ಮಾದರಿಯು 7 ಸೀಟರ್ ಮತ್ತು 5 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಇಕೋ ಆ್ಯಂಬುಲೆನ್ಸ್ ಮಾದರಿಯ ಬೆಲೆಯಲ್ಲಿ ಭಾರೀ ಇಳಿಕೆ

ಇದರಲ್ಲಿ ಆ್ಯಂಬುಲೆನ್ಸ್ ಆವೃತ್ತಿಯನ್ನು ಕಂಪನಿಯೇ ಸ್ಟ್ಯಾಂಡರ್ಡ್ ಇಕ್ವಿಪ್‌ಮೆಂಟ್‌ಗಳೊಂದಿಗೆ ಜೋಡಣೆ ಮಾಡುವ ಸೌಲಭ್ಯ ಹೊಂದಿದ್ದು, ಹೆಚ್ಚುವರಿ ಸೌಲಭ್ಯಗಳು ಬೇಕಿದ್ದರೆ ಗ್ರಾಹಕರ ಬೇಡಿಕೆಯೆಂತೆ ಅಸೆಂಬಲ್ ಮಾಡಿಕೊಡಲಿದೆ.

Most Read Articles

Kannada
English summary
Maruti cuts Eeco ambulance price by Rs 88,000. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X