ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಮಸೆರಾಟಿ ಕಂಪನಿಯು ತನ್ನ ನ್ಯೂ ಜನರೇಷನ್ ಗ್ರ್ಯಾನ್‌ಟುರಿಸ್ಮೊವನ್ನು ಪ್ರದರ್ಶಿಸಿದೆ, ಇದು ಮಸೆರಾಟಿಯ ಮೊದಲ ಆಲ್-ಎಲೆಕ್ಟ್ರಿಕ್ ವಾಹನವಾಗಿರುತ್ತದೆ. ಮಸೆರಾಟಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸುವುದಕ್ಕೆ ಸಜ್ಜಾಗುತ್ತಿದೆ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಹೊಸ ಗ್ರ್ಯಾನ್‌ಟ್ಯುರಿಸ್ಮೊ ಇವಿ ಮೂಲಮಾದರಿಯ ಪ್ರೋಟೊಟೈಪ್ ಚಿತ್ರಗಳನ್ನು ಪ್ರದರ್ಶಿಸಿದೆ. ಈ ಚಿತ್ರಗಳಲ್ಲಿ ಭಾರೀ ಮರೆಮಾಚುವಿಕೆಯನ್ನು ಹೊಂದಿದೆ. ಆದರೆ ಕೆಲವು ವಿನ್ಯಾಸದ ಅಂಶಗಳನ್ನು ಪ್ರದರ್ಶಿಸಲಾಗಿದೆ. ಸಿಲೂಯೆಟ್ ಅಥವಾ ಬಾಡಿ ಲೈನ್ ಗಳು ಸಾಮಾನ್ಯವಾಗಿ ಮೊದಲ-ಜನರೇಷನ್ ಜಿಟಿಗೆ ಹೋಲುತ್ತವೆ, ಆದರೆ ಆ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಈ ಹೊಸ ಮಸೆರಾಟಿ ಗ್ರ್ಯಾನ್‌ಟುರಿಸ್ಮೊ ಕಾರಿನಲ್ಲಿ ಉದ್ದವಾದ ನಯವಾದ ಬಾನೆಟ್, ವ್ಯಾಪಕವಾದ ಕೂಪ್ ತರಹದ ರೂಫ್‌ಲೈನ್ ಮತ್ತು ಸಣ್ಣ ಬೂಟ್ ಹೊಂದಿದೆ. ಇನ್ನು ಈ ಹೊಸ ಕಾರಿನ ವಿನ್ಯಾಸವು ಅರ್ಧ ದಶಕದ ಹಿಂದೆ ಪ್ರದರ್ಶಿಸಲಾದ ಆಲ್ಫೈರಿ ಕಾನ್ಸೆಪ್ಟ್'ಗೆ ಹೋಲುತ್ತದೆ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಇದರ ಮುಂಭಾಗದ ಸೆಂಟ್ರಲ್ ನಲ್ಲಿ ದೊಡ್ಡ ಏರ್ ಟೆಕ್ ಅನ್ನು ಹೊಂದಿದೆ. ಬಹುಶಃ ಬ್ಯಾಟರಿಗಳನ್ನು ತಂಪಾಗಿಸಲು ಸಹಾಯ ಮಾಡಲು ನೀಡಿರಬಹುದು. ಇದರಲ್ಲಿ ಮಸ್ಕಲರ್ ಬಾನೆಟ್ ಬಾನೆಟ್‌ನೊಂದಿಗೆ ಸಾಮಾನ್ಯವಾಗಿ ದೊಡ್ಡ ಮಸೆರಾಟಿ ಗ್ರಿಲ್‌ನಂತೆ ಕಂಡುಬರುವುತ್ತದೆ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಇನ್ನು ಈ ಕಾರಿನಲ್ಲಿ ಎಂಸಿ 20 ಮತ್ತು ದೊಡ್ಡ ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದೆ. ಇನ್ನು ವ್ಹೀಲ್ ಅರ್ಚಾರ್ ಅನ್ನು ಹೊಂದಿದೆ. ಮಾಸೆರೋಟಿ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರಿನ ಇತರ ಮಾಹಿತಿಗಳು ಬಹಿರಂಗವಾಗಿಲ್ಲ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಈ ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರಿನ ಮೋಟಾರುಗಳ ಸಂಖ್ಯೆ, ಬ್ಯಾಟರಿ ಅಥವಾ ಮೋಟಾರ್ ಪವರ್ ರೇಟಿಂಗ್, 0-100 ಕಿಲೋಮೀಟರ್ ಸ್ಪೀಡ್ ಪಡೆದುಕೊಳ್ಳಲು ಬೇಕಾದ ಸಮಯ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ನ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಭಾರತೀಯ ಮಾರುಕಟ್ಟೆಯಲ್ಲಿ ಮಸೆರಾಟಿ ಕಂಪನಿಯು ತನ್ನ ಹೊಸ ಘಿಬ್ಲಿ ಕಾರನ್ನು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಮಸೆರಾಟಿ ಘಿಬ್ಲಿ ಕಾರು 6 ಟ್ರಿಮ್‌ಗಳಲ್ಲಿ ಮೂರು ರೂಪಾಂತರಗಳನ್ನು ಒಳಗೊಂಡಿದೆ. ಇದು ಹೊಸ ಹೈಬ್ರಿಡ್ ಆವೃತ್ತಿ ಮತ್ತು ಹೆಚ್ಚು ಪವರ್ ಫುಲ್ ಟ್ರೋಫಿಯೊ ರೂಪಾಂತರವನ್ನು ಒಳಗೊಂಡಿದೆ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಘಿಬ್ಲಿ ಕಾರು ಕೇವಲ 4.3 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮಸೆರಾಟಿ ಘಿಬ್ಲಿ ಕಾರಿನಲ್ಲಿ ಹಲವಾರು ಸುಸುರಕ್ಷತಾ ಪೀಚರ್ ಗಳನ್ನು ನೀಡಲಾಗಿದೆ. ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್‌ ಅನ್ನು ಪಡೆದುಕೊಂಡಿದೆ. ವೆಲ್ 2 ಎಡಿಎಎಸ್ - ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ ಅನ್ನು ಪಡೆಯುತ್ತದೆ.

ಹೊಸ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ ಮಸೆರಾಟಿ

ಹೊಸ ಮಸೆರಾಟಿ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರು ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ, ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಬಹಿರಂಗವಾಗಬಹುದು. ಇನ್ನು ಒಟ್ಟಾರೆಯಾಗಿ ಐಷಾರಾಮಿ ಮಸೆರಾಟಿ ಗ್ರ್ಯಾನ್‌ಟುರಿಸ್ಮೊ ಎಲೆಕ್ಟ್ರಿಕ್ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಬಹುದು.

Most Read Articles

Kannada
English summary
2022 Maserati GranTurismo Ev Previewed. Read In Kannada.
Story first published: Monday, June 14, 2021, 21:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X