ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ಮರ್ಸಿಡಿಸ್-ಎಎಂಜಿ ಜಿಟಿ 4-ಡೋರ್ ಕೂಪೆ ಫೇಸ್‌ಲಿಫ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಈ ಹೊಸ ಫೇಸ್‌ಲಿಫ್ಟ್ ಮಾದರಿಯು ಹೊಸ ವೈಶಿಷ್ಟ್ಯಗಳು ಮತ್ತು ಕೆಲವು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

ಮರ್ಸಿಡಿಸ್-ಎಎಂಜಿ ಜಿಟಿ 4-ಡೋರ್ ಕೂಪೆ ಫೇಸ್‌ಲಿಫ್ಟ್ ಕಾರು ಡ್ರೈವಿಂಗ್ ಅಸಿಸ್ಟ್ ಮತ್ತು ಎಂಬಿಯುಎಕ್ಸ್ ಮಲ್ಟಿಮೀಡಿಯಾ ಸಿಸ್ಟಂ ಸೇರಿದಂತೆ ವೈಡ್‌ಸ್ಕ್ರೀನ್ ಕಾಕ್‌ಪಿಟ್ ಅನ್ನು ಸಹ ಹೊಂದಿರುತ್ತದೆ. ಹೊಸ ಫೇಸ್‌ಲಿಫ್ಟ್ ಮಾದರಿಯಲ್ಲಿ ವಿಶಾಲವಾದ ವ್ಹೀಲ್ ಗಳನ್ನು ಸಹ ನೀಡಲಾಗುತ್ತದೆ. ಇವುಗಳಲ್ಲಿ 20 ಇಂಚಿನ ಲೈಟ್-ಅಲಾಯ್ ವ್ಹೀಲ್ ಗಳು ಅಥಾವ 5-ಟ್ವಿನ್ ಸ್ಪೋಕ್ ವಿನ್ಯಾಸದಲ್ಲಿ 21 ಇಂಚಿನ ಖೋಟಾ ವ್ಹೀಲ್ ಗಳು ಸೇರಿವೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

6-ಸಿಲಿಂಡರ್ ಮಾದರಿಗಳಿಗಾಗಿ ಗ್ರಾಹಕರು ಕೆಂಪು-ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳನ್ನು ಸಹ ಸೇರಿಸಬಹುದು. ಈ ಹೊಸ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

ಈ ಮರ್ಸಿಡಿಸ್-ಎಎಂಜಿ ಜಿಟಿ 4-ಡೋರ್ ಕೂಪೆ ಫೇಸ್‌ಲಿಫ್ಟ್ ಕಾರು ಸ್ಟಾರ್ಲಿಂಗ್ ಬ್ಲೂ ಮೆಟಾಲಿಕ್, ಸ್ಟಾರ್ಲಿಂಗ್ ಬ್ಲೂ ಮ್ಯಾಗ್ನೋ ಮತ್ತು ಕ್ಯಾಶ್ಮೀರ್ ವೈಟ್ ಮ್ಯಾಗ್ನೋ ಎಂಬ ಹೊಸ ಮೂರು ಬಣ್ಣಗಳ ಆಯ್ಜೆಗಳನ್ನು ಒಳಗೊಂಡಿವೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

2022ರ ಮರ್ಸಿಡಿಸ್-ಎಎಂಜಿ ಜಿಟಿ 4-ಡೋರ್ ಕೂಪೆಯಲ್ಲಿನ ಒಂದು ದೊಡ್ಡ ಬದಲಾವಣೆಯೆಂದರೆ, ಹಿಂದಿನ ಜಿಟಿ 4-ಡೋರ್ ಮಾದರಿಯಲ್ಲಿ ನಾಲ್ಕು ಜನರ ಬದಲು ಈಗ ಐದು ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

ಈ ಹೊಸ ಕಾರಿನಲ್ಲಿ ಸೆಂಟರ್ ಕನ್ಸೋಲ್ ಅನ್ನು ತೆಗೆದುಹಾಕಿದ್ದರಿಂದ ಹೊಸ ಮಾದರಿಯು ಹಿಂಭಾಗದಲ್ಲಿ ಮೂರು ಜನರು ಕೂರಬಹುದಾದ ಬೆಂಚ್ ಸೀಟ್ ನೊಂದಿಗೆ ಬರುತ್ತದೆ. ಇನ್ನು ಈ ಹೊಸ ಕಾರಿನ ಬೆಂಚ್ ಸೀಟ್ ಅನ್ನು ಸಂಪೂರ್ಣವಾಗಿ ಮಡಚಬಹುದಾಗಿದೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

2022ರ ಮರ್ಸಿಡಿಸ್-ಎಎಂಜಿ ಜಿಟಿ 4-ಡೋರ್ ಕೂಪೆಯಲ್ಲಿ ಕ್ಯಾಬಿನ್ ಯಾಚ್ ಬ್ಲೂ ಮತ್ತು ಡೀಪ್ ವೈಟ್ ಸೇರಿದಂತೆ ಹೊಸ ಬಣ್ಣಗಳ ಆಯ್ಕೆಗಳ ಇಂಟಿರಿಯರ್ ಅನ್ನು ಪಡೆಯುತ್ತದೆ. ಇನ್ನು ಈ ಕಾರಿನಲ್ಲಿ ಮೊದಲ ಇ ಪರ್ಫಾರ್ಮನ್ಸ್ ಹೈಬ್ರಿಡ್‌ಗಳನ್ನು ಪಡೆಯುತ್ತದೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

2022ರ ಮರ್ಸಿಡಿಸ್-ಎಎಂಜಿ 3 4-ಡೋರ್ ಮಾದರಿಯಲ್ಲಿ ಅದೇ3.0-ಲೀಟರ್ ಟರ್ಬೋಚಾರ್ಜ್ಡ್ ಇನ್ ಲೈನ್-ಸಿಕ್ಸ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 367 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅನಾವರಣವಾಯ್ತು 2022ರ ಮರ್ಸಿಡಿಸ್-ಎಎಂಜಿ ಜಿಟಿ 53 4-ಡೋರ್ ಕೂಪೆ

ಇನ್ನು ಇದರ ಜಿಟಿ 53 435 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೊಸ ಕಾರನ್ನು ಈ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೆ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
English summary
2022 Mercedes-AMG GT 53 4-Door Coupe Makes Debut. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X