ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಕಳೆದ ತಿಂಗಳು Maruti Suzuki ಕಂಪನಿಯ ಮಾರಾಟ ಪ್ರಮಾಣವು ಕಡಿಮೆಯಾಗಿದೆ. ಇದರ ಬೆನ್ನಲ್ಲೇ ಕಂಪನಿಯು ಅಕ್ಟೋಬರ್‌ ತಿಂಗಳಿನಲ್ಲಿ ತನ್ನ ಕಾರುಗಳ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದೆ. Maruti Suzuki ಕಂಪನಿಯು ಅಕ್ಟೋಬರ್ ತಿಂಗಳಲ್ಲಿ ಕಾರುಗಳನ್ನು 60% ಪ್ರಮಾಣದಲ್ಲಿ ಉತ್ಪಾದಿಸಲಿದೆ. ಈ ಕಾರುಗಳನ್ನು ಕಂಪನಿಯ ಎರಡು ಉತ್ಪಾದನಾ ಘಟಕಗಳಲ್ಲಿ ಉತ್ಪಾದಿಸಲಾಗುವುದು.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಚಿಪ್ ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ Maruti Suzuki ಕಂಪನಿಯ ಕಾರುಗಳ ಉತ್ಪಾದನೆ ಕಡಿಮೆಯಾಗಿದೆ. ಕಂಪನಿಯು ಅಕ್ಟೋಬರ್ ತಿಂಗಳಿನಲ್ಲಿ 40% ನಷ್ಟು ಮಾತ್ರ ಕಾರು ಉತ್ಪಾದನೆ ಮಾಡಿತ್ತು. Maruti Suzuki ಕಂಪನಿಯ ಉತ್ಪಾದನೆಯಲ್ಲಿನ ಕಡಿತವು ಈ ತಿಂಗಳಲ್ಲಿಯೂ ಮುಂದುವರಿಯಲಿದೆ ಎಂದು ಇತ್ತೀಚೆಗೆ ಮಾಹಿತಿ ನೀಡಲಾಗಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಆದರೂ ಸಾಲು ಸಾಲು ಹಬ್ಬಗಳು ಇರುವುದರಿಂದ ಕಂಪನಿಯು ತನ್ನ ಪೂರೈಕೆದಾರರಿಗೆ ಚಿಪ್ ಗಳನ್ನು ಪೂರೈಸುವಂತೆ ಮನವಿ ಮಾಡಿದೆ. ಇದರಿಂದ ಕಂಪನಿಯ ಕಾರುಗಳ ಉತ್ಪಾದನೆಯನ್ನು ಸುಧಾರಿಸಬಹುದು. Maruti Suzuki ಕಂಪನಿಯು ಅಕ್ಟೋಬರ್ ತಿಂಗಳಿನಲ್ಲಿ ಸೆಪ್ಟೆಂಬರ್ ತಿಂಗಳಿಗಿಂತ ಸ್ವಲ್ಪ ಹೆಚ್ಚು ಕಾರುಗಳನ್ನು ಉತ್ಪಾದಿಸಲಿದೆ. ಪ್ರಪಂಚದಾದ್ಯಂತ ಸೆಮಿ ಕಂಡಕ್ಟರ್ ಗಳಿಗೆ ಕೊರತೆ ಉಂಟಾಗಿರುವುದು ಕಾರು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಈ ಸಮಸ್ಯೆಯು ಶೀಘ್ರವೇ ಬಗೆ ಹರಿಯುವುದಿಲ್ಲ. ಮುಂದಿನ ಕೆಲವು ತಿಂಗಳುಗಳವರೆಗೆ ಈ ಸಮಸ್ಯೆ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಆದರೆ ಭಾರತದಲ್ಲಿ ಹಬ್ಬಗಳು ಸಮೀಪಿಸುತ್ತಿರುವುದರಿಂದ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. Mahindra and Mahindra ದಂತಹ ಕಂಪನಿಯು ಸಹ ತನ್ನ ವಾಹನಗಳ ಉತ್ಪಾದನೆ ಕಡಿಮೆ ಇರುತ್ತದೆ ಎಂದು ಹೇಳಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಬಿಡಿ ಭಾಗಗಳ ಕಾರಣಕ್ಕೆ ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅನಿವಾರ್ಯವಾಗಿ ಕಂಪನಿಯು ಈ ವರ್ಷ ವಾಹನಗಳ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿದೆ. ವಾಹನ ತಯಾರಕ ಕಂಪನಿಗಳು ತಮ್ಮ ದೊಡ್ಡ ದೊಡ್ಡ ಮಾದರಿಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿವೆ. ಇದರಲ್ಲಿ Maruti Suzuki ಮಾತ್ರವಲ್ಲದೆ Tata Motors, Mahindra and Mahindra ಕಂಪನಿಗಳೂ ಸಹ ಸೇರಿವೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಪೂರೈಕೆದಾರರಿಗೆ ಅಕ್ಟೋಬರ್‌ ತಿಂಗಳಿನಲ್ಲಿ 1,60,000 - 1,80,000 ವಾಹನಗಳ ಉತ್ಪಾದನೆಗೆ ಸಿದ್ಧವಾಗುವಂತೆ ಕೇಳಿಕೊಂಡಿದೆ. ಈ ಮೂಲಕ, ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡು ಪ್ರಯಾಣಿಕ ಕಾರುಗಳಲ್ಲಿ ಒಂದನ್ನು ಮಾರಾಟ ಮಾಡುವ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯು ತನ್ನ ಉತ್ಪಾದನೆಯನ್ನು ಸೀಮಿತಗೊಳಿಸಲು ಮುಂದಾಗಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

