ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಂಡಿರುವ ವಾಹನಗಳ ವಾರಂಟಿ ಅವಧಿಯನ್ನು ಎಂಜಿ ಮೋಟಾರ್ ಕಂಪನಿಯು ಈಗಾಗಲೇ ವಿಸ್ತರಣೆ ಮಾಡಿದ್ದು, ಹೊಸ ಕಾರುಗಳನ್ನು ಹೊರ ತೆಗೆಯಲು ಸಾಧ್ಯವಿಲ್ಲದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಸರ್ವಿಸ್ ಅವಧಿಯು ಪೂರ್ಣಗೊಂಡಿರುವ ವಾಹನಗಳಿಗೆ ಸೇವೆ ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳ ಜವಾಬ್ದಾರಿಯಾಗಿದ್ದು, ಎಂಜಿ ಮೋಟಾರ್ ಕಂಪನಿಯು ವಾಹನಗಳ ತಾಂತ್ರಿಕ ಅಂಶಗಳಿಗೆ ಅಡ್ಡಿಯಾಗದಂತೆ ನಿಗದಿತ ಅವಧಿಯಲ್ಲಿ ಗ್ರಾಹಕರ ಸೇವೆ ಪೂರೈಸಲು ಹೊಸ ಯೋಜನೆಗೆ ಚಾಲನೆ ನೀಡಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ವಾರಂಟಿ ಮುಕ್ತಾಯವಾಗುವುದರಿಂದ ಗ್ರಾಹಕರ ಸೇವೆಗಳು ಕಡಿತವಾಗುವುದನ್ನು ತಪ್ಪಿಸಲು ಗ್ರಾಹಕರಿಗೆ ಹೆಚ್ಚುವರಿಯಾಗಿ ಎರಡು ತಿಂಗಳ ಕಾಲ ವಾರಂಟಿ ಅವಧಿಯನ್ನು ವಿಸ್ತರಿಸಲಾಗಿದ್ದರೂ ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿರುವ ವಾಹನಗಳ ಸೇವೆಯನ್ನು ಪೂರ್ಣಗೊಳಿಸುವುದು ಮತ್ತಷ್ಟು ಸವಾಲಿನ ಕೆಲಸವಾಗಲಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಇದಕ್ಕಾಗಿಯೇ ಕೋವಿಡ್ ಅಬ್ಬರದ ನಡುವೆಯೂ ತನ್ನ ಗ್ರಾಹಕರಿಗೆ ನಿಗದಿತ ಅವಧಿಯ ಸೇವೆ ಪೂರೈಸಲು ಮನೆ ಬಾಗಿಲಿಗೆ ಸೇವೆ ಆರಂಭಿಸಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಕಾರುಗಳ ಸರ್ವಿಸ್ ಪೂರ್ಣಗೊಳಿಸುತ್ತಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಕಾರುಗಳಿಗೆ ಸರ್ವಿಸ್ ಆರಂಭಿಸುವ ಮುನ್ನ ಮತ್ತು ಸರ್ವಿಸ್ ಪೂರ್ಣಗೊಂಡ ನಂತರ ಸಂಪೂರ್ಣವಾಗಿ ಸ್ಯಾನಿಟೈಜ್ ಸಿಂಪರಣೆ ಮಾಡಿಯೇ ಮಾಲೀಕರಿಗೆ ಕಾರನ್ನು ಹಸ್ತಾಂತರಿಸಲಿದ್ದು, ಹೆಚ್ಚುವರಿ ಶುಲ್ಕ ಪಾವತಿಗಾಗಿ ಆನ್‌ಲೈನ್ ಪಾವತಿಗೆ ಸೂಚಿಸಲಾಗುತ್ತಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಗ್ರಾಹಕರ ಸೇವೆಗಳಿಗಾಗಿ ಸಂಪೂರ್ಣವಾಗಿ ಸಂಪರ್ಕ ರಹಿತ ವಿಧಾನಗಳನ್ನು ಅನುಸರಿಲಾಗುತ್ತಿದ್ದು, ಲಾಕ್‌ಡೌನ್ ತೆರವುಗೊಳ್ಳುತ್ತಿರುವುದರಿಂದ ಸರ್ವಿಸ್ ಸೆಂಟರ್‌ಗಳಲ್ಲಿ ವಾಹನಗಳ ದಟ್ಟಣೆ ತಡೆಯಲು ಡೋರ್ ಸ್ಟೆಪ್ ಸರ್ವಿಸ್ ಕಾರ್ಯಕ್ರಮವು ಸಾಕಷ್ಟು ಸಹಕಾರಿಯಾಗುತ್ತಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಹಾಗೆಯೇ ವಾರಂಟಿ ಅವಧಿ ವಿಸ್ತರಣೆಯಾಗಿರುವುದರಿಂದ ವಾರಂಟಿ ಪ್ಯಾಕೇಜ್‌ನಲ್ಲಿರುವ ಸೇವೆಗಳನ್ನು ಗ್ರಾಹಕರು ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಪಡೆದುಕೊಳ್ಳಬಹುದಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ವಾರಂಟಿ ಅವಧಿಯನ್ನು ವಿಸ್ತರಿಸಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಇನ್ನು ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಮತ್ತೆ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮ ಕೈಗೊಂಡು ಉತ್ಪಾದನೆಯನ್ನು ಕೈಗೊಳ್ಳಲಾಗುತ್ತಿದೆ.

ಕೋವಿಡ್ ಎಫೆಕ್ಟ್: ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಆರಂಭಿಸಿದ ಎಂಜಿ ಮೋಟಾರ್

ಸದ್ಯದ ಪರಿಸ್ಥಿತಿಯು ಸುಧಾರಣೆಗೊಳ್ಳಲು ಇನ್ನು ಕೆಲವು ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದ್ದು, ವಾಹನ ಕಂಪನಿಗಳು ಆರ್ಥಿಕ ಸಂಕಷ್ಟದ ನಡುವೆಯೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸಿವೆ.

Most Read Articles

Kannada
English summary
MG India Starts Contactless Doorstep Service Facility. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X