ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

Maruti Suzuki (ಮಾರುತಿ ಸುಜುಕಿ) ಕಂಪನಿಯ ಉತ್ಪಾದನೆಯು ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ. ಕಂಪನಿಯು ನವೆಂಬರ್ ತಿಂಗಳಲ್ಲಿ 1,45,000 - 1,50,000 ಯುನಿಟ್ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಗಳಿವೆ. ಸೆಮಿಕಂಡಕ್ಟರ್‌ಗಳ ಪೂರೈಕೆ ಉತ್ತಮವಾಗುವುದರಿಂದ ಉತ್ಪಾದನೆಯು ಸುಧಾರಿಸಲಿದೆ ಎಂದು ಹೇಳಲಾಗಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಮಾದರಿಗಳಾದ Swift, Dzire, Vitara Brezza ಕಾರುಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ. ಮೂಲಗಳ ಪ್ರಕಾರ ಕಂಪನಿಯು ಈ ಉತ್ಪಾದನಾ ಸಂಖ್ಯೆಯ ಅಂಕಿ ಅಂಶಗಳನ್ನು ಉಪಕರಣಗಳ ಪೂರೈಕೆದಾರರಿಗೆ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ ತಿಂಗಳುಗಳಲ್ಲಿ ಕಂಪನಿಯ ಉತ್ಪಾದನೆಯಲ್ಲಿ 50% - 60% ನಷ್ಟು ಇಳಿಕೆಯಾಗಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಸೆಮಿಕಂಡಕ್ಟರ್‌ಗಳ ಕೊರತೆ ಕಂಪನಿಯ ಉತ್ಪಾದನೆ ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ. ಸೆಮಿಕಂಡಕ್ಟರ್ ಗಳು ಆಧುನಿಕ ಕಾರುಗಳಲ್ಲಿ ಪ್ರಮುಖವಾಗಿವೆ. ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಹಲವು ಕಂಪನಿಗಳು ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ. ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಮಲೇಷ್ಯಾದಲ್ಲಿ ಸೆಮಿಕಂಡಕ್ಟರ್ ಗಳ ಉತ್ಪಾದನೆಯು ಮತ್ತೆ ಹೆಚ್ಚಾಗಲಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಈ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಉತ್ಪಾದನೆಯು ನವೆಂಬರ್‌ ತಿಂಗಳಿಗಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್‌ನಲ್ಲಿ ಕಂಪನಿಯ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಿಗಿಂತ 40% ನಷ್ಟು ಹೆಚ್ಚಾಗಿದೆ. ಅಕ್ಟೋಬರ್‌ಗೆ ಹೋಲಿಸಿದರೆ ಕಾರುಗಳ ಉತ್ಪಾದನೆಯು ನವೆಂಬರ್ ತಿಂಗಳಿನಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಇದರಿಂದ ಕಂಪನಿಯ ಕಾರುಗಳ ಉತ್ಪಾದನೆಯು ಡಿಸೆಂಬರ್ ವೇಳೆಗೆ ಸಹಜ ಸ್ಥಿತಿಯತ್ತ ಮರಳಲಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಮಾರುತಿ ಸುಜುಕಿ ಕಂಪನಿಯ ಸರಾಸರಿ ಉತ್ಪಾದನೆ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಕರೋನಾ ವೈರಸ್ ಎರಡನೇ ಅಲೆ ದೇಶಕ್ಕೆ ಅಪ್ಪಳಿಸುವ ಮೊದಲು 1,67,000 ಯುನಿಟ್‌ಗಳಷ್ಟಿತ್ತು. ಮಲೇಷ್ಯಾದಲ್ಲಿ ತಯಾರಿಸಲಾಗುವ ಸೆಮಿಕಂಡಕ್ಟರ್‌ಗಳು ಭಾರತವನ್ನು ತಲುಪಲು 6 ರಿಂದ 8 ವಾರಗಳು ಬೇಕಾಗುತ್ತವೆ. ಸೆಪ್ಟೆಂಬರ್ - ಅಕ್ಟೋಬರ್‌ ಅವಧಿಯಲ್ಲಿ ಕಂಪನಿಯ ಉತ್ಪಾದನೆಯು ಸುಧಾರಿಸಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಉತ್ಪಾದನೆಯು ನವೆಂಬರ್ - ಡಿಸೆಂಬರ್‌ನಲ್ಲಿ ಮತ್ತಷ್ಟು ಸುಧಾರಿಸುವ ಸಾಧ್ಯತೆಗಳಿವೆ. SIAM ಪ್ರಕಾರ, ಮಾರುತಿ ಸುಜುಕಿ ಕಂಪನಿಯು ನವೆಂಬರ್‌ ತಿಂಗಳಿನಲ್ಲಿ 1,50,000 ಯುನಿಟ್‌ಗಳನ್ನು ಉತ್ಪಾದಿಸಿದರೆ, ಈ ಪ್ರಮಾಣವು ಕಳೆದ ನಾಲ್ಕು ವರ್ಷಗಳಲ್ಲಿಯೇ ಅತ್ಯುತ್ತಮ ಎನಿಸಲಿದೆ. ಇದಕ್ಕೂ ಮುನ್ನ ಕಂಪನಿಯು 2017ರ ನವೆಂಬರ್ ತಿಂಗಳಿನಲ್ಲಿ 1,54,000 ಯುನಿಟ್‌ ಕಾರುಗಳನ್ನು ಉತ್ಪಾದಿಸಿತ್ತು.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಕಂಪನಿಯು ಕಳೆದ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ 81,278 ಯುನಿಟ್‌ ಕಾರುಗಳನ್ನು ಉತ್ಪಾದಿಸಿದೆ. ಈ ಪ್ರಮಾಣವು ಕಳೆದ ಎಂಟು ವರ್ಷಗಳಲ್ಲಿಯೇ ಕಡಿಮೆ ಪ್ರಮಾಣವಾಗಿದೆ. ಆದರೂ ಕಂಪನಿಯ ಬೇಡಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ಮೂರು ತಿಂಗಳಲ್ಲಿ ಕಂಪನಿಯ ಸರಾಸರಿ ಉತ್ಪಾದನೆ 1,21,000 ಯುನಿಟ್ ಗಳಾಗಿದೆ. ಕಂಪನಿಯು ಸೆಪ್ಟೆಂಬರ್‌ನಲ್ಲಿ ಸುಮಾರು 1 ಲಕ್ಷ ಕಾರುಗಳನ್ನು ಉತ್ಪಾದಿಸಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಆದರೆ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ 20% ನಷ್ಟು ಕಾರುಗಳನ್ನು ಡೀಲರ್‌ಶಿಪ್‌ಗಳಿಗೆ ರವಾನಿಸಲು ಸಾಧ್ಯವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಸೆಮಿಕಂಡಕ್ಟರ್‌ಗಳ ಪೂರೈಕೆಯು ಸಹಜ ಸ್ಥಿತಿಗೆ ಮರಳಿದ ತಕ್ಷಣ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಉತ್ಪಾದನೆಯೊಂದಿಗೆ ಡೀಲರ್‌ಶಿಪ್‌ಗಳಿಗೆ ಈಗಾಗಲೇ ದಾಸ್ತಾನು ಮಾಡಿದ ವಾಹನಗಳನ್ನು ಸಾಗಿಸಲಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ, ಮಾರುತಿ ಸುಜುಕಿ ಕಂಪನಿಯ ಹಳೆಯ ಆರ್ಡರ್‌ಗಳು 1,70,000 ರಿಂದ 2,50,000 ಕ್ಕೆ ಏರಿಕೆಯಾಗಿವೆ ಎಂದು ವರದಿಯಾಗಿದೆ. ಇದರಿಂದ ಡೀಲರ್‌ಶಿಪ್ ಗಳಲ್ಲಿ ಕೆಲವೇ ವಾರಗಳಿಗೆ ಆಗುವಷ್ಟು ದಾಸ್ತಾನು ಲಭ್ಯವಿದೆ. ಭಾರತದಲ್ಲಿ ಹಬ್ಬಗಳು ಸಮೀಪಿಸುತ್ತಿರುವುದರಿಂದ ಮುಂಬರುವ ವಾರದಲ್ಲಿ ಹೆಚ್ಚು ಹೆಚ್ಚು ಗ್ರಾಹಕರು ಡೆಲಿವರಿ ತೆಗೆದುಕೊಳ್ಳಲು ಬಯಸುತ್ತಿದ್ದಾರೆ. ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಬಿಡಿ ಭಾಗಗಳ ಕಾರಣಕ್ಕೆ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅನಿವಾರ್ಯವಾಗಿ ಕಂಪನಿಯು ಈ ವರ್ಷ ವಾಹನಗಳ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿದೆ. ವಾಹನ ತಯಾರಕ ಕಂಪನಿಗಳು ತಮ್ಮ ದೊಡ್ಡ ದೊಡ್ಡ ಮಾದರಿಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿವೆ. ಇದರಲ್ಲಿ Maruti Suzuki ಮಾತ್ರವಲ್ಲದೆ Tata Motors, Mahindra and Mahindra ಕಂಪನಿಗಳೂ ಸಹ ಸೇರಿವೆ.

