ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಆಟೋ ಉತ್ಪಾದನಾ ಬಿಡಿಭಾಗಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಏರಿಕೆ ಮಾಡಿ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

2021ರ ಅವಧಿಯಲ್ಲೇ ಈಗಾಗಲೇ ಎಂಜಿ ಕಾರುಗಳ ಬೆಲೆಯಲ್ಲಿ ಎರಡು ಬಾರಿ ಬೆಲೆ ಹೆಚ್ಚಳವಾಗಿದ್ದು, ಇದೀಗ ಮೂರನೇ ಬಾರಿಗೆ ಹೊಸ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಹೊಸ ದರಪಟ್ಟಿಯಲ್ಲಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಕಾರುಗಳ ಬೆಲೆಯು ಸಾಕಷ್ಟು ದುಬಾರಿಯಾಗಿದ್ದು, ಹೆಕ್ಟರ್ ಮತ್ತುಹೆಕ್ಟರ್ ಹೊರತುಪಡಿಸಿ ಗ್ಲೊಸ್ಟರ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾಣೆ ಮಾಡಲಾಗಿಲ್ಲ.

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿವೆ.

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಆಟೋ ಕಂಪನಿಗಳು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಶೇ. 1.50ರಿಂದ ಶೇ.3 ರಷ್ಟು ಬೆಲೆ ಹೆಚ್ಚಳವಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 1 ಲಕ್ಷದಿಂದ ರೂ. 1.50 ಲಕ್ಷದಷ್ಟು ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ. ಹೊಸ ದರಪಟ್ಟಿದಲ್ಲಿ ಎಂಜಿ ಮೋಟಾರ್ ನಿರ್ಮಾಣದ ಹೆಕ್ಟರ್ ಕಾರುಗಳ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ. 1.50 ರಿಂದ ಶೇ.2 ರಷ್ಟು ಹೆಚ್ಚಳ ಮಾಡಿದೆ.

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಎಂಜಿ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳಾದ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಗ್ಲೊಸ್ಟರ್ ಕಾರು ಮಾದರಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಹೊಸ ದರಪಟ್ಟಿಯಲ್ಲಿ ಹೆಕ್ಟರ್ ಸ್ಟ್ಯಾಂಡರ್ಡ್ ಮಾದರಿಯ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಗಳು ರೂ. 28 ಸಾವಿರದಿಂದ ಟಾಪ್ ಎಂಡ್ ಮಾದರಿಯು ರೂ. 43 ಸಾವಿರ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಹಾಗೆಯೇ 7 ಸೀಟರ್ ಹೆಕ್ಟರ್ ಪ್ಲಸ್ ಕಾರು ಮಾದರಿಯ ಬೆಲೆಯ ಬೆಲೆಯಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ದರದಲ್ಲಿ ರೂ. 28 ಸಾವಿರದಿಂದ ರೂ. 43 ಸಾವಿರ ಹೆಚ್ಚಳ ಮಾಡಲಾಗಿದ್ದು, ಹೊಸ ದರಗಳು ಇಂದಿನಿಂದಲೇ ಅನ್ವಯವಾಗಲಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವರ್ಷದಲ್ಲಿ ಮೂರನೇ ಬಾರಿಗೆ ಹೆಚ್ಚಳವಾದ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್ ಕಾರುಗಳ ಬೆಲೆ

ಬೆಲೆ ಬದಲಾವಣೆ ನಂತರ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸದ ಎಂಜಿ ಮೋಟಾರ್ ಕಂಪನಿಯು ಈ ಹಿಂದಿನ ಮಾದರಿಯಲ್ಲಿರುವ ತಾಂತ್ರಿಕ ಅಂಶಗಳನ್ನು ಮುಂದುವರಿಸಿದ್ದು, ದರ ಏರಿಕೆಯಿಂದಾಗಿ ಯುಗಾದಿ ಸಂಭ್ರಮಾಚರಣೆಗಾಗಿ ಕಾರು ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

Most Read Articles

Kannada
English summary
MG Hector & Hector Plus Prices Increase In April. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X