ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki)ಯು ವಿವಿಧ ಮಾದರಿಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಬಿಎಸ್-6 ಜಾರಿ ನಂತರ ಕಂಪನಿಯು ಕೇವಲ ಪೆಟ್ರೋಲ್, ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಮಾರುತಿ ಸುಜುಕಿ ಕಂಪನಿಯು ಬಿಎಸ್-6 ಜಾರಿ ನಂತರವೇ ಸುಮಾರು 1 ಮಿಲಿಯನ್‌ಗೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ಕೆಲ ದಿನಗಳ ಹಿಂದೆ ಉತ್ಪಾದನೆಗೊಂಡಿರುವ ಪ್ರಮುಖ ಕಾರುಗಳ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಗ್ರಾಹಕರ ದೂರಗಳ ನಂತರ ಹೊಸ ಕಾರುಗಳ ಎಂಜಿನ್ ತಾಂತ್ರಿಕ ದೋಷವನ್ನು ಪತ್ತೆಹಚ್ಚಿರುವ ಕಂಪನಿಯು ಸುಮಾರು 1.80 ಲಕ್ಷ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಿಯಾಜ್, ವಿಟಾರಾ ಬ್ರೆಝಾ, ಎರ್ಟಿಗಾ, ಎಕ್ಸ್ಎಲ್6 ಮತ್ತು ಎಸ್-ಕ್ರಾಸ್ ಕಾರು ಮಾದರಿಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದು, ಮೇ 4, 2018ರಿಂದ ಅಕ್ಟೋಬರ್ 27, 2020ರ ನಡುವೆ ತಯಾರಿಸಿದ ಪೆಟ್ರೋಲ್ ಮಾದರಿಗಳಲ್ಲಿ ಸಮಸ್ಯೆ ಕಂಡುಬಂದಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಕಂಪನಿಯ ಮಾಹಿತಿ ಪ್ರಕಾರ, ನಿಗದಿತ ದಿನಾಂಕದ ನಡುವೆ ಉತ್ಪಾದನೆಗೊಂಡ ಕಾರುಗಳ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿರುವ ಜನರೇಟನ್ ದೋಷದಿಂದ ಕೂಡಿರುವುದನ್ನು ಪತ್ತೆಹಚ್ಚಿದೆ. ಈ ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲವಾದ ಕಾರು ಎಂಜಿನ್ ದಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತಿತ್ತು.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಈ ಹಿನ್ನಲೆ ಗ್ರಾಹಕರ ದೂರಗಳನ್ನು ಆಲಿಸಿ ತಾಂತ್ರಿಕ ದೋಷದಿಂದ ಕೂಡಿರುವ ಕಾರುಗಳನ್ನು ಪತ್ತೆ ಹಚ್ಚಿರುವ ಕಂಪನಿಯು ನಿಗದಿತ ಅವಧಿಯಲ್ಲಿ ಮಾರಾಟಗೊಂಡ ಕಾರುಗಳ ಮಾಲೀಕರನ್ನು ಈಗಾಗಲೇ ಸಂಪರ್ಕಿಸುತ್ತಿದ್ದು, ತಾಂತ್ರಿಕ ಸಮಸ್ಯೆಯನ್ನು ಹತ್ತಿರದ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಕೂಡಲೇ ಸರಿಪಡಿಸಿಕೊಳ್ಳುವಂತೆ ಮನವಿ ಮಾಡಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಜೊತೆಗೆ ಎಂಜಿನ್ ತಾಂತ್ರಿಕ ದೋಷವನ್ನು ಸರಿಪಡಿಸಲು ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎನ್ನುವುದು ಸ್ಪಷ್ಟಪಡಿಸಿದ್ದು, ಭವಿಷ್ಯದಲ್ಲಿನ ವಾಹನಗಳ ಉತ್ಪಾದನಾ ಸಂದರ್ಭಗಳಲ್ಲಿ ಗರಿಷ್ಠ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಮೇ 4, 2018ರಿಂದ ಅಕ್ಟೋಬರ್ 27, 2020ರ ನಡುವೆ ಉತ್ಪಾದನೆಗೊಂಡು ಮಾರಾಟವಾಗಿರುವ ವಾಹನಗಳ ಚಾರ್ಸಿ ನಂಬರ್‌ಗಳನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, 'Imp Customer Info' ವಿಭಾಗದಲ್ಲಿ ಚಾರ್ಸಿ ನಂಬರ್ ನಮೂದಿಸಿ ನಿಮ್ಮ ವಾಹನ ಏನಾದರೂ ದೋಷಪೂರಿತ ವಾಹನ ಪಟ್ಟಿಯಲ್ಲಿ ಇದೆಯಾ? ಎನ್ನುವುದು ಪರಿಶೀಲನೆ ಮಾಡಬಹುದು.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಇನ್ನು ಬಜೆಟ್ ಬೆಲೆಯ ವಾಹನಗಳ ಮೂಲಕ ಭಾರತೀಯ ಗ್ರಾಹಕರ ನೆಚ್ಚಿನ ಕಾರ್ ಬ್ರಾಂಡ್ ಹೊರಹೊಮ್ಮಿರುವ ಮಾರುತಿ ಸುಜುಕಿಯು ತನ್ನ ಉತ್ಪನ್ನ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ತಡೆಯಲು ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದರೂ ಪದೇ ಪದೇ ತಾಂತ್ರಿಕ ದೋಷಗಳನ್ನು ಕಂಡುಬರುತ್ತಿರುವುದು ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆಗಳಿವೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಹೊಸ ವಾಹನಗಳ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಲು ಸಾಕಷ್ಟು ಹೊಸ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿ ಕಂಪನಿಯು ಹೊಸ ಎಮಿಷನ್ ಜಾರಿ ನಂತರ ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಮಾರುತಿ ಸುಜುಕಿಯು ಕಾರು ಮಾರಾಟದಲ್ಲಿ ಎರಡು ಹಂತದ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳನ್ನು ಮಾರಾಟ ಮಾಡಿದ್ದಲ್ಲಿ ನೆಕ್ಸಾ ಶೋರೂಂನಲ್ಲಿ ಪ್ರೀಮಿಯಂ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರು ಮಾರಾಟ ಸೌಲಭ್ಯ ಹೊಂದಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ದೇಶಾದ್ಯಂತ ಮಾರುತಿ ಸುಜುಕಿ ಸದ್ಯ 2,600ಕ್ಕೂ ಹೆಚ್ಚು ಅರೆನಾ ಕಾರು ಮಾರಾಟ ಮಳಿಗೆಗಳನ್ನು ಹೊಂದಿದ್ದರೆ 370 ನೆಕ್ಸಾ ಶೋರೂಂಗಳನ್ನು ತೆರೆದಿದ್ದು, ನೆಕ್ಸಾ ಶೋರೂಂಗಳು ಸದ್ಯಕ್ಕೆ ಮೆಟ್ರೋ ನಗರಗಳು ಮತ್ತು ಟೈರ್ 1 ನಗರಗಳಲ್ಲಿ ಮಾತ್ರ ಕಾರ್ಯನಿರ್ವಹಣೆಯಲ್ಲಿವೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಬಜೆಟ್ ಕಾರುಗಳ ಮೂಲಕ ಅರೆನಾ ಕಾರು ಮಾರಾಟ ಮಳಿಗೆಗಳು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ ನೆಕ್ಸಾ ಶೋರೂಂಗಳು ತುಸು ಪ್ರೀಮಿಯಂ ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್6 ಮತ್ತು ಎಸ್-ಕ್ರಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

