ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.5.13 ಲಕ್ಷಗಳಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯು ವ್ಯಾಗನಾರ್ ಕಾರಿನ ಸ್ಪೆಷಲ್ ಎಡಿಷನ್ ಆಗಿದೆ. ಹೊಸ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬೆಲೆಯು ಸ್ಟ್ಯಾಂಡರ್ಡ್ ವಿಎಕ್ಸ್‌ಐ ರೂಪಾಂತರಕ್ಕಿಂತ ಸುಮಾರು ರೂ.1,000 ದುಬಾರಿಯಾಗಿದೆ. ಹೊಸ ಮಾರುತಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಮುಂಭಾಗ ಮತ್ತು ಹಿಂಭಾಗದ ಬಂಪರ್ ಪ್ರೊಟೆಕ್ಟರ್‌ಗಳು, ವ್ಹೀಲ್ ಆರ್ಚ್ ಕ್ಲಾಡಿಂಗ್, ಸೈಡ್ ಸ್ಕರ್ಟ್‌ಗಳು, ಬಾಡಿ ಸೈಡ್ ಮೋಲ್ಡಿಂಗ್‌ಗಳು ಮತ್ತು ಕ್ರೋಮ್ ಅಲಂಕರವನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಪಡೆಯುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಈ ಹೊಸ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಒಳಭಾಗದಲ್ಲಿ ಕಾರ್ ಚಾರ್ಜರ್ ಎಕ್ಸ್‌ಟೆಂಡರ್, ಟ್ರಂಕ್ ಆರ್ಗನೈಸರ್ ಮತ್ತು ಡಿಜಿಟಲ್ ಏರ್ ಇನ್ಫ್ಲೇಟರ್ ಅನ್ನು ಹೊಂದಿರುತ್ತದೆ. ವೈಶಿಷ್ಟ್ಯದ ಮುಂಭಾಗದಲ್ಲಿ, ವಿಶೇಷ ಮಾದರಿಯ ವಿಎಕ್ಸ್‌ಐ ಟ್ರಿಮ್‌ನಲ್ಲಿ ನೀಡಲಾದ ಎಲ್ಲಾ ಫಿಟ್‌ಮೆಂಟ್‌ಗಳೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಇದರಲ್ಲಿ ಕಪ್ಪು ಬಣ್ಣದ ಬಿ-ಪಿಲ್ಲರ್, ಬಾಡಿ ಕಲರ್ ವಿಂಗ್ ಮಿರರ್ ಮತ್ತು ಡೋರ್ ಹ್ಯಾಂಡಲ್, ವೀಲ್ ಕವರ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಪವರ್ ಅಡ್ಜಸ್ಟಬಲ್ ವಿಂಗ್ ಮಿರರ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ, 60:40 ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟುಗಳು, ಬ್ಲೂಟೂತ್ ಮತ್ತು ಯುಎಸ್‌ಬಿ ಕನೆಕ್ಟಿವಿಟಿಯೊಂದಿಗೆ ರಿಯರ್ ವ್ಯೂ ಮಿರರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಆಡಿಯೋ ಸಿಸ್ಟಂ ಪೀಚರ್ಸ್ ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಇನ್ನು ಹೊಸ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್1.0 ಎಲ್ 3-ಸಿಲಿಂಡರ್ ಮತ್ತು 1.2 ಎಲ್ 4-ಸಿಲಿಂಡರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರುತ್ತದೆ. ಈ ಎಕ್ಸ್‌ಟ್ರಾ ಎಡಿಷನ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಇದರಲ್ಲಿ 1.0 ಎಲ್ 3-ಸಿಲಿಂಡರ್ ಎಂಜಿನ್ 68 ಬಿಹೆಚ್‍ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು 1.2 ಎಲ್ 4-ಸಿಲಿಂಡರ್ ಎಂಜಿನ್ 83 ಬಿಹೆ‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಷನ್ ಹೊಂದಬಹುದು. ಸಣ್ಣ ಸಾಮರ್ಥ್ಯದ ಗ್ಯಾಸೋಲಿನ್ ಎಂಜಿನ್ 22.