Just In
- 36 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 37 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 2 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- News
ಸುಳ್ಳು ಹೇಳಿದ್ದು ಸಾಬೀತಾದರೆ ಮೋದಿ ಬಸ್ಕಿ ಹೊಡೆಯಬೇಕು; ಮಮತಾ ಬ್ಯಾನರ್ಜಿ
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Movies
'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ಕಂಪನಿಯು ಕಳೆದ ತಿಂಗಳ ಮಾರಾಟದಲ್ಲಿ ಸಣ್ಣ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಆದರೆ ಮಾರುತಿ ಕಂಪನಿಯ ಸರಣಿಯಲ್ಲಿರುವ ಎಂಪಿವಿ ಮಾದರಿಗಳ ಮಾರಾಟದಲ್ಲಿ ಗಮನಾರ್ಹ ಕುಸಿತವನ್ನು ಕಂಡಿದೆ.

2021ರ ಫೆಬ್ರವರಿ ತಿಂಗಳಿನಲ್ಲಿ ಎರ್ಟಿಗಾದ ಒಟ್ಟು 9,774 ಯುನಿಟ್ಗಳನ್ನು ಮಾರಾಟ ಮಾಡಿದೆ. ಇನ್ನು ಎಕ್ಸ್ಎಲ್6 ಮಾದರಿಯ 3,020 ಯುನಿಟ್ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2020ರಲ್ಲಿ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾದ 11,782 ಯುನಿಟ್ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.17.4 ರಷ್ಟು ಕುಸಿತವನ್ನು ಕಂಡಿದೆ. ಆದರೆ 2021ರ ಜನವರಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.2.19 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಇನ್ನು 2020ರ ಫೆಬ್ರವರಿಯಲ್ಲಿ ಎಕ್ಸ್ಎಲ್6 ಎಂಪಿವಿಯ 3,886 ಯುನಿಟ್ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.28.29 ರಷ್ಟು ಕುಸಿತವನ್ನು ಕಂಡಿದೆ. ಇನ್ನು 2021ರ ಜನವರಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕಳೆದ ತಿಂಗಳು ಶೇ.3.17 ರಷ್ಟು ಕುಸಿತವನ್ನು ಕಂಡಿದೆ.
MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಇದರಲ್ಲಿ ಮೊದಲಿಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಮಾದರಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಏಕೈಕ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 105 ಬಿಹೆಚ್ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಜೊತೆಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೈಲ್ ಲ್ಯಾಂಪ್ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಇನ್ನು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯಲ್ಲಿ ಸುರಕ್ಷತೆಗಾಗಿ, ಎಂಪಿವಿ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್ಗಳು, ಇಎಸ್ಪಿ, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟಲ್ ಏರ್ಬ್ಯಾಗ್ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್ಗಳೊಂದಿಗೆ ಎಬಿಎಸ್ ಅನ್ನು ಪಡೆಯುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಮಾರುತಿ ಸುಜುಕಿ ಕಂಪನಿಯ ಎಕ್ಸ್ಎಲ್6 ಎಂಪಿವಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ 1.5-ಲೀಟರ್ ಇನ್-ಲೈಮ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಿದೆ. ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಕಾರ್ಯಗಳು ಎಂಪಿವಿಯಲ್ಲಿ ಸ್ಯಾಂಡರ್ಡ್ ಆಗಿ ಲಭ್ಯವಿದೆ.

ಮಾರುತಿ ಸುಜುಕಿ ಕಂಪನಿಯ ತನ್ನ ಸರಣಿಯಲ್ಲಿರುವ ಎಲ್ಲಾ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಎಂಪಿವಿ ವಿಭಾಗದ ಎರ್ಟಿಗಾ ಮತ್ತು ಎಕ್ಸ್ಎಲ್6 ಮಾದರಿಗಳ ಮಾರಾಟದಲ್ಲಿ ಕುಸಿತ ಕಂಡಿರುವ ಕಾರಣದಿಂದ ಮುಂದಿನ ಎರಡು ವರ್ಷಗಳಲ್ಲಿ ಈ ಎರಡು ಮಾದರಿಗಳನ್ನು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಬಹುದು.