Just In
- 2 hrs ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 2 hrs ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 4 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗೆ ಕೊರೊನಾ
- News
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹಾಗೂ ಅಖಿಲೇಶ್ ಯಾದವ್ಗೆ ಕೊರೊನಾ
- Lifestyle
ಬೆಳಿಗ್ಗೆ ಎದ್ದ ಕೂಡಲೇ ನೀವು ಯಾಕೆ ಸುಸ್ತಾಗುತ್ತೀರಿ? ಈ ಪರಿಹಾರಗಳಿಂದ ನಿಮ್ಮ ಸುಸ್ತು ದೂರವಾಗುತ್ತೆ!
- Sports
ಐಪಿಎಲ್ 2021: ಅತಿ ದೊಡ್ಡ ಮೈಲಿಗಲ್ಲು ಮುಟ್ಟಲು ವಿರಾಟ್ ಕೊಹ್ಲಿ ಮತ್ತಷ್ಟು ಸನಿಹ
- Finance
ಸತತ 15ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯು ತನ್ನ ಕಾರುಗಳನ್ನು ರಫ್ತು ಮಾಡುವಲ್ಲಿಯೂ ಪ್ರಾಬಲ್ಯವನ್ನು ಹೊಂದಿದೆ. ಇತ್ತೀಚೆಗೆ ಮಾರುತಿ ಸುಜುಕಿ ಕಂಪನಿಯು 20 ಲಕ್ಷ ಕಾರುಗಳನ್ನು ರಫ್ತು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪನಿಯು 1986ರಲ್ಲಿ ಭಾರತದಿಂದ ತನ್ನ ಕಾರುಗಳನ್ನು ರಫ್ತು ಮಾಡಲು ಆರಂಭಿಸಿತು. 20 ಲಕ್ಷದ ಮೈಲಿಗಲ್ಲು ತಲುಪಲು ಕಂಪನಿಯು 34 ವರ್ಷಗಳನ್ನು ತೆಗೆದುಕೊಂಡಿದೆ. ಈ 20 ಲಕ್ಷ ಮೈಲಿಗಲ್ಲು ಮುಟ್ಟುವ ಸಂದರ್ಭದಲ್ಲಿ ಎಸ್-ಪ್ರೆಸೊ, ಸ್ವಿಫ್ಟ್, ಬ್ರೆಝಾ ಸೇರಿದಂತೆ ಹಲವು ಕಾರುಗಳನ್ನು ಗುಜರಾತ್ನ ಮುಂಡ್ರಾ ಬಂದರಿನಿಂದ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿದೆ.

ಕಂಪನಿಯು 10 ಲಕ್ಷ ಕಾರುಗಳನ್ನು ರಫ್ತು ಮಾಡಲು 26 ವರ್ಷ ತೆಗೆದುಕೊಂಡಿತ್ತು. ಇದರ ನಂತರ ಮಾರುತಿ ಸುಜುಕಿ ಕಾರುಗಳಿಗೆ ಭಾರಿ ಏರಿಕೆ ಕಂಡುಬಂದಿದೆ. ಇದರಿಂದಾಗಿ ನಂತರದ ಹತ್ತು ಲಕ್ಷ ಕಾರುಗಳನ್ನು ರಫ್ತು ಮಾಡಲು ಕೇವಲ 8 ವರ್ಷಗಳನ್ನು ತೆಗೆದುಕೊಂಡಿದೆ.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು

ಯುರೋಪ್ ಮಾರುಕಟ್ಟೆಯು ಮಾರುತಿ ಸುಜುಕಿ ಕಂಪನಿಯು ಮೊದಲ ಹತ್ತು ಲಕ್ಷದ ಗುರಿ ತಲುಪಲು ಪ್ರಮುಖ ಕೊಡುಗೆ ನೀಡಿದೆ. ಕಂಪನಿಯು 2012ರಿಂದ ಲ್ಯಾಟಿನ್ ಅಮೆರಿಕ, ಆಫ್ರಿಕಾ ಹಾಗೂ ಏಷ್ಯಾದ ಮಾರುಕಟ್ಟೆಗಳ ಮೇಲೆ ಗಮನ ಹರಿಸಿದೆ.

ಚಿಲಿ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಾಬಲ್ಯವನ್ನು ಹೊಂದಿದೆ. ಆಲ್ಟೊ, ಬಲೆನೊ, ಡಿಜೈರ್ ಹಾಗೂ ಸ್ವಿಫ್ಟ್ ಕಾರುಗಳು ಈ ದೇಶಗಳಲ್ಲಿ ಜನಪ್ರಿಯವಾಗಿವೆ ಎಂದು ಕಂಪನಿ ಹೇಳಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ 100 ದೇಶಗಳಿಗೆ ಕಾರುಗಳನ್ನು ರಫ್ತು ಮಾಡುತ್ತದೆ. ಈ 100 ದೇಶಗಳಿಗೆ 15 ಕಾರುಗಳ 150 ಮಾದರಿಗಳನ್ನು ಮಾರುತಿ ಸುಜುಕಿ ಕಂಪನಿಯು ರಫ್ತು ಮಾಡುತ್ತದೆ.

ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಹೊಸ ಸೆಗ್'ಮೆಂಟಿನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸದ್ಯಕ್ಕೆ ಕಂಪನಿಯ ಜಿಮ್ನಿ ಮಾದರಿಯನ್ನು ಎದುರು ನೋಡಲಾಗುತ್ತಿದೆ. ಸುಜುಕಿ ಜಿಮ್ನಿ ಕಾರ್ ಅನ್ನು 2020ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಿದಾಗಿನಿಂದಲೂಹೆಚ್ಚು ಸುದ್ದಿಯಾಗುತ್ತಿದೆ.

ಮಾರುತಿ ಸುಜುಕಿ ಕಂಪನಿಯು ಸಹ ಈ ಕಾರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಕಂಪನಿಯು ಮಾರುಕಟ್ಟೆಯಲ್ಲಿರುವ ಕಾರುಗಳ ಹೊಸ ತಲೆಮಾರಿನ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಂಪನಿಯು ಈ ವರ್ಷ ಹಲವು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಇದರ ಜೊತೆಗೆ ಕಂಪನಿಯು ಹೊಸ ಹೊಸ ಮಾದರಿಗಳನ್ನು ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಸದ್ಯಕ್ಕೆ ಆ ವಾಹನಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಕಳೆದ ತಿಂಗಳು ಮಾರುತಿ ಸುಜುಕಿ ಎಸ್-ಪ್ರೆಸೊ ಟಾಪ್ 10 ರಫ್ತು ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಭಾರತದಿಂದ ಕಾರುಗಳನ್ನು ರಫ್ತು ಮಾಡುವುದರಲ್ಲಿ ಹ್ಯುಂಡೈ ಕಂಪನಿಯು ಮೊದಲ ಸ್ಥಾನದಲ್ಲಿದೆ.