ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ದಕ್ಷಿಣ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುತ್ತಿದೆ. ಎಂಜಿ ಮೋಟಾರ್ ಇಂದು ಮಂಗಳೂರಿನಲ್ಲಿ ಹೊಸ ಇವಿ ಚಾರ್ಜಿಂಗ್ ಕೇಂದ್ರವನ್ನು ತೆರೆದಿದೆ.

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಟಾಟಾ ಪವರ್ ಜೊತೆಗೂಡಿ ದೇಶಾದ್ಯಂತ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುತ್ತಿದೆ. ಎಂಜಿ ಮೋಟಾರ್ ಹಾಗೂ ಟಾಟಾ ಪವರ್ ಜೊತೆಯಾಗಿ ಎಂಜಿ ಡೀಲರ್ ಶಿಪ್'ನಲ್ಲಿ ಮಂಗಳೂರಿನ ಮೊದಲ 60 ಕಿ.ವ್ಯಾ ಸೂಪರ್‌ಫಾಸ್ಟ್ ಪಬ್ಲಿಕ್ ಇವಿ ಚಾರ್ಜಿಂಗ್ ಸ್ಟೇಷನ್ ಅನ್ನು ಆರಂಭಿಸಿವೆ.

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಈ ಚಾರ್ಜಿಂಗ್ ಸ್ಟೇಷನ್ ಎಂಜಿ ಮೋಟಾರ್ ಕಂಪನಿಯ ಯೋಜನೆಯ ಭಾಗವಾಗಿದ್ದು, ದೇಶಾದ್ಯಂತ 50 ಕಿ.ವ್ಯಾ ಹಾಗೂ 60 ಕಿ.ವ್ಯಾ ಡಿಸಿ ಸೂಪರ್‌ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಇದು ಸಾರ್ವಜನಿಕ ಚಾರ್ಜಿಂಗ್ ಕೇಂದ್ರವಾಗಿದ್ದು, ದಿನದ 24 ಗಂಟೆ 7 ದಿನಗಳು ತೆರೆದಿರುತ್ತದೆ. ವೇಗದ ಚಾರ್ಜಿಂಗ್'ಗೆ ಹೊಂದಿಕೊಳ್ಳುವ ಯಾವುದೇ ಕಾರುಗಳನ್ನು ಈ ಕೇಂದ್ರದಲ್ಲಿ ಚಾರ್ಜ್ ಮಾಡಬಹುದು.

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಸದ್ಯಕ್ಕೆ ಝಡ್ಎಸ್ ಇವಿಯನ್ನು ಮಾರಾಟ ಮಾಡುತ್ತಿದೆ. ಈ ಕಾರನ್ನು ಈ ಚಾರ್ಜಿಂಗ್ ಸ್ಟೇಷನ್'ನಲ್ಲಿ 50 ನಿಮಿಷಗಳಲ್ಲಿ 80%ವರೆಗೆ ಚಾರ್ಜ್ ಮಾಡಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಟಾಟಾ ಪವರ್ 270ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ದೇಶದ 26 ನಗರಗಳಲ್ಲಿ ತೆರೆದಿದೆ. ಎಂಜಿ ಮೋಟಾರ್ ಕಂಪನಿಯು ಇದುವರೆಗೆ 10 ನಗರಗಳಲ್ಲಿ 15 ಸೂಪರ್‌ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿರುವುದಾಗಿ ತಿಳಿಸಿದೆ.

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

10 ದಿನಗಳ ಹಿಂದೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಾರ್ಜಿಂಗ್ ಕೇಂದ್ರವನ್ನು ತೆರೆಯಲಾಗಿತ್ತು. ದೆಹಲಿ-ಎನ್‌ಸಿಆರ್‌, ಅಹಮದಾಬಾದ್, ಲಕ್ನೋ, ಆಗ್ರಾ, ಕೊಯಮತ್ತೂರು, ನಾಗ್ಪುರ, ಮುಂಬೈ, ಬೆಂಗಳೂರು ನಗರಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಎಂಜಿಯ 5-ವೇ ಇವಿ ಚಾರ್ಜಿಂಗ್ ಸಿಸ್ಟಂ ಗ್ರಾಹಕರ ಮನೆ / ಕಚೇರಿಯಲ್ಲಿ ಉಚಿತ-ವೆಚ್ಚದ ಎಸಿ ಫಾಸ್ಟ್-ಚಾರ್ಜರ್ ಸ್ಥಾಪನೆ, ಮುಖ್ಯ ಮಾರ್ಗಗಳಲ್ಲಿ ದೊಡ್ಡ ಚಾರ್ಜಿಂಗ್ ನೆಟ್‌ವರ್ಕ್ ಹಾಗೂ ರೋಡ್ ಸೈಡ್ ಅಸಿಸ್ಟೆನ್ಸ್'ನ ಚಾರ್ಜ್-ಆನ್-ದಿ-ಗೋ ಸೌಲಭ್ಯವನ್ನು ಒಳಗೊಂಡಿದೆ.

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಎಂಜಿ ಝಡ್ಎಸ್ ಇವಿ ದೇಶದ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯನ್ನು 10 ಹೊಸ ನಗರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ನಗರಗಳಲ್ಲಿ ರೂ.50,000 ಮುಂಗಡ ಹಣ ನೀಡಿ ಈ ಎಸ್‌ಯುವಿಯನ್ನು ಬುಕ್ ಮಾಡಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದ ಎಂಜಿ ಮೋಟಾರ್

ಕಳೆದ ವರ್ಷ ಈ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿತ್ತು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚೆಗೆ ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಭಾರತದಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ವರ್ಷದ ಭಾರತದಲ್ಲಿ ತನ್ನ ಮೊದಲ ಕಾರನ್ನು ಬಿಡುಗಡೆಗೊಳಿಸಲಿದೆ.

Most Read Articles
 
Kannada
English summary
MG Motor and Tata power starts new electric vehicle charging station in Mangaluru. Read in Kannada.
Story first published: Thursday, January 14, 2021, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X