ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವ ಪರಿಣಾಮ ವೈರಸ್ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಹಲವಾರು ಖಾಸಗಿ ಕಂಪನಿಗಳು ಸಹ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿವೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ವೈದ್ಯಕೀಯ ಸೇವೆಗಳನ್ನು ತಲುಪಿಸುವ ಸರ್ಕಾರಗಳ ಪ್ರಯತ್ನಕ್ಕೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಸಹ ಸಾಧ್ಯವಿರುವ ಕಡೆಗಳಲ್ಲಿ ಕೈಜೋಡಿಸಿವೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ನಿಯಂತ್ರಣಕ್ಕಾಗಿ ಆರ್ಥಿಕ ನೆರವು ನೀಡಿವೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಕೋವಿಡ್ 2ನೇ ಅಲೆಯಿಂದಾಗಿ ಇಡೀ ದೇಶವೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಆರ್ಥಿಕ ಚಟುವಟಿಕೆಗಳಿಲ್ಲದೆ ಭಾರೀ ನಷ್ಟ ಅನುಭವಿಸುತ್ತಿದ್ದರೂ ಸಾಮಾಜಿಕ ಜವಾಬ್ದಾರಿ ಅಡಿ ಹಲವು ವಾಹನ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ರೀತಿಯ ಸಹಕಾರ ಘೋಷಿಸಿವೆ. ಪರಿಸ್ಥಿತಿಗೆ ಅನುಗುಣವಾಗಿ ಹಲವು ಕಾರು ಕಂಪನಿಗಳು ತಮ್ಮ ವಾಹನ ಉತ್ಪಾದನಾ ಘಟಕದಲ್ಲಿ ತಾತ್ಕಾಲಿಕವಾಗಿ ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಅವಕಾಶ ನೀಡಿದ್ದು, ಇನ್ನು ಕೆಲವು ವಾಹನ ಕಂಪನಿಗಳು ಹಣಕಾಸು ನೆರವು ಘೋಷಣೆ ಮಾಡಿವೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಎಂಜಿ ಮೋಟಾರ್ ಕಂಪನಿಯು ಇದೀಗ ಸೋಂಕಿತರಿಗೆ ಎದುರಾಗುತ್ತಿರುವ ಬೆಡ್ ಸಮಸ್ಯೆಗೆ ಸ್ಪಂದಿಸಿದೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಸರ್ಕಾರಿ ಆಸ್ಪತ್ರೆಗಳ ಬೆಡ್ ಸಾಮರ್ಥ್ಯ ಹೆಚ್ಚಳಕ್ಕಾಗಿ ನೆರವಾಗಿರುವ ಎಂಜಿ ಮೋಟಾರ್ ಕಂಪನಿಯು ಸುಮಾರು 200 ಹಾಸಿಗೆಗಳನ್ನು ದೇಣಿಗೆಯಾಗಿ ನೀಡಿದ್ದು, ಅಗತ್ಯವಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಕೆಗೆ ಸಹಕಾರ ನೀಡಿದೆ.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಎಂಜಿ ಮೋಟರ್ ಇಂಡಿಯಾ ಕ್ರೆಡಿಹೆಲ್ತ್‌ನ ಮೂಲಕ ಸುಸ್ತಿರವಾದ ಹಾಸಿಗೆಗಳನ್ನು ದೇಣಿಗೆಯಾಗಿ ನೀಡಿದ್ದು, ಭಾರತೀಯ ಸೇನಾ ಪಡೆಗಳ ಹಾಸಿಗೆ ಸೌಲಭ್ಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಆರ್ಯನ್ ಪೇಪರ್ ಮಿಲ್ಸ್ ಜೊತೆಗೂಡಿ ಗುಣಮಟ್ಟದ ಪ್ಲೈವುಡ್‌ ಒಳಗೊಂಡ ಹಾಸಿಗೆ ಸೌಲಭ್ಯವನ್ನು ಸಿದ್ದಪಡಿಸಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಕಳೆದ ವರ್ಷವು ಸಹ ಕೋವಿಡ್ ಹೆಚ್ಚಳದ ಸಂದರ್ಭದಲ್ಲಿ ಕಾರು ಉತ್ಪಾದನೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಎಂಜಿ ಮೋಟಾರ್ ಕಂಪನಿಯು ಮಾಕ್ಸ್ ಕಂಪನಿಯ ವೆಂಟೆಲೆಟರ್ ಉತ್ಪಾದನೆಯ ಹೆಚ್ಚಳಕ್ಕೂ ಸ್ಥಳಾವಕಾಶ ಒದಗಿಸುತ್ತಿತ್ತು.

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಜೊತೆಗೆ ಗುಜರಾತಿನ ವಡೋದರಾ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಆಧುನಿಕ ಸೌಲಭ್ಯವುಳ್ಳ ಕಾರ್ ಆ್ಯಂಬುಲೆನ್ಸ್ ಸಹ ದೇಣಿಯಾಗಿ ನೀಡಿರುವ ಎಂಜಿ ಮೋಟಾರ್ ಕಂಪನಿಯು ದೇಶಾದ್ಯಂತ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಕರೋನಾ ವಾರಿಯರ್ಸ್‌ಗೆ ಯಾವುದೇ ತೊಂದರೆಯಾಗದಂತೆ ನಿರಂತವಾಗಿ ವೆಹಿಕಲ್ ಸ್ಯಾನಿಟೈಜ್ ಸೌಲಭ್ಯವನ್ನು ಉಚಿತವಾಗಿ ಒದಗಿಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕೋವಿಡ್ ಸಂಕಷ್ಟ: 200 ಹಾಸಿಗೆಗಳನ್ನು ದೇಣಿಗೆ ನೀಡಿದ ಎಂಜಿ ಮೋಟಾರ್

ಕಳೆದ ವಾರವಷ್ಟೇ ಕೋವಿಡ್ ಅಬ್ಬರ ಹೆಚ್ಚಿರುವುದರಿಂದ ದೇವನಂದನ್ ಗ್ಯಾಸ್ ಪ್ರೈ.ಲಿ ಕಂಪನಿ ಜೊತೆಗೂಡಿ ಕಾರು ಉತ್ಪಾದನಾ ಘಟಕದಲ್ಲೇ ಮೆಡಿಕಲ್ ಆಕ್ಸಿಜನ್ ಉತ್ಪಾದನೆಯನ್ನು ತೀವ್ರಗೊಳಿಸಲಾಗಿದ್ದು, ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಸಮುದಾಯದ ಸೇವೆಗೆ ಜೊತೆಯಾಗಿರುವ ಎಂಜಿ ಮೋಟಾರ್ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Most Read Articles

Kannada
English summary
MG Motor Donates 200 Sustainable Beds Via Credihealth. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X