2015ರ ಮೊದಲ ಬಜೆಟ್ ಮತ್ತು ಪ್ರೀಮಿಯಂ ಕಾರುಗಳ ಮಾರಾಟವನ್ನು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿಯು ಮೊದಲ ಬಾರಿಗೆ ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ತೆರೆಯಲು ಆರಂಭಿಸಿತು.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ನೆಕ್ಸಾ ಶೋರೂಂ ಆರಂಭವಾಗಿ ಭಾರತದಲ್ಲಿ 6 ವರ್ಷ ಪೂರೈಸಿದ್ದು, ನೆಕ್ಸಾ ಮಾರಾಟ ಮಳಿಗೆಗಳ ಮೂಲಕ ಮಾರುತಿ ಸುಜುಕಿ ಕಂಪನಿಯು ಇದುವರೆಗೆ ಬರೋಬ್ಬರಿ 14 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ತಾಂತ್ರಿಕ ದೋಷ: 1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಮಾರುತಿ ಸುಜುಕಿಯು ಸದ್ಯಕ್ಕೆ 800ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಹೊರತುಪಡಿಸಿ ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗಾಗಿ ಹೊಸ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಿಡುಗಡೆಗೊಳಿಸಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ.

Most Read Articles

Kannada
English summary
Maruti suzuki recalls 1.81 lakh petrol cars in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X