Just In
- 6 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 7 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 7 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿಯೇ ಉತ್ಪಾದನೆಯಾಗಲಿದೆ ಮರ್ಸಿಡಿಸ್ ಬೆಂಝ್ ಕಂಪನಿಯ ಲಿಮೋಸಿನ್ ಕಾರು
ಮರ್ಸಿಡಿಸ್ ಬೆಂಝ್ ಕಂಪನಿಯು ಈ ವರ್ಷ ಭಾರತದಲ್ಲಿ ಮೇಬ್ಯಾಕ್ ಎಸ್ 580 ಲಿಮೋಸಿನ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರನ್ನು ಪುಣೆಯ ಚಕಾನ್ನಲ್ಲಿರುವ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ಘಟಕದಲ್ಲಿ ಕಂಪನಿಯು ಮೇಬ್ಯಾಕ್ ಲಿಮೋಸಿನ್ ಕಾರಿನ ನಾಕ್ ಡೌನ್ ಯೂನಿಟ್ ಅನ್ನು ಜೋಡಿಸಲಿದೆ. ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್ 580 ಡಬ್ಲ್ಯು 223 ಎಸ್-ಕ್ಲಾಸ್ ಸೆಡಾನ್ ಕಾರ್ ಅನ್ನು ಆಧರಿಸಿದೆ. ಈ ಲಿಮೋಸಿನ್ 5.5 ಮೀಟರ್ ಉದ್ದವನ್ನು ಹೊಂದಿದೆ. ಮೇಬ್ಯಾಕ್ ಎಸ್ 580 ಲಿಮೋಸಿನ್ ಹೊರಭಾಗದಲ್ಲಿ ಡ್ಯುಯಲ್ ಟೋನ್'ನೊಂದಿಗೆ ಕ್ರೋಮ್ ಫಿನಿಶಿಂಗ್ ಹೊಂದಿದೆ.

ಈ ಕಾರಿನಲ್ಲಿರುವ ದೊಡ್ಡ ಬಾಗಿಲುಗಳನ್ನು ಆಟೋಮ್ಯಾಟಿಕ್ ಆಗಿ ಕಂಟ್ರೋಲ್ ಮಾಡಬಹುದು. ಡೋರ್ ಮನ್ ಫೀಚರ್ ನೆರವಿನಿಂದ ಚಾಲಕನು ಕಾರಿನೊಳಗೆ ಕುಳಿತೇ ಡೋರುಗಳನ್ನು ತೆಗೆಯಬಹುದು ಮತ್ತು ಮುಚ್ಚಬಹುದು.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು

ಈ ಕಾರಿನಲ್ಲಿ ಅಡ್ಜಸ್ಟಬಲ್ ಬಕೆಟ್ ಸೀಟ್, ಲೆಗ್ ರೆಸ್ಟ್ ವಿತ್ ಸೀಟ್, ಎಕ್ಸಿಕ್ಯುಟಿವ್ ರೇರ್ ಸೀಟ್, ವುಡ್ ಟ್ರಿಮ್, ಟ್ರೇ ಟೇಬಲ್, ಷಾಂಪೇನ್ ಕೂಲರ್, ಎಲ್'ಸಿಡಿ ಡಿಸ್ ಪ್ಲೇ, ಉದ್ದವಾಗಿರುವ ಕನ್ಸೋಲ್ ಸೇರಿದಂತೆ ಹಲವಾರು ಐಷಾರಾಮಿ ಫೀಚರ್'ಗಳನ್ನು ನೀಡಲಾಗಿದೆ.

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್ 580 ಕಾರಿನಲ್ಲಿ 48 ವೋಲ್ಟ್ ಮೈಲ್ಡ್ ಹೈಬ್ರಿಡ್ ಎಂಜಿನ್'ನ 4.0-ಲೀಟರ್ ಟ್ವಿನ್ ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 496 ಬಿಹೆಚ್ಪಿ ಪವರ್ ಹಾಗೂ 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಕಾರು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ಸ್ಟ್ಯಾಂಡರ್ಡ್ ರೇರ್ ಆಕ್ಸಲ್ ಸ್ಟೀಯರಿಂಗ್ ಹೊಂದಿದೆ. ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು 2020ರ ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷ, ಮರ್ಸಿಡಿಸ್ ಬೆಂಝ್ ಕಂಪನಿಯು 7,893 ಕಾರುಗಳನ್ನು ಮಾರಾಟ ಮಾಡಿದೆ.

ಈ ಪ್ರಮಾಣವು 2019ಕ್ಕೆ ಹೋಲಿಸಿದರೆ 42.75%ನಷ್ಟು ಕಡಿಮೆಯಾಗಿದೆ. 2019ರಲ್ಲಿ ಕಂಪನಿಯು 13,786 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಮಾರಾಟದ ಅಂಕಿಅಂಶಗಳ ಪ್ರಕಾರ 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಕಾರುಗಳ ಮಾರಾಟವು ಅರ್ಧದಷ್ಟು ಕಡಿಮೆಯಾಗಿದೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕರೋನಾ ಸಾಂಕ್ರಾಮಿಕ ರೋಗವು ಕಳೆದ ವರ್ಷದ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಮರ್ಸಿಡಿಸ್ ವರದಿ ಮಾಡಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಲಾಕ್ಡೌನ್ ಕಾರಣದಿಂದಾಗಿ ಕಾರು ಮಾರಾಟವನ್ನು 3 ತಿಂಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಲಾಕ್ಡೌನ್ ತೆರವುಗೊಳಿಸಿದ ನಂತರ ಕೆಲ ತಿಂಗಳುಗಳವರೆಗೆ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿತ್ತಾದರೂ ವರ್ಷದ ಕೊನೆಯ ಮೂರು ತಿಂಗಳಲ್ಲಿ ಕಂಪನಿಯು ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ ಎಂದು ಕಂಪನಿ ಹೇಳಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮುಂದಿನ ಹಣಕಾಸು ವರ್ಷದಿಂದ ಜಿಡಿಪಿ ಸುಧಾರಿಸಲಿದ್ದು, ಜನರ ಖರೀದಿ ಶಕ್ತಿ ಹೆಚ್ಚಾಗಲಿದೆ. ಇದರಿಂದ ಗ್ರಾಹಕರು ದುಬಾರಿ ಕಾರುಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಾರೆ ಎಂಬ ಭರವಸೆಯನ್ನು ಕಂಪನಿ ಹೊಂದಿದೆ. ಕಂಪನಿಯು ಇಕ್ಯೂಎ, ಇಕ್ಯೂಬಿ, ಇಕ್ಯೂ ಹಾಗೂ ಇಕ್ಯೂಎಸ್ ಫ್ಲ್ಯಾಗ್ಶಿಪ್ ಸೆಡಾನ್ಗಳನ್ನು ಇಕ್ಯೂ ಬ್ರಾಂಡ್ನಡಿ ಬಿಡುಗಡೆಗೊಳಿಸಲಿದೆ. ಕಂಪನಿಯು 2025ರ ವೇಳೆಗೆ 25 ಹೊಸ ಪ್ಲಗ್-ಇನ್ ಹೈಬ್ರಿಡ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.