ಲಾಕ್‌ಡೌನ್ ನಡುವೆಯೂ ಮೇ ತಿಂಗಳಿನಲ್ಲಿ 32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಕೋವಿಡ್ 2ನೇ ಅಲೆಯ ಪರಿಣಾಮ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿರುವ ಪರಿಣಾಮ ಹೊಸ ವಾಹನ ಮಾರಾಟ ಕುಸಿತ ಕಂಡಿದೆ. ಬಹುತೇಕ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮಾರುತಿ ಸುಜುಕಿ ಕಂಪನಿಯು ಲಾಕ್‌ಡೌನ್ ನಡುವೆಯೂ 32,903 ಯುನಿಟ್ ಕಾರುಗಳನ್ನು ಮರಾಟ ಮಾಡಿದೆ.

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ವಿವಿಧ ರಾಜ್ಯಗಳಲ್ಲಿ ಕಠಿಣ ಕ್ರಮಗಳೊಂದಿಗೆ ಲಾಕ್‌ಡೌನ್ ವಿಧಿಸಿದ್ದರೂ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿರುವ ಕಾರು ಕಂಪನಿಗಳು ಶೋರೂಂ ತೆರೆಯಲಿದ್ದರೂ ನಿಗದಿತ ಅವಧಿಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹೊಸ ವಾಹನಗಳ ವಿತರಣೆ ಮಾಡುತ್ತಿದ್ದು, ಮಾರುತಿ ಸುಜುಕಿ ಸಹ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ 32,903 ಯುನಿಟ್ ಮಾರಾಟಗೊಳಿಸಿದೆ.

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಾರು ಮಾರಾಟ ಕಳೆದ ಏಪ್ರಿಲ್ ಅವಧಿಗಿಂತ ಶೇ.76 ರಷ್ಟು ಕುಸಿತ ಕಂಡಿದ್ದು, ಕಾರು ಮಾರಾಟವನ್ನು ಕಳೆದ ವರ್ಷದ ಮೇ ಅವಧಿಗೆ ಹೋಲಿಕೆ ಮಾಡಿದ್ದಲ್ಲಿ ಈ ವರ್ಷದ ಮೇ ಅವಧಿಯಲ್ಲೇ ಹೆಚ್ಚು ಕಾರುಗಳು ಮಾರಾಟವಾಗಿವೆ.

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಆದರೆ ಕಳೆದ ವರ್ಷದ ಮೇ ಅವಧಿಯಲ್ಲಿನ ಕಾರು ಮಾರಾಟವನ್ನು ಈ ವರ್ಷದ ಮೇ ಅವಧಿಯ ಕಾರು ಮಾರಾಟಕ್ಕೆ ಹೋಲಿಕೆ ಮಾಡಲು ಕಳೆದ ವರ್ಷದ ಕೋವಿಡ್ ಭೀತಿಯು ಇದಕ್ಕಿಂತಲೂ ಹೆಚ್ಚು ಭೀಕರವಾಗಿತ್ತು. ಜೊತೆಗೆ ಕುಸಿತ ಕಂಡಿದ್ದ ಆರ್ಥಿಕ ಪರಿಸ್ಥಿತಿಯು ಹೊಸ ವಾಹನ ಮಾರಾಟವು ಚೇತರಿಸಿಕೊಳ್ಳಲು ಹಲವು ತಿಂಗಳುಗಳೆ ಬೇಕಾದವು.

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಸದ್ಯ ಕೋವಿಡ್ ಎರಡನೇ ಅಲೆಯ ಪರಿಣಾಮ ಮತ್ತೆ ವಾಹನ ಮಾರಾಟವು ಕುಸಿತ ಕಂಡಿದ್ದು, ಕೋವಿಡ್ ತಗ್ಗುತ್ತಿರುವುದಿಂದ ಇದು ಮುಂಬರುವ ಕೆಲವೇ ತಿಂಗಳಿನಲ್ಲಿ ಪರಿಸ್ಥಿತಿ ಸರಿಹೋಗಬಹೆಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಕೋವಿಡ್ ಪರಿಸ್ಥಿತಿಯಿಂದ ಕಾರು ತಯಾಕರ ಕಂಪನಿಗಳು ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದು, ಮಾರುತಿ ಸುಜುಕಿ ಹೊಸ ವಾಹನಗಳ ಸರ್ವಿಸ್ ವಾರಂಟಿ ವಿಸ್ತರಿಸಿದೆ.

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಹೊಸ ವಾಹನಗಳ ವಾರಂಟಿ ಅವಧಿಯನ್ನು ಮಾರ್ಚ್ 15ರಿಂದ ಮೇ 31ರವರೆಗೆ ಇದ್ದ ಫ್ರೀ ಸರ್ವೀಸ್ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ವಾರಂಟಿ ಸರ್ವಿಸ್ ಪಡೆದ ಗ್ರಾಹಕರಿಗೆ ಹೆಚ್ಚುವರಿ ಸಮಯಾವಕಾಶ ನೀಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ವಾರಂಟಿ ಅವಧಿ ವಿಸ್ತರಣೆ ಕುರಿತು ಮಾಹಿತಿ ನೀಡಿರುವ ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಅನುಕೂಲಕ್ಕಾಗಿ ಫ್ರೀ ಸರ್ವೀಸ್, ವಾರಂಟಿ ಹಾಗೂ ಎಕ್ಸ್'ಟೆಂಟೆಡ್ ವಾರಂಟಿ ವಿಸ್ತರಿಸಿದ್ದು, ಲಾಕ್‌ಡೌನ್ ಮುಗಿದ ನಂತರವೇ ವಾರಂಟಿ ಸೇವೆಗಳನ್ನು ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ಮನವಿ ಮಾಡಿದೆ.

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಈ ವಿಸ್ತರಣೆಯು ಮಾರ್ಚ್ 15ರಿಂದ ಮೇ 31ರವರೆಗೆ ಕೊನೆಗೊಳ್ಳುವ ಫ್ರೀ ಸರ್ವೀಸ್ ಹಾಗೂ ವಾರಂಟಿಗಳಿಗೆ ಅನ್ವಯವಾಗಲಿದೆ. ಈ ಬಗ್ಗೆ ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಪಾರ್ಥೋ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

32,903 ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಗ್ರಾಹಕರ ಅನುಕೂಲಕ್ಕಾಗಿ ಫ್ರೀ ಸರ್ವೀಸ್, ವಾರಂಟಿ ಹಾಗೂ ಎಕ್ಸ್'ಟೆಂಟೆಡ್ ವಾರಂಟಿಯನ್ನು ಜೂನ್ 30ರವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. ಈಗ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವುದರಿಂದ ಜನರು ಮನೆಯಿಂದ ಹೊರ ಬರಲು ಸಾಧ್ಯವಾಗದ ಹಿನ್ನಲೆಯಲ್ಲಿ ಗ್ರಾಹಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ ಎಂದಿದ್ದಾರೆ.

Most Read Articles

Kannada
English summary
Maruti Suzuki May 2021 Sales Report. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X