ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಎಸ್-ಕ್ಲಾಸ್ ಕಾರಿನ ಹೊಸ ಆವೃತ್ತಿಯನ್ನು ಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡುವ ಯೋಜನೆ ಹೊಂದಿದೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ನ್ಯೂ ಜನರೇಷನ್ ಎಸ್-ಕ್ಲಾಸ್ ಆವೃತ್ತಿಯು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.17 ಕೋಟಿ ಬೆಲೆ ಹೊಂದಿದ್ದು, ಹೊಸ ಕಾರು ಬಿಡುಗಡೆಯಾಗುತ್ತಿದಂತೆ ಖರೀದಿಗೆ ಲಭ್ಯವಿರುವ 150 ಯನಿಟ್‌ಗಳಲ್ಲಿ ಶೇ.50 ರಷ್ಟು ಕಾರುಗಳಿಗೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆಯಾಗಿದೆ. ಖರೀದಿಗೆ ಲಭ್ಯವಿರುವ ಹೊಸ ಎಸ್-ಕ್ಲಾಸ್ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾದ ಕಾರು ಆವೃತ್ತಿಯಾಗಿದ್ದು, ಕಂಪನಿಯು ಹೊಸ ಎಸ್-ಕ್ಲಾಸ್ ಕಾರನ್ನು ಭಾರತದಲ್ಲಿ ಸಿಕೆಡಿ ಆಮದು ನೀತಿ ಅಡಿಯಲ್ಲಿ ಅಸೆಂಬ್ಲಿ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಸಿಕೆಡಿ ಆಮದು ಮೂಲಕ ಭಾರತದಲ್ಲಿ ಅಸೆಂಬ್ಲಿ ನಂತರ ಎಸ್-ಕ್ಲಾಸ್ ಕಾರು ಮಾದರಿಗೆ ಮತ್ತಷ್ಟು ಬೇಡಿಕೆ ಹರಿದುಬರಲಿದ್ದು, ದೇಶಿಯ ಮಾರುಕಟ್ಟೆಗಾಗಿ ಹೆಚ್ಚಿನ ಯುನಿಟ್‌ಗಳು ಖರೀದಿಗೆ ಲಭ್ಯವಾಗಲಿವೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಭಾರತದಲ್ಲಿ ಅಸೆಂಬ್ಲಿ ಮಾಡಲಾಗುವ ವಾಹನಗಳಿಗೂ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವ ವಾಹನಗಳ ಬೆಲೆಗೂ ಸಾಕಷ್ಟು ಏರಿಳಿತವಿದ್ದು, ಬೆಲೆ ತಗ್ಗಿಸುವುದಕ್ಕಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ಕೂಡಾ ಈಗಾಗಲೇ ಪ್ರಮುಖ ಕಾರುಗಳನ್ನು ಭಾರತದಲ್ಲಿ ಅಸೆಂಬಲ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಇನ್ನು ಹೊಸ ಎಸ್-ಕ್ಲಾಸ್ ಮಾದರಿಯು ಭಾರತದಲ್ಲಿ ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಎಸ್ 400ಡಿ ಲಾಂಚ್ ಎಡಿಷನ್ (ರೂ. 2.17 ಕೋಟಿ) ಮತ್ತು ಎಸ್ 450 ಲಾಂಚ್ ಎಡಿಷನ್ (ರೂ. 2.19 ಕೋಟಿ) ಎನ್ನುವ ವೆರಿಯೆಂಟ್‌ಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ನವೀಕರಿಸಲಾಗಿರುವ ಹೊಸ ಎಸ್-ಕ್ಲಾಸ್ ಸೆಡಾನ್ ಮಾದರಿಯು ಹಳೆಯ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್, ವಿಸ್ತರಿತ ವೀಲ್ಹ್‌ಬೆಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿ ಮಾಡಬಹುದಾಗಿದ್ದು, ಪ್ರತಿ ಎಂಜಿನ್ ಆಯ್ಕೆಯಲ್ಲೂ 4 ಮ್ಯಾಟಿಕ್ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಎಸ್ 450 ಪೆಟ್ರೋಲ್ ಮಾದರಿಯು 3.0-ಲೀಟರ್(2,999 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ 400ಡಿ ಡೀಸೆಲ್ ಮಾದರಿಯು 3.0-ಲೀಟರ್(2,925 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 700-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಭಾರತದಲ್ಲಿ ಎಸ್-ಕ್ಲಾಸ್ ಆವೃತ್ತಿಯ 150 ಯುನಿಟ್‌ಗಳನ್ನು ಮಾತ್ರ ಮರಾಟಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈ ಮೂಲಕ ಪ್ರತಿ ಗಂಟೆಗೆ 250ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಕಾರು ಮಾರುಕಟ್ಟೆಯಲ್ಲಿನ ಬಿಎಂಡಬ್ಲ್ಯು 7 ಸೀರಿಸ್, ಆಡಿ ಎ8 ಎಲ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರನ್ನು ಕಂಪನಿಯು ಶೀಘ್ರದಲ್ಲೇ ವಿತರಣೆ ಆರಂಭಿಸಲಿದೆ.

Most Read Articles

Kannada
English summary
Mercedes benz only offer 150 units of s-class launch edition in india. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X