ಮುಂದಿನ ತಿಂಗಳಿನಿಂದ ಸಹಜ ಸ್ಥಿತಿಯತ್ತ ಮರಳಲಿದೆ Maruti Suzuki ಕಾರು ಉತ್ಪಾದನೆ

ಮಾರುತಿ ಸುಜುಕಿ ಕಂಪನಿಯು ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡು ಪ್ರಯಾಣಿಕ ಕಾರುಗಳಲ್ಲಿ ಒಂದನ್ನು ಮಾರಾಟ ಮಾಡುತ್ತದೆ. Maruti Suzuki ಕಂಪನಿಯು ತನ್ನ ಸೆಪ್ಟೆಂಬರ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯು ಕಳೆದ ತಿಂಗಳು ಒಟ್ಟು 86,380 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಕಂಪನಿಯ ಮಾರಾಟವು 57% ನಷ್ಟು ಕುಸಿತವನ್ನು ದಾಖಲಿಸಿದೆ.ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 1,60,442 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿತ್ತು.ಹಬ್ಬಗಳ ಸೀಸನ್ ಆರಂಭಗೊಂಡಿರುವ ಸಂದರ್ಭದಲ್ಲಿ ಹಾಗೂ ಕಂಪನಿಯು ಹೆಚ್ಚು ಬುಕ್ಕಿಂಗ್ ಪಡೆಯುತ್ತಿರುವ ಸಮಯದಲ್ಲಿಯೇ ಕಡಿಮೆ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿರುವುದು ಗಮನಾರ್ಹ.

Most Read Articles

Kannada
English summary
Maruti suzuki car production to be normal from next month details
Story first published: Wednesday, October 27, 2021, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X