ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ದೇಶದ ಮುಂಚೂಣಿ ಕಾರು ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿಯು ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದ್ದು, ಇಂದಿನಿಂದ ಹೊಸ ದರ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

2020ರ ಅಗಸ್ಟ್‌ನಲ್ಲಿ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮಾರುತಿ ಸುಜುಕಿ ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದೆ. ಕಾರು ಮಾದರಿಗಳ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ.2 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೆಚ್ಚಳವಾಗಿರುವ ದರ ಪಟ್ಟಿಯಲ್ಲಿ ಪ್ರಯಾಣಿಕ ಬಳಕೆಯ ಕಾರುಗಳಷ್ಟೇ ಅಲ್ಲದೆ ವಾಣಿಜ್ಯ ವಾಹನ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದೆ.

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಉತ್ಪಾದನಾ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚಳ ಮತ್ತು ಹೊಸ ಮಾದರಿಯ ತಾಂತ್ರಿಕ ಅಂಶಗಳ ಜೋಡಣೆಯಿಂದ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಮಾರುತಿ ಸುಜುಕಿಯು ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ ಎಂದಿದೆ.

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಬಿಡುಗಡೆ ಮಾಡಿರುವ ಹೊಸ ದರಪಟ್ಟಿಯಲ್ಲಿ ಸದ್ಯಕ್ಕೆ ಅರೆನಾ ಮಾರಾಟ ಮಳಿಗೆಯಲ್ಲಿರುವ ಕಾರುಗಳ ಬೆಲೆ ಹೆಚ್ಚಳ ಪಟ್ಟಿ ಪ್ರಕಟಿಸಲಾಗಿದ್ದು, ಶೀಘ್ರದಲ್ಲೇ ಪ್ರಿಮಿಯಂ ಕಾರು ಮಾರಾಟ ಮಳಿಗೆಯಾದ ನೆಕ್ಸಾ ಕಾರುಗಳ ಪಟ್ಟಿಯನ್ನು ಸಹ ಪ್ರಕಟಿಸಲಿದೆ.

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಹೊಸ ವಾಹನಗಳಲ್ಲಿ ಪ್ರಮುಖ ತಾಂತ್ರಿಕ ಅಂಶಗಳನ್ನು ಕಡ್ಡಾಯಗೊಳಿಸುತ್ತಿರುವ ಹಿನ್ನಲೆಯಲ್ಲಿ ಉತ್ಪಾದನಾ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಕಳೆದ ನವೆಂಬರ್‌ನಲ್ಲಿಯೇ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದ ಆಟೋ ಕಂಪನಿಗಳು ಕರೋನಾ ಸಂಕಷ್ಟದಿಂದ ತತ್ತರಿಸಿರುವ ಹೊಸ ವಾಹನ ಮಾರಾಟ ಏರಿಳಿತದಿಂದಾಗಿ ಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿದಿದ್ದವು. ಆದರೆ ಇದೀಗ ಕರೋನಾದಿಂದಾಗಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಹೊಸ ವಾಹನಗಳ ಮಾರಾಟದಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆಯ ನಿರ್ಧಾರ ಕೈಗೊಂಡಿವೆ.

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು ಟಾಪ್ 10 ಕಾರುಗಳ ಮಾರಾಟದಲ್ಲಿ ಬರೋಬ್ಬರಿ 7 ಕಾರುಗಳ ಮಾರಾಟವನ್ನು ತನ್ನದಾಗಿಸಿಕೊಂಡಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಬೆಲೆ ಏರಿಕೆಯನ್ನು ನಿಗದಿಪಡಿಸಿದೆ.