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು 1.2 ಎಲ್ಎಂಜಿನ್ 21.5 ಕಿ,ಮೀ ಮೈಲೇಜ್ ಅನ್ನು ಒದಗಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಇನ್ನು ಇದರೊಂದಿಗೆ ಹೊಸ ವ್ಯಾಗನ್‍ಆರ್ ಮಾದರಿಯು ಹಲವು ಬಾರಿ ಭಾರತದಲ್ಲ್ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗುತ್ತಿದೆ. ಇದು ಎಲೆಕ್ಟ್ರಿಕ್ ಮಾದರಿಯಾಗಿರಬಹುದು ಎಂದು ವರದಿಗಳಾಗಿದೆ. ಈ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಕಾರಿನ ಮುಂಭಾಗದ ಹೊಸ ಫಾಸಿಕವನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಸ್ಪ್ಲಿಟ್-ಸ್ಟೈಲ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದ್ದು, ಡಿಆರ್‌ಎಲ್‌ಗಳನ್ನು ಮೇಲ್ಭಾಗದಲ್ಲಿ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಕೆಳಭಾಗದಲ್ಲಿ ಇರಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಈ ವ್ಯಾಗನ್‍ಆರ್ ಕಾರಿನಲ್ಲಿ ಫಾಗ್ ಲ್ಪಾಂಪ್ ಯುನಿಟ್ ಗಳನ್ನು ಸಹ ಹೊಂದಿದೆ, ಇವುಗಳನ್ನು ಹೆಡ್‌ಲ್ಯಾಂಪ್ ಯುನಿಟ್ ಗಳ ಬಂಪರ್‌ನ ಕೆಳಗೆ ಇಡಲಾಗುತ್ತದೆ. ಫಾಗ್ ಲ್ಯಾಂಪ್ ಗಳನ್ನು ರೇಡಿಯೇಟರ್ ಗ್ರಿಲ್‌ನಲ್ಲಿ ಸಂಯೋಜಿಸಲಾಗಿದೆ. ಗ್ರಿಲ್‌ನ ಮೇಲೆ ಡಿಆರ್‌ಎಲ್‌ಗಳನ್ನು ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಈ ಕಾರಿನ ಸೈಡ್ ಪ್ರೊಫೈಲ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವ್ಯಾಗನ್ಆರ್ ಮಾದರಿಗೆ ಹೋಲುತ್ತದೆ. ಹಿಂಭಾಗದಲ್ಲಿ ಕೆಲವು ಹೊಸ ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮಾರುತಿ ಸುಜುಕಿ ವ್ಯಾಗನ್ಆರ್ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗೊಳಿಸುವಾಗ ಈ ಎಲೆಕ್ಟ್ರಿಕ್ ಆವೃತ್ತಿಯು ಉತ್ತಮ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದಲ್ಲಿ ಮಾರುತಿ ಸುಜುಕಿ ವ್ಯಾಗನಾರ್ ಎಕ್ಸ್‌ಟ್ರಾ ಎಡಿಷನ್ ಬಿಡುಗಡೆ

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಮುಂದಿನ ಮಾದರಿಯಾಗಿ ಭಾರತೀಯ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಇನ್ನು ಹೊಸ ಮಾರುತಿ ವ್ಯಾಗನ್‍ಆರ್ ಎಕ್ಸ್‌ಟ್ರಾ ಎಡಿಷನ್ ಮಾದರಿಯು ಶೀಘ್ರದಲ್ಲೇ ಡೀಲರುಗಳ ಬಳಿ ತಲುಪಲಿದೆ.

Most Read Articles

Kannada
English summary
Maruti suzuki launched special edition for wagonr xtra price feature details
Story first published: Thursday, August 5, 2021, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X