ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಳೆದ ತಿಂಗಳು ವಾಹನ ಮಾರಾಟದಲ್ಲಿ 9% ನಷ್ಟು ಕುಸಿತವನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು ಒಟ್ಟು 1,39,184 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ 1,53,233 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಮಾರಾಟ ಮಾಡಿದ 1,09,726 ಪ್ರಯಾಣಿಕ ವಾಹನಗಳಲ್ಲಿ 70% ನಷ್ಟು ಕೊಡುಗೆ ಮಿನಿ ಹಾಗೂ ಕಾಂಪ್ಯಾಕ್ಟ್ ವಾಹನ ವಿಭಾಗದಿಂದ ಬಂದಿದೆ. ಇದರಲ್ಲಿ ಆಲ್ಟೊ, ವ್ಯಾಗನ್‌ಆರ್, ಬಲೆನೊ, ಸ್ವಿಫ್ಟ್ ಹಾಗೂ ಇನ್ನಿತರ ಕಾರುಗಳು ಸೇರಿವೆ. ಈ ವಾಹನಗಳು ಕಳೆದ ತಿಂಗಳು ಕಂಪನಿಗೆ 74,492 ಯುನಿಟ್‌ಗಳನ್ನು ಕೊಡುಗೆಯಾಗಿ ನೀಡಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕಾಂಪ್ಯಾಕ್ಟ್ ವಾಹನ ವಿಭಾಗಕ್ಕೆ ಹೋಲಿಸಿದರೆ, ಸಿಯಾಜ್, ಎರ್ಟಿಗಾ ಹಾಗೂ ಎಕ್ಸ್‌ಎಲ್ 6 ಒಳಗೊಂಡಿರುವ ಮಧ್ಯಮ ಗಾತ್ರದ ಹಾಗೂ ಯುಟಿಲಿಟಿ ವಾಹನಗಳು ಕಳೆದ ತಿಂಗಳು ಕಂಪನಿಯ ಮಾರಾಟದಲ್ಲಿ ಸುಮಾರು 25% ನಷ್ಟು ಕೊಡುಗೆ ನೀಡಿವೆ. ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಸಿಯಾಜ್‌ ಕಾರಿನ ಒಟ್ಟು 1,089 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಇನ್ನು ಎರ್ಟಿಗಾ, ಜಿಪ್ಸಿ, ಎಸ್-ಕ್ರಾಸ್, ವಿಟಾರಾ ಬ್ರೆಝಾ, ಎಕ್ಸ್‌ಎಲ್ 6 ವಾಹನಗಳ ಒಟ್ಟು 24,574 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳ ಮಾರಾಟದಲ್ಲಿ ಸ್ವಲ್ಪ ಹೆಚ್ಚಳ ಕಂಡು ಬಂದಿದೆ. ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು ಒಟ್ಟು 1,38,335 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ. ಇದರಿಂದ ಭಾರತದಲ್ಲಿ ಮಾರಾಟವಾಗುವ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಉಂಟಾಗಿದೆ. ಸೆಮಿಕಂಡಕ್ಟರ್ ಕೊರತೆಯಿಂದಾಗಿ ಡಿಸೆಂಬರ್‌ನಲ್ಲಿ ಕಂಪನಿಯ ಉತ್ಪಾದನೆಯು 15% ನಿಂದ 20% ನಷ್ಟು ಕುಸಿಯುವ ನಿರೀಕ್ಷೆಗಳಿವೆ ಎಂದು ಮಾರುತಿ ಸುಜುಕಿ ಕಂಪನಿಯು ಈ ಹಿಂದೆಯೇ ತಿಳಿಸಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಸೆಲೆರಿಯೊ ಹ್ಯಾಚ್‌ಬ್ಯಾಕ್‌ ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿತು. ಹೊಸ ಸೆಲೆರಿಯೊ ಪ್ರತಿ ಲೀಟರ್ ಪೆಟ್ರೋಲಿಗೆ 26.68 ಕಿ.ಮೀ ನೀಡುತ್ತದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ. ಹೊಸ ಸೆಲೆರಿಯೊ ಕಾರು ಮುಂದಿನ ದಿನಗಳಲ್ಲಿ ತನ್ನ ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಮಾರುತಿ ಸುಜುಕಿ ಕಂಪನಿ ನಿರೀಕ್ಷಿಸುತ್ತದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕಂಪನಿಯು ವಿಟಾರಾ ಬ್ರೆಝಾ, ಬಲೆನೊ ಹಾಗೂ ಆಲ್ಟೊ ಸೇರಿದಂತೆ ಹಲವಾರು ಕಾರುಗಳ ಫೇಸ್‌ಲಿಫ್ಟ್ ಮಾದರಿಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಇನ್ನು ಹೊಸ ವರ್ಷವು ಆಟೋ ಕಂಪನಿಗಳಿಗೆ ಸವಾಲಿನಿಂದ ಕೂಡಿರಲಿದೆ. ಜಾಗತಿಕ ಚಿಪ್ ಕೊರತೆಯು 2022 ರಲ್ಲಿ ವರ್ಷವಿಡೀ ಮುಂದುವರೆಯಲಿದೆ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕೋವಿಡ್ 19 ವೈರಸ್‌ನ ಹೊಸ ರೂಪಾಂತರವೂ ಭಾರತದಲ್ಲಿ ಅಪ್ಪಳಿಸಿದರೆ ಅದರಿಂದ ವಾಹನ ಉದ್ಯಮವು ಮತ್ತಷ್ಟು ತೊಂದರೆಗೆ ಸಿಲುಕಲಿದೆ ಎಂದು ಮಾರುಕಟ್ಟೆ ವೀಕ್ಷಕರು ಭವಿಷ್ಯ ನುಡಿದಿದ್ದಾರೆ. ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ 40%, ಅಕ್ಟೋಬರ್‌ನಲ್ಲಿ 60% ಹಾಗೂ ನವೆಂಬರ್‌ನಲ್ಲಿ 85% ನಷ್ಟು ಉತ್ಪಾದನಾ ಗುರಿಯನ್ನು ಸಾಧಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಇನ್ನು ಮುಂದೆ ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುವುದಿಲ್ಲವೆಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬರುವ ಮೊದಲೇ ಮಾರುತಿ ಸುಜುಕಿ ಕಂಪನಿಯು 2019 ರಲ್ಲಿಯೇ ಡೀಸೆಲ್ ಎಂಜಿನ್ ಮಾದರಿಗಳ ಉತ್ಪಾದನೆಯನ್ನು ನಿಲ್ಲಿಸಿತ್ತು. ಈಗ ಅಸ್ತಿತ್ವದಲ್ಲಿರುವ ಮಾಲಿನ್ಯ ನಿಯಮ ಮಾನದಂಡಗಳ ಪ್ರಕಾರ ಡೀಸೆಲ್ ಎಂಜಿನ್‌ಗಳ ತಯಾರಿಕೆಯು ಇನ್ನು ಮುಂದೆ ಪ್ರಾಯೋಗಿಕವಾಗಿಲ್ಲ ಎಂದು ಕಂಪನಿ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದು, ಡೀಸೆಲ್ ಮಾದರಿಗಳ ಉತ್ಪಾದನೆಯು ನಷ್ಟದ ವ್ಯವಹಾರವಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಹೊಸ ಮಾಲಿನ್ಯ ನಿಯಮವನ್ನು ಮಾನದಂಡವನ್ನು 2023 ರಲ್ಲಿ ಜಾರಿಗೆ ತರಲಾಗುವುದು ಎಂದು ಕಂಪನಿ ಹೇಳಿದೆ, ಇದರಿಂದಾಗಿ ವೆಚ್ಚವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕಳೆದ ಕೆಲವು ತಿಂಗಳುಗಳಿಂದ ಮಾರುತಿ ಸುಜುಕಿಯ ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. 2023ರಲ್ಲಿ ಹೊಸ ಹಂತದ ಹೊರಸೂಸುವಿಕೆ ನಿಯಮಗಳು ಜಾರಿಗೆ ಬರಲಿವೆ. ಇದು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಮಾರುತಿ ಸುಜುಕಿ ಕಂಪನಿಯು ಈ ವಿಭಾಗದಲ್ಲಿ 85% ಗಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ ಸಿಎನ್‌ಜಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕಳೆದ ಹಣಕಾಸು ವರ್ಷದಲ್ಲಿ, ದೇಶದಲ್ಲಿ ಮಾರಾಟವಾದ 1.9 ಲಕ್ಷ ಯೂನಿಟ್ ಸಿಎನ್‌ಜಿ ವಾಹನಗಳಲ್ಲಿ, 1.6 ಲಕ್ಷಕ್ಕೂ ಹೆಚ್ಚು ಸಿಎನ್‌ಜಿ ಕಾರುಗಳನ್ನು ಮಾರುತಿ ಸುಜುಕಿ ಕಂಪನಿ ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಕಂಪನಿಯು ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ಸಿ‌ಎನ್‌ಜಿ ವಿತರಿಸುವ ಔಟ್‌ಲೆಟ್‌ಗಳನ್ನು ವಿಸ್ತರಿಸಲು ಮುಂದಾಗುತ್ತಿದೆ. ಇದರಿಂದ ಸಿ‌ಎನ್‌ಜಿ ಕಾರು ಮಾರುಕಟ್ಟೆಯು ತ್ವರಿತವಾಗಿ ವಿಸ್ತರಣೆಯಾಗಲಿದೆ. ಕಂಪನಿಯು ಈ ಹಣಕಾಸು ವರ್ಷದಲ್ಲಿ ಸುಮಾರು ಮೂರು ಲಕ್ಷ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Maruti Suzuki ಕಾರು ಮಾರಾಟ

ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ ಆಲ್ಟೊ, ಎಸ್-ಪ್ರೆಸ್ಸೊ, ವ್ಯಾಗನ್ಆರ್, ಇಕೋ, ಎರ್ಟಿಗಾ ಹಾಗೂ ಸೂಪರ್ ಕ್ಯಾರಿ ವಾಹನಗಳಲ್ಲಿ ಸಿಎನ್‌ಜಿ ಮಾದರಿಗಳನ್ನು ನೀಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಹೊಸ ಸೆಲೆರಿಯೊ ಕಾರಿನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಲು ಕಂಪನಿಯು ಸಿದ್ಧತೆ ನಡೆಸುತ್ತಿದೆ.

Most Read Articles

Kannada
English summary
Maruti suzuki car sales declines by 9 percent in november 2021 details
Story first published: Friday, December 3, 2021, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X