Just In
- 9 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 10 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 11 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 11 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಲ್ಲಿ ರೆಮಿಡಿಸ್ವಿರ್ ಔಷಧಿ ಪೂರೈಕೆಗೆ SAST ಏಜೆನ್ಸಿ ನಿಯೋಜನೆ
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪೆಷಾಲಿಟಿ ಆಸ್ಪತ್ರೆಗೆ ರೆಟ್ರೊಫಿಟ್ ಹೆಕ್ಟರ್ ಆಂಬ್ಯುಲೆನ್ಸ್ಗಳನ್ನು ದಾನ ಮಾಡಿದ ಎಂಜಿ ಮೋಟಾರ್
ಇಡೀ ದೇಶ ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಹಲವು ವಾಹನ ತಯಾರಕ ಕಂಪನಿಗಳು ಕರೋನಾ ವೈರಸ್ ವಿರುದ್ಧ ಹೋರಾಡಲು ಕೈ ಜೋಡಿಸಿ, ನೆರವನ್ನು ನೀಡಿವೆ.

ಈಗ ಎಂಜಿ ಮೋಟಾರ್ ಇಂಡಿಯಾ ಸಹ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದೆ. ಎಂಜಿ ಮೋಟಾರ್ ಇಂಡಿಯಾ ಹಾಗೂ ನಾಗ್ಪುರದ ಎಂಜಿ ಡೀಲರ್'ಗಳುನಾಗ್ಪುರದ ನಂಗಿಯಾ ಸ್ಪೆಷಾಲಿಟಿ ಆಸ್ಪತ್ರೆಗೆ ಐದು ರೆಟ್ರೊಫಿಟ್ ಹೆಕ್ಟರ್ ಆಂಬ್ಯುಲೆನ್ಸ್ಗಳನ್ನು ನೀಡಿರುವ ಬಗ್ಗೆ ಎಂಜಿ ಮೋಟಾರ್ ಕಂಪನಿಯು ಮಾಹಿತಿ ನೀಡಿದೆ.

ಈ ಹೊಸ ಆಂಬ್ಯುಲೆನ್ಸ್ಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ. ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ರೆಟ್ರೊಫಿಟ್ ಹೆಕ್ಟರ್ ಆಂಬ್ಯುಲೆನ್ಸ್ಗಳು ಪ್ರಯೋಜನಕಾರಿಯಾಗಲಿವೆ.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು

ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಹೆಕ್ಟರ್ ಆಂಬ್ಯುಲೆನ್ಸ್ಗಳು ಅಗತ್ಯವಾದ ಜೀವ ಉಳಿಸುವ ವೈದ್ಯಕೀಯ ಉಪಕರಣಗಳನ್ನು ಹೊಂದಿವೆ. ಈ ಉಪಕರಣಗಳಲ್ಲಿ ಆಟೋ ಲೋಡಿಂಗ್ ಸ್ಟ್ರೆಚರ್, ಸಿಲಿಂಡರ್ ಹೊಂದಿರುವ ಆಕ್ಸಿಜನ್ ಸಪ್ಲೈ ಸಿಸ್ಟಂ, ಐದು ಪ್ಯಾರಾಮೀಟರ್ ಮಾನಿಟರ್ ಹೊಂದಿರುವ ಔಷಧಿ ಕ್ಯಾಬಿನೆಟ್, ಅಗ್ನಿಶಾಮಕ ಯಂತ್ರ, ಸೈರನ್, ಆಂಪ್ಲಿಫೈಯರ್ ಹೊಂದಿರುವ ಎಕ್ಸ್'ಟರ್ನಲ್ ಲೈಟ್ ಬಾರ್, ಬ್ಯಾಟರಿ ಹಾಗೂ ಸಾಕೆಟ್ ಹೊಂದಿರುವ ಇನ್ವರ್ಟರ್'ಗಳನ್ನು ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಎಂಜಿ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ, ಕಂಪನಿಯು ಆಂಬ್ಯುಲೆನ್ಸ್ಗಳನ್ನು ನೀಡಿರುವ ಹಲೋಲ್ ಹಾಗೂ ವಡೋದರಾದ ಆಸ್ಪತ್ರೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಅಗತ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಕಂಪನಿಯು ತನ್ನ ಎಂಜಿ ಸೇವಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದಲ್ಲಿಯೂ ಕಂಪನಿಯು ಈ ರೀತಿಯ ಯೋಜನೆಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.

ಪುಣೆಯ ರೂಬಿ ಹಾಲ್ ಕ್ಲಿನಿಕ್ ಸಹಯೋಗದೊಂದಿಗೆ ಅಮೇರಿಕನ್ ಆಂಕೊಲಾಜಿ ಇನ್ಸ್ಟಿಟ್ಯೂಟ್ ನಂಗಿಯಾ ಸ್ಪೆಷಾಲಿಟಿ ಆಸ್ಪತ್ರೆಯ ಬ್ಯಾನರ್ ಅಡಿಯಲ್ಲಿ ಆಂಬ್ಯುಲೆನ್ಸ್ ಸೌಲಭ್ಯವನ್ನು ನಿರ್ವಹಿಸಲಾಗುವುದು ಎಂದು ಎಂಜಿ ನಾಗ್ಪುರ ಡೀಲರ್'ಗಳ ಮುಖ್ಯಸ್ಥರಾದ ಮಹೇಶ್ ನಂಗಿಯಾ ಹೇಳಿದ್ದಾರೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇತ್ತೀಚಿಗಷ್ಟೇ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಎಂಜಿ ಹೆಕ್ಟರ್ ಹಾಗೂ ಹೆಕ್ಟರ್ ಪ್ಲಸ್ ಎಸ್ಯುವಿಗಳನ್ನು ಸಿವಿಟಿ ಗೇರ್ಬಾಕ್ಸ್ನೊಂದಿಗೆ ಬಿಡುಗಡೆಗೊಳಿಸಿದೆ. ಎಂಜಿ ಹೆಕ್ಟರ್ ಸಿವಿಟಿ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.16.52 ಲಕ್ಷಗಳಾಗಿದೆ.

ಇನ್ನು ಹೆಕ್ಟರ್ ಪ್ಲಸ್ ಸಿವಿಟಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.22 ಲಕ್ಷಗಳಾಗಿದೆ. ಸಿವಿಟಿ ಗೇರ್ಬಾಕ್ಸ್ ಆಯ್ಕೆಯನ್ನು ಕಂಪನಿಯು ತನ್ನ ಸ್ಮಾರ್ಟ್ ಹಾಗೂ ಶಾರ್ಪ್ ಮಾದರಿಗಳಲ್ಲಿ ನೀಡುತ್ತಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಕ್ಟರ್ ಪ್ಲಸ್ನ 6 ಸೀಟುಗಳ ಮಾದರಿಗಳು ಮಾತ್ರ ಸಿವಿಟಿ ಆಯ್ಕೆಯನ್ನು ಹೊಂದಿವೆ. ಇನ್ನು ಎಂಜಿನ್ ಬಗ್ಗೆ ಹೇಳುವುದಾದರೆ 1.5 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಪೆಟ್ರೋಲ್ ಎಂಜಿನ್ 141 ಬಿಹೆಚ್ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 168 ಬಿಹೆಚ್ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.