ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಗ್ರಾಹಕರಿಗೆ ಕಾರು ಸಾಲದ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕ ಬ್ಯಾಂಕ್ ತನ್ನ 858 ಶಾಖೆಗಳ ಮೂಲಕ ಮಾರುತಿ ಸುಜುಕಿ ವಾಹನಗಳಿಗೆ ಸಾಲ ನೀಡಲಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಪ್ರಕಾರ, ಅರೆನಾ ಹಾಗೂ ನೆಕ್ಸಾ ಮಾರಾಟಗಾರರ ಮೂಲಕ ಖರೀದಿಸುವ ಕಾರಿನ ಆನ್-ರೋಡ್ ಬೆಲೆಯ 85%ನಷ್ಟು ಸಾಲ ನೀಡಲಾಗುತ್ತದೆ. ಕಾರುಗಳ ಮೇಲೆ ಗರಿಷ್ಠ 84 ತಿಂಗಳವರೆಗೆ ಸಾಲ ನೀಡಲಾಗುತ್ತದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಈ ಒಪ್ಪಂದದ ಕುರಿತು ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವರವರು, ಈ ಸಹಭಾಗಿತ್ವದಿಂದಾಗಿ ಗ್ರಾಹಕರಿಗೆ ಮಾರುತಿ ಕಾರುಗಳನ್ನು ಖರೀದಿಸಲು ಸುಲಭವಾಗಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಕಾರಿನ ಮಾಲೀಕತ್ವವನ್ನು ಸುಲಭಗೊಳಿಸಲು ಕಂಪನಿಯು ಹಲವಾರು ಯೋಜನೆಗಳನ್ನು ಆರಂಭಿಸಿದೆ. ಕಂಪನಿಯು ತನ್ನ ಗ್ರಾಹಕರಿಗಾಗಿ ಸುಲಭ ಇಎಂಐ ಹಾಗೂ ಹಣಕಾಸು ಆಯ್ಕೆಗಳನ್ನು ನೀಡುತ್ತಿದೆ ಎಂದು ಹೇಳಿದರು.

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

2020-21ರ ಆರ್ಥಿಕ ವರ್ಷದಲ್ಲಿ ಕಂಪನಿಯು ಬ್ಯಾಂಕುಗಳ ಸಹಭಾಗಿತ್ವದೊಂದಿಗೆ 9.7 ಲಕ್ಷ ವಾಹನಗಳನ್ನು ಹಣಕಾಸು ಯೋಜನೆಯ ಮೂಲಕ ಮಾರಾಟ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಈಗ ಕಂಪನಿಯು ಕರ್ನಾಟಕದ ಗ್ರಾಹಕರಿಗಾಗಿ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ಇದು ಮಾರುತಿ ಕಾರುಗಳನ್ನು ಖರೀದಿಸಲು ಸುಲಭವಾಗಿದೆ. ಮಾರುತಿ ಸುಜುಕಿ ಕಂಪನಿಯು ಏಪ್ರಿಲ್ 1ರಿಂದ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಈ ವರ್ಷ ಕಂಪನಿಯು ಎರಡನೇ ಬಾರಿಗೆ ಬೆಲೆ ಏರಿಕೆ ಮಾಡುತ್ತಿದೆ. ಮಾದರಿ ಹಾಗೂ ರೂಪಾಂತರಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಉತ್ಪಾದನಾ ವೆಚ್ಚವು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಬೆಲೆ ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ರೂ.35,000ಗಳಷ್ಟು ಹೆಚ್ಚಿಸಿತು. ಮಹೀಂದ್ರಾ ಅಂಡ್ ಮಹೀಂದ್ರಾ ಹಾಗೂ ಟಾಟಾ ಮೋಟಾರ್ಸ್ ಕಂಪನಿಗಳು ಸಹ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ.

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ವರದಿಯ ಪ್ರಕಾರ ವಾಹನಗಳ ಬೆಲೆ ಹೆಚ್ಚಳ ಹಾಗೂ ಇಂಧನ ಬೆಲೆ ಹೆಚ್ಚಳದ ಹೊರತಾಗಿಯೂ ಪ್ರಯಾಣಿಕರ ವಾಹನ ಹಾಗೂ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ ಎಂದು ಹೇಳಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

ಕರೋನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ಸಾರ್ವಜನಿಕ ಸಾರಿಗೆಗಳಿಗಿಂತ ವೈಯಕ್ತಿಕ ಸಾರಿಗೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಕಾರು ಖರೀದಿಯನ್ನು ಸುಲಭವಾಗಿಸಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಮಾರುತಿ ಸುಜುಕಿ

2020ರ ಫೆಬ್ರವರಿ ತಿಂಗಳಿಗಿಂತ 2021ರ ಫೆಬ್ರವರಿ ತಿಂಗಳಿನಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು 18%ನಷ್ಟು ಹೆಚ್ಚಾಗಿದೆ. ಇದೇ ವೇಳೆ ದ್ವಿಚಕ್ರ ವಾಹನ ಮಾರಾಟವು 2021ರ ಫೆಬ್ರವರಿ ತಿಂಗಳಿನಲ್ಲಿ 10%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

Most Read Articles

Kannada
English summary
Maruti Suzuki tie up with Karnataka Bank for car loan. Read in Kannada.
Story first published: Wednesday, March 31, 2021, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X