ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಗ್ಲೋಸ್ಟರ್ ಎಸ್‌ಯುವಿಗಳ ಆಯ್ದ ರೂಪಾಂತರಗಳ ಬೆಲೆಯನ್ನು ಹೆಚ್ಚಿಸಿದೆ. ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಈ ವರ್ಷದಲ್ಲಿ ನಾಲ್ಕನೇ ಭಾರೀ ಹೆಚ್ಚಿಸಿದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಈ ವರ್ಷದ ಏಪ್ರಿಲ್‌ನಲ್ಲಿ ಈ ಹಿಂದಿನ ದರವನ್ನು ಏರಿಸಲಾಗಿತ್ತು. ಮೊದಲಿಗೆ ಎಂಜಿ ಗ್ಲೋಸ್ಟರ್ ಎಸ್‌ಯುವಿಯ ಮೂಲ ಸೂಪರ್ ರೂಪಾಂತರವನ್ನು ಹೊರತುಪಡಿಸಿ, ಉಳಿದ ಎಲ್ಲಾ ಟ್ರಿಮ್‌ಗಳು ರೂ.40,000 ವರೆಗೆ ಬೆಲೆ ಏರಿಕೆಯನ್ನು ಪಡೆಯುತ್ತವೆ. ಎಂಜಿ ಗ್ಲೋಸ್ಟರ್ ಎಸ್‌ಯುವಿಯ ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ರೂಪಾಂತರಗಳು ಬೆಲೆ ಏರಿಕೆಯನ್ನು ಪಡೆದಿದೆ. ಈ ಗ್ಲೊಸ್ಟರ್ ಎಸ್‍ಯುವಿಯು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಎಂಜಿ ಗ್ಲೊಸ್ಟರ್ ಎಸ್‌ಯುವಿಯು ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸೌಲಭ್ಯ ಹೊಂದಿದೆ. ಇವುಗಳ ಹೊರತಾಗಿಯೂ ಈ ಎಸ್‌ಯುವಿಯಲ್ಲಿ ಸಾಕಷ್ಟು ಪ್ರೀಮಿಯಂ ಫೀಚರ್ಸ್ ಹಾಗೂ ಎಕ್ವಿಪ್‌ಮೆಂಟ್‌ಗಳಿವೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಈ ಎಸ್‍ಯುವಿಯ ಹೊರಭಾಗದಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್‌, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್‌, ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಒಳಭಾಗದಲ್ಲಿ ಲೆದರ್ ಸೀಟ್, ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್, ಆ್ಯಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, 8 ಇಂಚಿನ ಎಂಐಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾಡಲ್ ಶಿಫ್ಟರ್‌, ಮೂರು ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಮಲ್ಟಿ-ವೇ ಎಲೆಕ್ಟ್ರಾನಿಕ್ ಅಡ್ಜೆಸ್ಟ್ ಫ್ರಂಟ್ ಸೀಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ಹೊಂದಿವೆ,

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಈ ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದ್ದು, ಇದರೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 160 ಬಿಹೆಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಪ್-ಎಂಡ್ ಮಾದರಿಯಲ್ಲಿರುವ 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಮಾದರಿಯು 216 ಬಿಹೆಚ್‌ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಎಂಜಿ ಹೆಕ್ಟರ್ ಎಸ್‍ಯುವಿಯ ಆಯ್ದ ರೂಪಾಂತರಗಳು ರೂ.8,000 ದಿಂದ ರೂ.50,000 ವರೆಗೆ ಬೆಲೆ ಏರಿಕೆಯನ್ನು ಪಡೆದಿವೆ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳ ಡ್ಯುಯಲ್-ಟೋನ್ ಶಾರ್ಪ್ ರೂಪಾಂತರಗಳು ಈಗ ರೂ.50,000 ವರೆಗೆ ದುಬಾರಿಯಾಗಿದೆ. ಇನ್ನು ಸ್ಮಾರ್ಟ್ ಮತ್ತು ಶಾರ್ಪ್ ರೂಪಾಂತರಗಳ ಬೆಲೆಯು ರೂ,8,000 ವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಸ್‍ಯುವಿಯ 2.0 ಲೀಟರ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಎಸ್‍ಯುವಿಯಲ್ಲಿ ಲೈವ್ ಟ್ರಾಫಿಕ್ ಅಲರ್ಟ್‍‍ಗಳು, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ(ಟಿ‍‍ಪಿಎಂಎಸ್), ಜಿಯೋ-ಫೆನ್ಸಿಂಗ್, ತುರ್ತು ಕರೆ, ಸಾಮಾನ್ಯ ಸಹಾಯಕ್ಕಾಗಿ ಸಂಪರ್ಕಿಸಲು ಒಂದು ಬಟನ್ ಮತ್ತು ಪ್ರೀಮಿಯಂ ಗಾನಾ ಆ್ಯಪ್‍ನ ವೈವಿಧ್ಯಮಯ ಮ್ಯೂಸಿಕ್ ಸಂಗ್ರಹ, ಆನ್-ಬೋರ್ಡ್ ನ್ಯಾವಿಗೇಷನ್ ಫೀಚರ್ ಅನ್ನು ಹೊಂದಿದೆ. ಸ್ಮಾರ್ಟ್‍‍ಪೋನ್ ಅಪ್ಲಿಕೇಶನ್ ಮತ್ತು ವಾಯ್ಸ್ ಕಾಮೆಂಡ್‍‍ಗಳ ಮೂಲಕ ಎಸ್‍ಯುವಿ ವಿವಿಧ ಫಿಚರ್ ಗಳನ್ನು ನಿಯಂತ್ರಿಸಬಹುದು.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಇದರಲ್ಲಿ ಎಸಿ, ಸನ್‍‍ರೂಫ್‍, ಟೈಲ್‍‍ಗೇಟ್ ಮತ್ತು ಡೋರ್‍‍ಗಳು ಸೇರಿವೆ. ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಹೊಂದಿರುವ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಫೋಟೇನ್‌ಮೆಂಟ್ ಕಂಟ್ರೋಲ್, ಆಟೋ ಎಸಿ, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಡಿಸ್‍‍ಪ್ಲೇ ಸೌಲಭ್ಯವಿದೆ. ಹೆಕ್ಟರ್ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, ಏರ್‍‍ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೌಲಭ್ಯವನ್ನು ಒದಗಿಸಲಾಗಿದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಕೊನೆಯದಾಗಿ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿಯು ಕೂಡ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿ ಡ್ಯುಯಲ್-ಟೋನ್ ರೂಪಾಂತರಗಳು ರೂ.42,000 ವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್ ಮತ್ತು ಮೊನೊ-ಟೋನ್ ಶಾರ್ಪ್ ರೂಪಾಂತರಗಳ ಬೆಲೆಯು ರೂ.15,000 ವರೆಗೆ ಹೆಚ್ಚಿಸಲಾಗಿದೆ.

ಭಾರತದಲ್ಲಿ ಮತ್ತೆ ಬೆಲೆ ಏರಿಕೆ ಪಡೆದುಕೊಂಡ MG ಕಾರುಗಳು

ಇತ್ತೀಚೆಗೆ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿಯ ಎರಡು ರೂಪಾಂತರಗಳನ್ನು ಸ್ಥಗಿತಗೊಳಿಸಲಾಗಿದೆ. ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿಯಲ್ಲಿ 2+2+2 ಆಸನ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದ.

Most Read Articles

Kannada
English summary
Mg motor india price hike hector golster and hector plus details
Story first published: Friday, October 22, 2021, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X