Maruti Suzuki ಕಂಪನಿಯ ಚಿಪ್ ಕೊರತೆಯು ಮಲೇಷ್ಯಾದಲ್ಲಿ ಕೋವಿಡ್ 19 ಪರಿಸ್ಥಿತಿ ಕಡಿಮೆಯಾದ ನಂತರ ಸುಧಾರಿಸಬಹುದು. Maruti Suzuki ಕಂಪನಿಯು ತನ್ನ ಸೆಪ್ಟೆಂಬರ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯು ಕಳೆದ ತಿಂಗಳು ಒಟ್ಟು 86,380 ವಾಹನಗಳನ್ನು ಮಾರಾಟ ಮಾಡಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಕಂಪನಿಯು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 1,60,442 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 46% ನಷ್ಟು ಕಡಿಮೆಯಾಗಿದೆ. ಹಬ್ಬಗಳ ಸೀಸನ್ ಆರಂಭಗೊಂಡಿರುವ ಸಂದರ್ಭದಲ್ಲಿ ಹಾಗೂ ಕಂಪನಿಯು ಹೆಚ್ಚು ಬುಕ್ಕಿಂಗ್ ಪಡೆಯುತ್ತಿರುವ ಸಮಯದಲ್ಲಿಯೇ ಕಡಿಮೆ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿರುವುದು ಗಮನಾರ್ಹ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಕಂಪನಿಯು ಹೆಚ್ಚು ಬುಕ್ಕಿಂಗ್ ಗಳನ್ನು ಪಡೆಯುತ್ತಿದ್ದು, ಲಕ್ಷಾಂತರ ಬುಕ್ಕಿಂಗ್‌ಗಳು ಬಾಕಿ ಉಳಿದಿವೆ. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದಾದ್ಯಂತ ಸೆಮಿ ಕಂಡಕ್ಟರ್‌ಗಳಿಗೆ ಕೊರತೆ ಎದುರಾಗಿದೆ. ಇದರಿಂದ ಅತ್ಯಾಧುನಿಕ ಕಾರುಗಳ ಉತ್ಪಾದನೆಯಲ್ಲಿ ಕುಸಿತ ಕಂಡು ಬಂದಿದೆ, ಈ ಸಮಸ್ಯೆಯು ದೀರ್ಘ ಕಾಲೀನವಾಗಿದ್ದು, ಶೀಘ್ರದಲ್ಲೇ ಬಗೆಹರಿಯುವುದಿಲ್ಲವೆಂದು ಹೇಳಲಾಗುತ್ತಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಕಾರು ಖರೀದಿಯನ್ನು ಸುಲಭಗೊಳಿಸಲು Maruti Suzuki ಕಂಪನಿಯು ತನ್ನ ಎಐ ಆಧಾರಿತ ವರ್ಚುವಲ್ ಕಾರ್ ಅಸಿಸ್ಟೆಂಟ್ ಎಸ್ ಅಸಿಸ್ಟ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಸೇವೆಯು ಆರಂಭದಲ್ಲಿ ನೆಕ್ಸಾ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ನಂತರದ ಅರೆನಾ ಗ್ರಾಹಕರೂ ಈ ಸೇವೆಯನ್ನು ಪಡೆಯಬಹುದು. ವರ್ಚುವಲ್ ಕಾರ್ ಅಸಿಸ್ಟೆಂಟ್ ಸೇವೆಯು 24 ಗಂಟೆ ಲಭ್ಯವಿರುತ್ತದೆ ಎಂದು Maruti Suzuki ಕಂಪನಿ ಹೇಳಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

ಮುಂಬರುವ ಹಬ್ಬಗಳು Maruti Suzuki ಕಂಪನಿಯ ಪಾಲಿಗೆ ಇನ್ನಷ್ಟು ಕಠಿಣವಾಗಲಿವೆ. ಈಗಾಗಲೇ ಕಾರುಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಹಬ್ಬಗಳ ಸಂದರ್ಭದಲ್ಲಿ ಕಾರುಗಳ ವಿತರಣೆ ಪಡೆಯಲು ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಯು ತನ್ನ ಉತ್ಪಾದನೆಯನ್ನು ಹೆಚ್ಚಿಸ ಬೇಕಾಗುತ್ತದೆ, ಆಗ ಮಾತ್ರ ಪರಿಸ್ಥಿತಿ ಸುಧಾರಿಸಲಿದೆ.

ಕಾರುಗಳ ಉತ್ಪಾದನೆಯನ್ನು ಕಡಿತಗೊಳಿಸಿದ Maruti Suzuki

2005 ರಲ್ಲಿ ಬಿಡುಗಡೆಯಾದ Maruti Suzuki Swift ಕಾರು ಭಾರತದಲ್ಲಿ 25 ಲಕ್ಷ ಯುನಿಟ್ ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಈ 16 ವರ್ಷಗಳ ಅವಧಿಯಲ್ಲಿ Swift ಕಾರು ತನ್ನ ಆಧುನಿಕ ಸ್ಟೈಲಿಂಗ್, ದಕ್ಷ ಪವರ್‌ ಟ್ರೇನ್‌, ಮೈಲೇಜ್ ಹಾಗೂ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯವಾಗಿದೆ.Swift ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5.84 ಲಕ್ಷಗಳಾಗಿದೆ. ಪೆಟ್ರೋಲ್ ಮಾದರಿಯಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಹಾಗೂ 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Maruti suzuki to reduce cars manufacturing in october details
Story first published: Monday, October 4, 2021, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X