ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಮಾರುತಿ ಸುಜುಕಿ (Maruti Suzuki) ಕಂಪನಿಯ ಕೆಲವು ಕಾರು ಮಾದರಿಗಳ ಎಂಜಿನ್‌ಗಳು ಅತಿಯಾಗಿ ಕಂಪಿಸುತ್ತಿದ್ದವು. ಅದನ್ನು ಪರಿಶೀಲಿಸಿ, ಬದಲಾಯಿಸಲು ಕಂಪನಿಯು ಸೇವಾ ಅಭಿಯಾನವನ್ನು ನಡೆಸುತ್ತಿದೆ. ಅದರ ಅಡಿಯಲ್ಲಿ ಮಾರುತಿ ಸುಜುಕಿ ಗ್ರಾಹಕರು ತಮ್ಮ ಎಂಜಿನ್ ಮೌಂಟ್‌ಗಳನ್ನು ಬದಲಾಯಿಸಿ ಕೊಳ್ಳಬಹುದು. ಈ ಸೇವೆಯು 2022ರ ಜುಲೈ ವರೆಗೂ ಲಭ್ಯವಿರಲಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಮಾರುತಿ ಸುಜುಕಿ ಕಂಪನಿಯ Ertiga, XL6, Swift, Dzire, Ciaz ಹಾಗೂ Ignis ಕಾರು ಮಾದರಿಗಳ ಎಂಜಿನ್'ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಯು ಮಾಡುವ ಸಣ್ಣ ತಪ್ಪು ಕೂಡ ದೊಡ್ಡ ಸಮಸ್ಯೆಯನ್ನು ತರಬಲ್ಲದು.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಇವುಗಳನ್ನು ತಪ್ಪಿಸಲು ಕಂಪನಿಯು ಕಾಲಕಾಲಕ್ಕೆ ಇಂತಹ ಸೇವಾ ಅಭಿಯಾನಗಳನ್ನು ನಡೆಸುತ್ತದೆ. ಇದರ ಅಡಿಯಲ್ಲಿ ಮಾರುತಿ ಸುಜುಕಿ ಗ್ರಾಹಕರು ತಮ್ಮ ಕಾರಿನ ಎಂಜಿನ್ ಅನ್ನು ಪರಿಶೀಲಿಸಬಹುದು. ಓದು ವೇಳೆ ಸಮಸ್ಯೆ ಕಂಡು ಬಂದರೆ ಕಂಪನಿಯ ಡೀಲರ್‌ಶಿಪ್ ಆ ಸಮಸ್ಯೆಯನ್ನು ಸರಿಪಡಿಸಲಿದೆ. ಈ ಮಾದರಿಗಳ ಗ್ರಾಹಕರಿಗೆ ತಮ್ಮ ಎಂಜಿನ್‌ನಲ್ಲಿ ಸಾಕಷ್ಟು ವೈಬ್ರೆಷನ್ ಆಗುತ್ತಿರುವುದು ಕಂಡು ಬಂದರೆ ಅವರು ತಮ್ಮ ಕಾರಿನ ತಪಾಸಣೆ ಮಾಡಿಸಬಹುದು ಎಂದು ಕಂಪನಿ ಹೇಳಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

11610M72R00 ಸಂಖ್ಯೆಯ ಬಲಭಾಗದಲ್ಲಿರುವ ಸೈಡ್ ಎಂಜಿನ್ ಮೌಂಟ್'ನಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಕಂಪನಿಯು ಸರಿ ಪಡಿಸಲು ಮುಂದಾಗಿದೆ. ಇದನ್ನು ಗ್ರಾಹಕರು ಸ್ವತಃ ತಾವೇ ಪರಿಶೀಲಿಸಬಹುದು. ಇಲ್ಲದಿದ್ದರೆ ತಮ್ಮ ಹತ್ತಿರದ ಮಾರುತಿ ಸುಜುಕಿ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಈ ಮಾದರಿಗಳ ಕಟ್ ಆಫ್ VIN ಈ ಕೆಳಗಿನಂತಿದೆ:

ಹೊಸ ಸ್ವಿಫ್ಟ್: MBHCZCB3SMG838412

ಎರ್ಟಿಗಾ : MA3BNC32SMG361698

XL6: MA3CNC32SMG261516

ಇಗ್ನಿಸ್: MA3NFG81SMG319333

ಸಿಯಾಜ್: MA3EXGL1S00437213

ಡಿಜೈರ್: MA3EJKD1S00C76583

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಸೆಮಿಕಂಡಕ್ಟರ್ ಕೊರತೆ

ಸುಜುಕಿ ಮೋಟಾರ್ ಕಾರ್ಪೊರೇಷನ್ ಭಾರತದಲ್ಲಿ ತನ್ನ ಆಟೋಮೊಬೈಲ್ ಮಾರಾಟದಲ್ಲಿ ಕುಸಿತ ಉಂಟಾಗಬಹುದು ಎಂದು ಹೇಳಿದೆ. ಕಂಪನಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 6% ನಷ್ಟು ಕುಸಿತವನ್ನು ನಿರೀಕ್ಷಿಸುಟ್ಟಿದೆ. ಈಗ ಎದುರಾಗಿರುವ ಸೆಮಿಕಂಡಕ್ಟರ್ ಕೊರತೆಯಿಂದಾಗಿ ತನ್ನ ಒಟ್ಟಾರೆ ಜಾಗತಿಕ ಮಾರಾಟದಲ್ಲಿ 2.25 ಲಕ್ಷ ಯುನಿಟ್ ಕಡಿತಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಸುಜುಕಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಒಟ್ಟು ಜಾಗತಿಕ ಮಾರಾಟವು 24.86 ಲಕ್ಷ ಯುನಿಟ್‌ಗಳಾಗ ಬಹುದು ಎಂದು ಅಂದಾಜು ಮಾಡಿದೆ. ಇದು ಕಳೆದ ಬಾರಿಗಿಂತ 2.25 ಲಕ್ಷ ಯುನಿಟ್‌ಗಳಷ್ಟು ಕಡಿಮೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸುಜುಕಿ 25.71 ಲಕ್ಷ ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಅಂಗಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ 2020 - 21ರ ಹಣಕಾಸು ವರ್ಷದಲ್ಲಿ 14,57,861 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಪ್ಟೆಂಬರ್ 30 ರವರೆಗೆ ಕಂಪನಿಯು 7,33,155 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ವಾರ್ಷಿಕ ಉತ್ಪಾದನಾ ಯೋಜನೆಯನ್ನು ಸುಮಾರು 25.79 ಲಕ್ಷ ಯುನಿಟ್‌ಗಳಿಗೆ ಪರಿಷ್ಕರಿಸಲಾಗಿದೆ ಎಂದು ಸುಜುಕಿ ಕಂಪನಿ ಮಾಹಿತಿ ನೀಡಿದೆ. ಈ ಪ್ರಮಾಣವು ಆರಂಭಿಕ ಯೋಜನೆಗಿಂತ 2.99 ಲಕ್ಷ ಯುನಿಟ್ ಕಡಿಮೆಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 26.51 ಲಕ್ಷ ಯೂನಿಟ್ ವಾಹನಗಳನ್ನು ಉತ್ಪಾದಿಸಲಾಗಿತ್ತು.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಮಾರುತಿ ಸುಜುಕಿ ಕಂಪನಿಯು ಉತ್ಪಾದನೆಯ ಮೇಲೆ ಆಟೋ ಘಟಕಗಳ ಕೊರತೆಯ ಪರಿಣಾಮವನ್ನು ಕಡಿಮೆ ಮಾಡಿ, ತನ್ನ ಉತ್ಪನ್ನಗಳನ್ನು ಸಾಧ್ಯವಾದಷ್ಟು ಗ್ರಾಹಕರಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದೆ. ಕಂಪನಿಯು ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ತನ್ನ ಉತ್ಪಾದನಾ ಘಟಕಗಳಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಗಣನೀಯವಾಗಿ ಕಡಿಮೆಗೊಳಿಸಿತ್ತು.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಆದರೆ ಈಗ ಸೆಮಿಕಂಡಕ್ಟರ್'ಗಳಿಗೆ ನಿಧಾನವಾಗಿ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದ ಕಾರುಗಳ ವಿತರಣೆಗಾಗಿ ಕಾಯುವ ಅವಧಿಯೂ ಕಡಿಮೆಯಾಗುತ್ತಿದೆ. ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಸೆಲೆರಿಯೊ ಕಾರ್ ಅನ್ನು ಸಂಪೂರ್ಣವಾಗಿ ಹೊಸ ನೋಟದಲ್ಲಿ ಪರಿಚಯಿಸಿದೆ. ಹೊಸ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾದ ಹೊಸ ಸೆಲೆರಿಯೊ ಕಾರು ಮೊದಲಿಗಿಂತ ವಿಶಾಲ, ಹಗುರ ಹಾಗೂ ಗಟ್ಟಿಮುಟ್ಟಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಕಂಪನಿಯು ಈ ಕಾರ್ ಅನ್ನು ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಪೆಟ್ರೋಲ್ ಕಾರು ಎಂದು ಪರಿಚಯಿಸಿದೆ. ARAI ಪ್ರಮಾಣೀಕರಿಸಿರುವಂತೆ ಹೊಸ ಸೆಲೆರಿಯೊ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 26.68 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಸೆಲೆರಿಯೊ ಕಾರಿನಲ್ಲಿ ಕಂಪನಿಯ ಹೊಸ K10C ಲೈನ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಮ್ಯಾನುಯಲ್ ಹಾಗೂ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ಈ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಈ ಎಂಜಿನ್ ಗರಿಷ್ಠ 67 ಬಿಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೇವಾ ಅಭಿಯಾನದ ಮೂಲಕ ದೋಷಪೂರಿತ ಎಂಜಿನ್ ಸಮಸ್ಯೆ ಸರಿಪಡಿಸಲು ಮುಂದಾದ Maruti Suzuki

ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳು ಒಟ್ಟು 1,38,335 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 1,82,448 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಮಾರುತಿ ಸುಜುಕಿ ಕಂಪನಿಯು ಈ ಬಾರಿ ಶೇ.24.18 ರಷ್ಟು ಕುಸಿತವನ್ನು ದಾಖಲಿಸಿದೆ.

Most Read Articles

Kannada
English summary
Maruti suzuki to resolve faulty engine part problem through service campaign details
Story first published: Friday, November 26, 2021, 14:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X