ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ಹಲವಾರು ಬದಲಾವಣೆಗಳಾಗಿದ್ದು, ವಾಹನ ಉತ್ಪಾದನೆಯನ್ನು ಪರಿಸರ ಸ್ನೇಹಿಯಾಗಿಸಲು ನಿರಂತರವಾಗಿ ಹೊಸ ಹೊಸ ಸಂಶೋಧನೆಗಳೊಂದಿಗೆ ಹಂತ-ಹಂತವಾಗಿ ಜಾರಿಗೆ ತರಲಾಗುತ್ತಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ವಿಶ್ವಾದ್ಯಂತ ಈಗಾಗಲೇ ಪ್ರಮುಖ ರಾಷ್ಟ್ರಗಳು ಹೊಸ ವಾಹನ ಉತ್ಪಾದನೆಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ವಾಹನವು ಉತ್ಪಾದನಾ ಮಾನದಂಡಗಳಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಾರು ಬದಲಾವಣೆಗಳನ್ನು ತರುತ್ತಿದ್ದು, ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ವಾಹನಗಳ ಜೊತೆ ವಾಹನ ಉತ್ಪಾದನೆಗೆ ಗ್ರೀನ್ ಸ್ಟೀಲ್ ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುತ್ತಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಹೌದು, ವಾಹನ ಉತ್ಪಾದನೆಗೆ ಮುಖ್ಯವಾಗಿ ಬೇಕಿರುವ ಸ್ಟೀಲ್ ಕೂಡಾ ಪರಿಸರ ಪೂರಕವಾಗಿರಬೇಕೆಂಬ ನಿಯಮಗಳು ಜಾರಿಗೆ ಬರುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಯು ಈ ನಿಟ್ಟಿನಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಕಾರ್ಯನಿರ್ವಹಿಸುತ್ತಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಕಾರ್ಬನ್-ಡಿ-ಆಕ್ಸೈಡ್ ಮುಕ್ತವಾಗಿರುವ ಸ್ಟೀಲ್ ಬಳಕೆಗಾಗಿ ಯೋಜನೆ ರೂಪಿಸಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2025ರಿಂದ ಹೊಸ ಕಾರುಗಳನ್ನು ಸಂಪೂರ್ಣವಾಗಿ ಗ್ರೀನ್ ಸ್ಟೀಲ್‌ಗೆ ಬದಲಿಸಿಕೊಳ್ಳುವ ಸಿದ್ದತೆಯಲ್ಲಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಗ್ರೀನ್ ಸ್ಟೀಲ್ ಬಳಕೆಗಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ಹೆಚ್2 ಗ್ರೀನ್ ಸ್ಟೀಲ್ (H2GS) ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಭವಿಷ್ಯದಲ್ಲಿ ಸದ್ದು ಮಾಡಲಿರುವ ಎಲೆಕ್ಟ್ರಿಕ್ ಕಾರು ಮಾದರಿಗಳಿಗಾಗಿ ಸಂಪೂರ್ಣವಾಗಿ ಗ್ರೀನ್ ಸ್ಟೀಲ್ ಅನ್ನೇ ಬಳಕೆ ಮಾಡಲಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಇಂಗಾಲದ ಹೊರಸೂಸುವಿಕೆಯನ್ನು ಎಲ್ಲಿ ಸಾಧ್ಯವೋ ಅಲ್ಲಿ ಕಡಿಮೆ ಮಾಡುವುದಾಗಿ ನಿರ್ಣಯ ಕೈಗೊಂಡಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಪರಿಸರಕ್ಕೆ ಪೂರಕವಾಗಿ ವಾಹನೋದ್ಯಮದಲ್ಲಿ ಬದಲಾವಣೆ ತರುತ್ತಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಸ್ವೀಡನ್ ಮೂಲದ ಹೆಚ್2 ಗ್ರೀನ್ ಸ್ಟೀಲ್ (H2GS) ಕಂಪನಿಯು 2020ರಿಂದ ಪರಿಸರಕ್ಕೆ ಪೂರಕವಾದ ಗ್ರೀನ್ ಸ್ಟೀಲ್ ಉತ್ಪಾದನೆ ಕೈಗೊಂಡಿದ್ದು, 2030ರ ವೇಳೆಗೆ 5 ಮಿಲಿಯನ್ ಟನ್ ಗ್ರೀನ್ ಸ್ಟೀಲ್ ಉತ್ಪಾದನಾ ಗುರಿಹೊಂದಿದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಹೊಸ ಕಾರುಗಳ ಉತ್ಪಾದನೆಗಾಗಿ ಗ್ರೀನ್ ಸ್ಟೀಲ್ ಬಳಕೆ ಮಾಡಲಿದೆ ಮರ್ಸಿಡಿಸ್ ಬೆಂಝ್

ಗ್ರೀನ್ ಸ್ಟೀಲ್ ಮೂಲಕ ಆಟೋ ಉತ್ಪಾದನಾ ವಲಯ ಬಹುದೊಡ್ಡ ಬದಲಾವಣೆ ಕಾರಣವಾಗಲಿರುವ ಹೆಚ್2 ಗ್ರೀನ್ ಸ್ಟೀಲ್ (H2GS) ಕಂಪನಿಯು ಪಳೆಯುಳಿಕೆ-ಇಂಧನ ರಹಿತ ಸ್ಟೀಲ್ ಸಂಸ್ಕರಣೆಗೆ ಒತ್ತು ನೀಡುತ್ತಿದ್ದು, ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುವ ಹೈಡ್ರೋಜನ್ ಅನ್ನು ಗ್ರೀನ್ ಸ್ಟೀಲ್ ಆಗಿ ಮಾರ್ಪಡಿಸಲಿದೆ.

Most Read Articles

Kannada
English summary
Mercedes-Benz To Use Green Steel In The Production Of Its Vehicles From 2025. Read in Kannada.
Story first published: Thursday, June 3, 2021, 0:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X