ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಖ್ಯಾತ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ (Mercedes Benz) ತನ್ನ ಇಕ್ಯೂಎಸ್ (EQS) ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಆಧುನಿಕ ಹಾಗೂ ಹಲವು ಸುರಕ್ಷತಾ ಫೀಚರ್ ಗಳನ್ನು ಹೊಂದಿರುವ ಇಕ್ಯೂಎಸ್ ಐಷಾರಾಮಿ ಎಲೆಕ್ಟ್ರಿಕ್ ಕಾರು ಇತ್ತೀಚೆಗೆ EQS ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಭಾಗವಹಿಸಿತ್ತು.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಈ ಕ್ರ್ಯಾಶ್ ಟೆಸ್ಟ್ ನಲ್ಲಿ ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಟೆಸ್ಟ್ ನಲ್ಲಿ ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ವಯಸ್ಕರ ಸುರಕ್ಷತೆಗಾಗಿ 96% ಹಾಗೂ ಮಕ್ಕಳ ಸುರಕ್ಷತೆಗಾಗಿ 91% ನಷ್ಟು ಅಂಕಗಳನ್ನು ಪಡೆದಿದೆ. ಈ ರೇಟಿಂಗ್ ಈ ವರ್ಷ ಯಾವುದೇ ಕಾರು ಸಾಧಿಸಿದ ಅತ್ಯಧಿಕ ರೇಟಿಂಗ್‌ ಆಗಿದೆ. 2,480 ಕೆ.ಜಿ ತೂಕವನ್ನು ಹೊಂದಿರುವ ಈ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಕಾರು ದುರ್ಬಲ ರಸ್ತೆ ಬಳಕೆದಾರರ ವಿಭಾಗದಲ್ಲಿ 76% ಹಾಗೂ ಸುರಕ್ಷತಾ ಸಹಾಯ ವಿಭಾಗದಲ್ಲಿ 80% ನಷ್ಟು ರೇಟಿಂಗ್ ಪಡೆದಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಯುರೋ ಎನ್‌ಸಿಎಪಿ ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಭಾಗವಹಿಸಿದ್ದ ಈ ಕ್ರ್ಯಾಶ್ ಟೆಸ್ಟ್‌ನ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ಟೆಸ್ಟ್ ನಲ್ಲಿ ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ಪಾದಚಾರಿಗಳು ಅಥವಾ ಕಾರುಗಳಂತಹ ಅಡೆ ತಡೆಗಳನ್ನು ಹೊಡೆದಾಗ ಎಲ್ಲಾ ಸುರಕ್ಷತಾ ಬೆಂಬಲ ಪರೀಕ್ಷೆಗಳಲ್ಲೂ 100% ನಷ್ಟು ರೇಟಿಂಗ್ ಪಡೆಯಲು ಸಾಧ್ಯವಾಗಿಲ್ಲ. ಈ ವರ್ಷದ ಆರಂಭದಲ್ಲಿಯೇ ಮರ್ಸಿಡಿಸ್ ಬೆಂಝ್ ಕಂಪನಿಯು ಇಕ್ಯೂಎಸ್ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಕಾರ್ ಅನ್ನು ಅನಾವರಣಗೊಳಿಸಿತ್ತು.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಕಂಪನಿಯು ಈ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಕಾರಿನಲ್ಲಿ ಹೈಪರ್‌ಸ್ಕ್ರೀನ್‌ನೊಂದಿಗೆ ಹಲವಾರು ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಈ ಕಾರಿನಲ್ಲಿ ಟರ್ ಏರ್‌ಬ್ಯಾಗ್‌ನಂತಹ ಸುರಕ್ಷತಾ ಫೀಚರ್ ಅನ್ನು ನೀಡಲಾಗಿದೆ. ಈ ಏರ್ ಬ್ಯಾಗ್ ಅನ್ನು ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರ ನಡುವೆ ಇರಿಸಲಾಗುತ್ತದೆ. ಜೊತೆಗೆ ಫ್ರಂಟ್ ಏರ್‌ಬ್ಯಾಗ್ ಅನ್ನು ನೀಡಲಾಗಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಕಂಪನಿಯು ಈ ಕಾರಿನ ಹಿಂಭಾಗದಲ್ಲಿ ಸೈಡ್ ಏರ್‌ಬ್ಯಾಗ್‌ಗಳನ್ನು ಸಹ ನೀಡಿದೆ. ಈ ಹಿಂಭಾಗದ ಏರ್‌ಬ್ಯಾಗ್‌ಗಳು ಸೈಡ್ ಡಿಕ್ಕಿಯ ಸಂದರ್ಭದಲ್ಲಿ ಹಿಂಬದಿ ಪ್ರಯಾಣಿಕರಿಗೆ ರಕ್ಷಣೆ ನೀಡುತ್ತವೆ. ಇದರ ಹೊರತಾಗಿ ಇಕ್ಯೂಎಸ್ ಎಲೆಕ್ಟ್ರಿಕ್ ಕಾರು ಪ್ರಯಾಣಿಕರ ಸೆಲ್, ಸ್ಪೆಷಲ್ ಡಿಫಾಮೇಶನ್ ಝೋನ್ ಸೇರಿದಂತೆ ಹಲವು ಫೀಚರ್ ಗಳನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಎರಡು ರೀತಿಯ ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುವುದು.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಇವುಗಳಲ್ಲಿ 107.8 ಕಿ.ವ್ಯಾ ಹಾಗೂ 90 ಕಿ.ವ್ಯಾ ಬ್ಯಾಟರಿ ಪ್ಯಾಕ್ ಗಳು ಸೇರಿವೆ. ಈ ಎಲೆಕ್ಟ್ರಿಕ್ ಕಾರ್ ಅನ್ನು EQS 450 ಹಾಗೂ EQS 580 4matic ಎಂಬ ಎರಡು ಮಾದರಿಗಳಲ್ಲಿ ನೀಡಲಾಗುವುದು. EQS 450 ಮಾದರಿಯು 333 ಬಿ‌ಹೆಚ್‌ಪಿ ಪವರ್ ಉತ್ಪಾದಿಸಿದರೆ, EQS 580 4matic ಮಾದರಿಯು ಆಲ್ ವ್ಹೀಲ್ ಡ್ರೈವ್ ಆಗಿದ್ದು, 523 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಈ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 700 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಈ ಎಲೆಕ್ಟ್ರಿಕ್ ಕಾರು ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗೆ ಕಠಿಣ ಪೈಪೋಟಿಯನ್ನು ನೀಡಲಿದೆ. ಇಕ್ಯೂಎಸ್ 450 ಪ್ಲಸ್ ಮೂಲ ಮಾದರಿಯಾಗಿದ್ದು, ಹಿಂದಿನ ಆಕ್ಸಲ್‌ನಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಈ ಕಾರು 324 ಬಿಹೆಚ್‌ಪಿ ಪವರ್ ಹಾಗೂ 550 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಮತ್ತೊಂದೆಡೆ ಇಕ್ಯೂಎಸ್ 580 ಮಾದರಿಯು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಟಾಪ್ ಎಂಡ್ ಮಾದರಿಯಾಗಿದೆ. ಈ ಮಾದರಿಯ ಎರಡೂ ಆಕ್ಸಲ್‌ಗಳಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಈ ಮಾದರಿಯು 509 ಬಿ‌ಹೆಚ್‌ಪಿ ಪವರ್ ಹಾಗೂ 828 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಎಲೆಕ್ಟ್ರಿಕ್ ಸೆಡಾನ್ ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ ಗರಿಷ್ಠ 770 ಕಿ.ಮೀಗಳವರೆಗೆ (WLTP ಸೈಕಲ್) ಚಲಿಸುತ್ತದೆ ಎಂದು ಮರ್ಸಿಡಿಸ್ ಬೆಂಝ್ ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಕಾರು ಕೇವಲ 4.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಸೆಡಾನ್ ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 210 ಕಿ.ಮೀಗಳಾಗಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಕೆಲವು ದಿನಗಳ ಹಿಂದಷ್ಟೇ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಸರಳಗೊಳಿಸಲು ಹೊಸ ಯೋಜನೆಯೊಂದನ್ನು ಜಾರಿಗೊಳಿಸಿತ್ತು. ಕಂಪನಿಯು ಹೊಸ ಮಾದರಿಯ ಮಾರಾಟ ವೈಶಿಷ್ಟ್ಯತೆಗಳನ್ನು ಒಳಗೊಂಡ ರಿಟೇಲ್ ಆಫ್ ದಿ ಫ್ಯೂಚರ್(ROTF) ಎಂಬ ಪ್ಲ್ಯಾಟ್‌ಫಾರಂ ಅನ್ನು ತೆರೆದಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರಂ ಕಾರ್ಯನಿರ್ವಹಣೆಯನ್ನು ಅಧಿಕೃವಾಗಿ ಜಾರಿಗೆ ತಂದಿರುವ ಕಂಪನಿಯು ಈ ಹೊಸ ಪ್ಲ್ಯಾಟ್‌ಫಾರಂ ಮೂಲಕ ತನ್ನ ಐಷಾರಾಮಿ ಕಾರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದೆ. ಕಂಪನಿಯು ಹೊಸ ಪ್ಲ್ಯಾಟ್‌ಫಾರಂ ಮೂಲಕ ಗ್ರಾಹಕರು ಹಾಗೂ ಕಂಪನಿಯ ನಡುವೆ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಹೊಸ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸ್ ಪಾಲುದಾರರ ಕನಿಷ್ಠ ಹಸ್ತಕ್ಷೇಪದೊಂದಿಗೆ ನೇರವಾಗಿ ಕಂಪನಿಯೇ ಗ್ರಾಹಕರೊಂದಿಗೆ ವ್ಯವಹರಿಸಲಿದ್ದು, ಕಾರು ಖರೀದಿಯ ನಂತರ ಮಾರಾಟ ಸೇವೆಗಳು ಯಥಾ ಪ್ರಕಾರವಾಗಿ ನಡೆಯಲಿವೆ. ಹೊಸ ಯೋಜನೆಯಿಂದ ಫ್ರ್ಯಾಂಚೈಸ್ ಪಾಲುದಾರರು ಸ್ಟಾಕ್ ಪ್ರಮಾಣದಿಂದ ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ತಡೆಯಲು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಇದು ಈಗ ಮಾರಾಟ ಪ್ರಕ್ರಿಯೆಗಿಂತ ತುಸು ಭಿನ್ನವಾಗಿರುತ್ತದೆ. ಈಗಿರುವ ಮಾದರಿಯಲ್ಲಿ ವಿತರಕರು ಮರ್ಸಿಡಿಸ್‌ನಿಂದ ಷೇರುಗಳನ್ನು ಖರೀದಿಸಿ ನಂತರ ಗ್ರಾಹಕರಿಗೆ ಕಾರು ಮಾರಾಟ ಮಾಡುತ್ತಾರೆ. ಆದರೆ ಹೊಸ ವಿಧಾನದಲ್ಲಿ ಅಧಿಕೃತ ಮಾರಾಟಗಾರ ಕನಿಷ್ಠ ಹಸ್ತಕ್ಷೇಪದೊಂದಿಗೆ ಹೊಸ ಕಾರುಗಳು ಗ್ರಾಹಕರನ್ನು ತಲುಪಲಿದ್ದು, ಈ ಮೂಲಕ ಕಂಪನಿಯೇ ಇನ್ವಾಯ್ಸ್ ಮಾಡಲಿದೆ.

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್'ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ Mercedes Benz EQS ಎಲೆಕ್ಟ್ರಿಕ್ ಕಾರು

ಅಂದರೆ ಮರ್ಸಿಡಿಸ್ ಬೆಂಝ್ ಕಂಪನಿಯು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಗ್ರಾಹಕರಿಗೆ ಒಂದೇ ಬೆಲೆಗಳನ್ನು ನಿಗದಿಪಡಿಸಲಿದೆ. ಕಾರು ಮಾರಾಟವನ್ನು ಕಂಪನಿಯೇ ನಿರ್ವಹಿಸಿದರೂ ವಿತರಣೆಗಳನ್ನು ಶೋರೂಂಗಳ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ಹೊಸ ಮಾರಾಟ ಸೌಲಭ್ಯದಿಂದ ವಿತರಕರು ದೊಡ್ಡ ಪ್ರಮಾಣದ ಸ್ಟಾಕ್ ಮಾದರಿಗಳಿಂದ ಅನುಭವಿಸುವ ನಷ್ಟವನ್ನು ತಡೆಯಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Most Read Articles

Kannada
English summary
Mercedes benz eqs gets 5 star rating for safety in euro ncap crash test details
Story first published: Monday, December 20, 2021, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X