ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಬಹುತೇಕ ಕಾರು ಕಂಪನಿಗಳು ವಾಹನಗಳ ಬೆಲೆ ಹೆಚ್ಚಳ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಏರಿಕೆಗೆ ಸಿದ್ದವಾಗಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿರುವುದು ವಾಹನ ಮಾಲೀಕತ್ವವು ದುಬಾರಿಯಾಗಿ ಪರಿಣಮಿಸಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 70 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಕಳೆದ ಜನವರಿ ಮತ್ತು ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ ನಿರ್ಮಾಣದ ಅರೆನಾ ಮತ್ತು ನೆಕ್ಸಾ ಎರಡು ಮಾದರಿಗಳು ಕೂಡಾ ದರ ಹೆಚ್ಚಳ ಪಡೆದುಕೊಂಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಏಪ್ರಿಲ್ ಅವಧಿಯೊಂದರಲ್ಲೇ ರೂ.9 ಸಾವಿರದಿಂದ ಗರಿಷ್ಠ ರೂ.34 ಸಾವಿರದಷ್ಟು ಬೆಲೆ ಏರಿಕೆಯಾಗಿತ್ತು.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ನೆಕ್ಸಾ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6 ಮತ್ತು ಎಸ್-ಕ್ರಾಸ್ ಮತ್ತು ಅರೆನಾದಲ್ಲಿರುವ ಆಲ್ಟೊ, ಇಕೊ, ಎಸ್‌ಪ್ರೆಸ್ಸೊ, ವ್ಯಾಗನ್ಆರ್, ಸ್ವಿಫ್ಟ್, ಸೆಲೆರಿಯೊ, ಡಿಜೈರ್, ವಿಟಾರಾ ಬ್ರೆಝಾ, ಎರ್ಟಿಗಾ ಕಾರುಗಳ ಬೆಲೆ ಹೆಚ್ಚಳವಾಗಿದ್ದು, ಇದೀಗ ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ಬೆಲೆ ಹೆಚ್ಚಿಸಲಾಗುತ್ತಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಜುಲೈ 1ರಿಂದಲೇ ಹೊಸ ದರ ಪ್ರಕಟಿಸುವುದಾಗಿ ಸುಳಿವು ನೀಡಿರುವ ಮಾರುತಿ ಕಂಪನಿಯು ಈ ತಿಂಗಳಾಂತ್ಯವರೆಗೆ ಒಂದಿಷ್ಟು ಬೇಡಿಕೆ ಸುಧಾರಿಸಿಕೊಳ್ಳುವ ಯೋಜನೆಯಲ್ಲಿದ್ದು, ಬೆಲೆ ಏರಿಕೆಗೂ ಕಾರು ಖರೀದಿಸುವ ಗ್ರಾಹಕರನ್ನು ಹೊಸ ಆಯ್ಕೆಯೊಂದಿಗೆ ಗಮನಸೆಳೆಯುತ್ತಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಕೋವಿಡ್ ಎರಡನೇ ಅಲೆಯ ಪರಿಣಾಮ ತಗ್ಗಿರುವ ಹೊಸ ವಾಹನಗಳ ಖರೀದಿಯ್ನು ಸುಧಾರಿಸಲು ವಿವಿಧ ಆಟೋ ಉತ್ಪಾದನಾ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಮಾರುತಿ ಸುಜುಕಿ ಕಂಪನಿಯು ಕೂಡಾ ವಿವಿಧ ಕಾರು ಖರೀದಿಗಾಗಿ ಜೂನ್ ಅವಧಿಯಲ್ಲಿ ವಿವಿಧ ಆಫರ್‌ಗಳನ್ನು ಆಯ್ದ ಕಾರುಗಳಿಗೆ ಘೋಷಣೆ ಮಾಡಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಹೊಸ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿವಿಧ ವಾಹನ ಉತ್ಪಾದನಾ ಕಂಪನಿಗಳು ಆಕರ್ಷಕ ಆಫರ್‌‌ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕವು ಲಭ್ಯವಿರುವುದರಿಂದ ಹೊಸ ಆಫರ್‌ಗಳು ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಿದೆ.

ಜುಲೈ 1ರಿಂದ ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್‌ಬ್ಯಾಕ್ ಮತ್ತು ಇತರೆ ಕೊಡುಗೆಗಳೊಂದಿಗೆ ವಿವಿಧ ರೂಪಾಂತರಗಳಿಗೆ ಅನುಗುಣವಾಗಿ ಘೋಷಣೆ ಮಾಡಿದ್ದು, ಡೀಲರ್ಸ್ ಮಟ್ಟದಲ್ಲೂ ಹಲವಾರು ಕೊಡುಗೆಗಗಳನ್ನು ಪಡೆದುಕೊಳ್ಳಬಹುದು.

Most Read Articles

Kannada
English summary
Maruti Suzuki To Hike Prices Of Cars From July. Read in Kannada
Story first published: Monday, June 21, 2021, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X