ಕಾರು ಮಾದರಿಗಳು ಹೆಚ್ಚಳವಾದ ದರ(ಎಕ್ಸ್‌ಶೋರೂಂ ಪ್ರಕಾರ)
ಆಲ್ಟೊ ರೂ. 14,000
ಎಸ್-ಪ್ರೆಸ್ಸೊ ರೂ. 7,000
ಸೆಲೆರಿಯೊ ರೂ. 19,400
ವ್ಯಾಗನ್‌ಆರ್ ರೂ. 23,200
ಟೂರ್ ಎಸ್ ರೂ. 5,061
ಇಕೊ ರೂ. 24,200
ಸ್ವಿಫ್ಟ್ ರೂ. 30,000
ಡಿಸೈರ್ ರೂ. 12,500
ವಿಟಾರಾ ಬ್ರೆಝಾ ರೂ. 10,000
ಎರ್ಟಿಗಾ ರೂ. 34,000
ಸೂಪರ್ ಕ್ಯಾರಿ(ವಾಣಿಜ್ಯ ವಾಹನ) ರೂ. 10,000
ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಇನ್ನು ಮಾರುತಿ ಸುಜುಕಿ ನಿರ್ಮಾಣದ ಬಹುತೇಕ ಕಾರುಗಳು ಪ್ರತಿ ಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಮಾರುತಿ ಸುಜುಕಿ ಕಾರುಗಳು ಕೇವಲ ಪೆಟ್ರೋಲ್, ಪೆಟ್ರೋಲ್ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಬಿಎಸ್-6 ಎಮಿಷನ್ ಕಡ್ಡಾಯದ ನಂತರ ತನ್ನ ಪ್ರಮುಖ ಕಾರುಗಳ ಮಾರಾಟದಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿಯು ತನ್ನ ಜನಪ್ರಿಯ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದ್ದು, ಡೀಸೆಲ್ ಎಂಜಿನ್ ಸ್ಥಗಿತದ ನಂತರವು ಮಾರುತಿ ಸುಜುಕಿ ಕಾರುಗಳ ಪೆಟ್ರೋಲ್ ಕಾರುಗಳ ಮಾರಾಟವು ಸಾಕಷ್ಟು ಏರಿಕೆ ಕಂಡಿದೆ.

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಬಿಎಸ್-6 ಜಾರಿ ನಂತರ ಡೀಸೆಲ್ ಎಂಜಿನ್ ಕಾರುಗಳನ್ನು ಮರುಬಿಡುಗಡೆ ಮಾಡುವುದಿಲ್ಲ ಎಂದಿದ್ದ ಮಾರುತಿ ಸುಜುಕಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಮತ್ತೆ ಹೊಸ ಡೀಸೆಲ್ ಮಾದರಿಯನ್ನು ಅಳವಡಿಸಿಕೊಳ್ಳುವ ಸುಳಿವು ನೀಡಿದ್ದು, ಹೊಸ ನಿಯಮ ಅನುಸಾರವಾಗಿ ಅಭಿವೃದ್ದಿಗೊಳಿಸಲಾಗ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರ ಅಳವಡಿಸುವ ಸಿದ್ದತೆಯಲ್ಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅರೆನಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಮಾರುತಿ ಸುಜುಕಿ

ಮೊದಲ ಹಂತವಾಗಿ ವಿಟಾರಾ ಬ್ರೆಝಾ ಮತ್ತು ಎರ್ಟಿಗಾ ಮಾದರಿಗಳಲ್ಲಿ ತದನಂತರ ಸಿಯಾಜ್ ಮತ್ತು ಎಸ್-ಕ್ರಾಸ್ ಕಾರುಗಳಲ್ಲಿ ಅಳವಡಿಸಲಿದ್ದು, ಇನ್ನುಳಿದ ಕಾರು ಮಾದರಿಗಳಾದ ಆಲ್ಟೊ, ಎಸ್-ಪ್ರೆಸ್ಸೊ, ವ್ಯಾಗನ್ಆರ್, ಸ್ವಿಫ್ಟ್, ಬಲೆನೊ, ಇಗ್ನಿಸ್, ಡಿಜೈರ್, ಇಕೋ ಮತ್ತು ಸೆಲೆರಿಯೊ ಕಾರು ಮಾದರಿಗಳಲ್ಲಿ ಪೆಟ್ರೋಲ್, ಪೆಟ್ರೋಲ್ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳನ್ನು ಮಾತ್ರ ಮಾರಾಟ ಮಾಡಲಿದೆ.

Most Read Articles

Kannada
English summary
Maruti Suzuki Price Hike Wagon-R, Swift, Alto 800, Brezza And More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X